ಚಿಕ್ಕಮಗಳೂರು –
ಸರಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ದಿಂದಾಗಿ ಶಿಕ್ಷಕರ ಕೊರತೆಯಂತಹ ಸಮಸ್ಯೆಗಳು ಸರಕಾರಿ ಶಾಲೆಗಳಲ್ಲಿ ಸಾಮಾನ್ಯ.ಇಂತಹ ಸಮಸ್ಯೆ ಗಳಿಂದಾಗಿ ಸರಕಾರಿ ಶಾಲೆಗಳು ಬಾಗಿಲು ಮುಚ್ಚುವ ಸ್ಥಿತಿ ನಿರ್ಮಾಣವಾಗಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದ್ದು ಇದಕ್ಕೆ ತಾಜಾ ಉದಾಹರಣೆ ಚಿಕ್ಕಮಗಳೂರು ಜಿಲ್ಲೆಯ ಕಳಸ ಸರ್ಕಾರಿ ಶಾಲೆ. ಮಲೆನಾಡು ಭಾಗದಲ್ಲಿ ಇಂತಹ ಸಮಸ್ಯೆಗಳಿಂದಾಗಿ ಅದೆಷ್ಟೋ ಶಾಲೆಗಳು ಬಾಗಿಲು ಹಾಕಿದ್ದು ಜಿಲ್ಲೆಯ ಕಳಸ ತಾಲೂಕು ವ್ಯಾಪ್ತಿಯ ಮರಸಣಿಗೆ ಗ್ರಾಮ ದಲ್ಲಿರುವ ಸರಕಾರಿ ಹಿರಿಯ ಶಾಲೆಯೊಂದು ಶಿಕ್ಷಕರ ಕೊರತೆಯಿಂದಾಗಿ ಈಗ ಬಾಗಿಲು ಮುಚ್ಚುವ ಸ್ಥಿತಿಯಲ್ಲಿದೆ.
ನೂತನ ತಾಲೂಕು ಕೇಂದ್ರವಾಗಿ ಘೋಷಣೆಯಾಗಿ ರುವ ಜಿಲ್ಲೆಯ ಕಳಸ ತಾಲೂಕು ವ್ಯಾಪ್ತಿಯಲ್ಲಿರುವ ಮರಸಣಿಗೆ ಗ್ರಾಮದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆ ಸುಸಜ್ಜಿತ ಕಟ್ಟಡ ಸೇರಿದಂತೆ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಹೊಂದಿದೆಯಾದರೂ ಶಿಕ್ಷಕರ ಕೊರತೆಯಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿ ಮುಳುಗಿದ್ದಾರೆ. ಈ ಒಂದು ಗ್ರಾಮದಲ್ಲಿರುವ ಈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸದ್ಯ 41 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಇಷ್ಟು ಸಂಖ್ಯೆಯ ಮಕ್ಕಳಿಗೆ ಇದುವರೆಗೆ ಕೇವಲ ಇಬ್ಬರು ಶಿಕ್ಷಕಿಯರು ಪಾಠ ಮಾಡುತ್ತಿದ್ದರು.ಈ ಪೈಕಿ ಆಲ್ಫೋನ್ಸಾ ವಾಸ್ಥಾಲಿನ ಎಂಬ ಶಿಕ್ಷಕಿ ಇತ್ತೀಚೆಗೆ ನಿವೃತ್ತರಾಗಿದ್ದಾರೆ. ಸದ್ಯ ಈ ಶಾಲೆಯಲ್ಲಿ ಓರ್ವ ಶಿಕ್ಷಕಿ ಮಾತ್ರ ಕಾರ್ಯನಿರ್ವಹಿ ಸುತ್ತಿದ್ದು, ಶಾಲೆಯ ಎಲ್ಲ ಕೆಲಸಗಳನ್ನು ಓರ್ವ ಶಿಕ್ಷಿಯೇ ಮಾಡಬೇಕಾಗಿದೆ
ಸದ್ಯ ಸರಕಾರ ಶಾಲೆಗಳ ಆರಂಭಕ್ಕೆ ಇನ್ನೂ ದಿನಾಂಕ ನಿಗದಿ ಮಾಡಿಲ್ಲವಾದರೂ ಶಾಲೆಗಳಲ್ಲಿ ದೈನಂದಿನ ಶಿಕ್ಷಣ ಯಾವಾಗ ಬೇಕಾದರೂ ಆರಂಭವಾಗ ಬಹುದು.ಒಂದು ವೇಳೆ ಸರಕಾರ ಶಾಲೆಗಳ ಆರಂಭಕ್ಕೆ ಆದೇಶಿಸಿದಲ್ಲಿ ಓರ್ವ ಶಿಕ್ಷಕಿ ಎಲ್ಲ ತರಗತಿಗಳಿಗೂ ಪಾಠ ಮಾಡಬೇಕಾಗಿದೆ.ಸದ್ಯ ಮಕ್ಕಳ ದಾಖಲಾತಿಯಿಂದ ಹಿಡಿದು ಎಲ್ಲ ಶೈಕ್ಷಣಿಕ ಚಟುವಟಿಕೆಗಳನ್ನು ಓರ್ವ ಶಿಕ್ಷಕಿಯೇ ನಿರ್ವಹಿ ಸುತ್ತಿದ್ದು, ಈ ಶಿಕ್ಷಿಕಿಗೆ ಕೆಲಸದ ಒತ್ತಡ ಹೆಚ್ಚಾಗಿರು ವುದರಿಂದ ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡಲೇ ಈ ಶಾಲೆಗೆ ಅಗತ್ಯ ಇರುವ ಶಿಕ್ಷಕರನ್ನು ನೇಮಿಸಬೇ ಕೆಂದು ಮರಸಣಿಗೆ ಗ್ರಾ.ಪಂ ಸದಸ್ಯ ವಿನ್ಸೆಂಟ್ ಫುತ್ರಾದೋ ಒತ್ತಾಯಿಸಿದ್ದಾರೆ.
ಇನ್ನೂ ಪ್ರನುಖವಾಗಿ ಬಹುತೇಕ ಮಲೆನಾಡು ಭಾಗದಲ್ಲಿ ಜನರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಸರಕಾರಿ ಶಾಲೆಗಳನ್ನೇ ಆಶ್ರಯಿಸಿದ್ದಾರೆ. ಸೌಲಭ್ಯ ಗಳ ಕೊರತೆಯಿಂದಾಗಿ ಸರಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿರುವ ಈ ಸಂದರ್ಭದಲ್ಲಿ ಅಲ್ಲಲ್ಲಿ ಇರುವ ಸರಕಾರಿ ಶಾಲೆಗಳಿಗೆ ಅಗತ್ಯ ಇರುವ ಮೂಲ ಸೌಕರ್ಯಗಳನ್ನು ಒದಗಿಸಲು ಸರಕಾರ ಮೀನಾ ಮೇಷ ಎಣಿಸಿದರೇ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ಸತ್ಯವಾಗಿದ್ದು ಸಂಬಂಧಿಸಿದ ಇಲಾಖಾಧಿಕಾರಿಗಳು ಇನ್ನಾದರೂ ಈ ಶಾಲೆಗೆ ಶಿಕ್ಷಕರ ನೇಮಕಕ್ಕೆ ಕ್ರಮವಹಿಸದಿದ್ದಲ್ಲಿ ಮಕ್ಕಳ ಪೋಷಕರು ಈ ಶಾಲೆಯ ಮಕ್ಕಳನ್ನು ಹತ್ತಿರದ ಕಳಸ ಪಟ್ಟಣದ ಶಾಲೆಗಳಿಗೆ ದಾಖಲಿಸುತ್ತಾರೆ. ಆಗ ಅನಿವಾರ್ಯವಾಗಿ ಈ ಶಾಲೆಯನ್ನು ಮುಚ್ಚಬೇಕಾ ಗುತ್ತದೆ ಇದಾಗದಂತೆ ಇಲಾಖೆಯ ಅಧಿಕಾರಿಗಳು ಕ್ರಮವಹಿಸುತ್ತಾರೆನಾ ಎಂಬುದನ್ನು ಕಾದು ನೋಡಬೇಕು