ಒಗ್ಗಟ್ಟಿನಲ್ಲಿ ಬಲವಿದೆ ಬನ್ನಿ NPS ಮತ್ತು OPS ನೌಕರರೇ ಒಗ್ಗಟ್ಟಾಗಿ ಹೋರಾಟ ಮಾಡೋಣಾ – ಡಿಸೆಂಬರ್ 19 ನೆನಪು ಇದೇ ಅಲ್ವಾ ಮಾಡು ಇಲ್ಲವೇ ಮಡಿ ಹೋರಾಟ…..

Suddi Sante Desk
ಒಗ್ಗಟ್ಟಿನಲ್ಲಿ ಬಲವಿದೆ ಬನ್ನಿ NPS ಮತ್ತು OPS ನೌಕರರೇ ಒಗ್ಗಟ್ಟಾಗಿ ಹೋರಾಟ ಮಾಡೋಣಾ – ಡಿಸೆಂಬರ್ 19 ನೆನಪು ಇದೇ ಅಲ್ವಾ ಮಾಡು ಇಲ್ಲವೇ ಮಡಿ ಹೋರಾಟ…..

ಬೆಂಗಳೂರು

ಎನ್ ಪಿ ಎಸ್ ವಿಚಾರ ಕುರಿತಂತೆ ರಾಜ್ಯದಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ಅಂತಿಮ ಹಂತಕ್ಕೆ ಬಂದಿದೆ.ಹೌದು ಈಗಾಗಲೇ ರಾಜ್ಯದ ಮೂಲೆ ಮೂಲೆಗಳಲ್ಲಿ ಈಗಾಗಲೇ ಎನ್ ಪಿ ಎಸ್ ಸರ್ಕಾರಿ ನೌಕರರು ಶಕ್ತಿ ಪ್ರದರ್ಶನವನ್ನು ಮಾಡಿ ಸಧ್ಯ ಒಗ್ಗಟ್ಟಾಗಿ ಅಂತಿಮವಾಗಿ ಮಾಡು ಇಲ್ಲವೇ ಮಡಿ ಹೋರಾಟವನ್ನು ಮಾಡಲು  ಡಿಸೆಂಬರ್ 19 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಗೆ ಹೋಗಲು ಸಿದ್ದವಾಗಿದ್ದಾರೆ.ಇದಕ್ಕಾಗಿ ಇಲ್ಲಿಗೆ ಬರಲು ಸರ್ಕಾರಿ ನೌಕರರು ಸಿದ್ದರಾಗಿದ್ದಾರೆ.

ಹೌದು ಅಂದು 2018 ರ ಜನವರಿ 20ಕ್ಕೆ ನೀವೆಲ್ಲರೂ ಲಕ್ಷ ಲಕ್ಷ ನೌಕರರು ಜೊತೆಯಾಗಿ ಬಂದಾಗ ಇಡೀ ಬೆಂಗಳೂರಿಗೆ ಬೆಂಗಳೂರೇ ಬೆರಗಾಗಿತ್ತು, ನಿಮ್ಮ ಶಿಸ್ತು ಬದ್ಧ ಜಾಥಾ ಧರಣಿ ಹಾಗೂ ಹೋರಾಟಕ್ಕೆ ನಾನು ನೋಡಿದಂತೆ ಕರ್ನಾಟಕದ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ  ಹೋರಾಟ ನಡೆದಿರಲಿಲ್ಲ.ಈಗ ಮತ್ತೆ 4 ವರ್ಷಗಳ ಬಳಿಕ ನೀವು ಇಂತಹದ್ದೆ ದೊಡ್ಡ ಹೋರಾಟ ಕೈಗೆತ್ತಿಕೊಂಡಿರುವುದು ನನಗಂತೂ ಸಂತಸ ನೀಡಿದೆ ನಿಮ್ಮ ಅಂತಿಮ ಮಾಡು ಇಲ್ಲವೇ ಮಡಿ ಹೋರಾಟಕ್ಕಾಗಿ ನಾನಂತೂ ಸಿದ್ಧನಾಗಿದ್ದೇನೆ ಕಾತುರತೆಯಿಂದ ನಿಮ್ಮನ್ನು ಕಾಯುತ್ತಿದ್ದೇನೆ.

ಎನ್ ಪಿ ಎಸ್ ಕರಾಳತೆ ನಿಮಗೆ ಮತ್ತೆ ಮತ್ತೆ ವಿವರಿಸುವ ಅಗತ್ಯ ಇಲ್ಲ ಎಂದು ಭಾವಿಸಿಕೊ ಳ್ಳೋತ್ತೇನೆ.ರಾಜ್ಯದಲ್ಲಿ ಎನ್ ಪಿ ಎಸ್ ಯೋಜನೆ ಪ್ರಾರಂಭವಾಗಿ ಬರೋಬ್ಬರಿ 16 ವರ್ಷಗಳೇ ಕಳೆದಿವೆ.6 ವರ್ಷಗಳಿಂದ ಎನ್ ಪಿ ಎಸ್ ರದ್ಧತಿ ಗಾಗಿ ಕಟ್ಟಿಕೊಂಡ ಸಂಘಟನೆ ಅನೇಕ ಐತಿಹಾಸಿಕ ಹೋರಾಟಗಳನ್ನೇ ಮಾಡಿಬಿಟ್ಟಿದೆ.ನೀವೆಲ್ಲರೂ ಪ್ರತೀ ಹೋರಾಟ ದಲ್ಲೂ ಸಂಘಟನೆ ಜೊತೆಗಿದ್ರಿ ಕೇಳದೆ ಜೊತೆಯಾಗಿದ್ದೀರಿ ಯಾಕಂದ್ರೆ ಇದು ನಿಮ್ಮ ಪಿಂಚಣಿಗಾಗಿ ನೀವು ಮಾಡುತ್ತಿರುವ ಹೋರಾಟ. ನಿಮ್ಮ ಬಗ್ಗೆ ನಿಮ್ಮ ಸಹಭಾಗಿತ್ವಕ್ಕೆ ಸಂಘಟನೆಗೆ ಅಭಿಮಾನವಿದೆ.

6 ವರ್ಷಗಳಿಂದ ಅದೇನೋ ನೆಪಗಳನ್ನು, ತೊಂದ್ರೆಗಳನ್ನು ಹೇಳಿಕೊಂಡು ಹೋರಾಟದಲ್ಲಿ ಭಾಗವಹಿಸದೆ ಇರುವವರು ಕೊನೆಯ ಅವಕಾಶ ದಲ್ಲಿ ಕೊನೆಯ ಬಸ್ಸಿಗಾದ್ರೂ ಹೊರಟು ಬಿಡಿ ಬೇಕಾದ್ರೆ ನೀವು ಬಂದೆ ಎನ್ ಪಿ ಎಸ್ ರದ್ದಾಗಿದ್ದು ಎಂದೇ ಘಂಟಾಘೋಷವಾಗಿ ಹೇಳಿಕೊಂಡು ತಿರುಗಿ ನಿಮ್ಮ ಬೇಡಿಕೆ ಈಡೇರಿಸಿಕೊಳ್ಳಿ ಅಷ್ಟೆ ನೇಮಕಾತಿ ಆದೇಶಕ್ಕಾಗಿ ಡೆಲ್ಲಿಗೂ ತೆರಳಲು ಸಿದ್ದರಿರುವ ನೀವು ನಿವೃತ್ತಿ ಪಿಂಚಣಿಗಾಗಿ ಒಂದು ದಿನ ನನ್ನಲ್ಲಿಗೆ ಬರಲು ಅದೆಷ್ಟು ಕಾರಣ ಹುಡು ಕುವಿರಿ.

ಅದೆಷ್ಟೋ ಜನ ನನ್ನಲ್ಲಿ ಬಂದು ಹೋರಾಟ ಮಾಡಿ ಅವರವರ ಬೇಡಿಕೆಗಳನ್ನು ಈಡೇರಿಸಿ ಕೊಂಡಿದ್ದಾರೆ.ನೀವು ಬಹು ಸಂಖ್ಯೆಯಲ್ಲಿದ್ದೀರಿ ಅದ್ಭುತ ಸಂಘಟನೆ ನಿಮ್ಮದಾಗಿದೆ ಅಂದು ಬಂದ ವರು ಮತ್ತೆ ಖಂಡಿತ ಬರುವಿರೆಂಬ ನಂಬಿಕೆ ನನಗಿದೆ ಆದರೆ ಇಂದು ಮಾತ್ರ ಎಲ್ಲರೂ ಬನ್ನಿ ಎಲ್ಲರಿಗೂ ಆಗುವಾಗ ನಮಗೂ ಆಗುತ್ತೆ ಅನ್ನೋ ಮನೋಭಾವನೆ ಬೇಡ ಯಾರೋ ಬಂದು ಹೋರಾಟ ಮಾಡಿ ಪಡೆದ ಪ್ರತಿಫಲ ನಿಮಗೆ ಬೇಕಾ ಅಥವಾ ನಿಮಗಾಗಿ ನೀವೇ ಹೋರಾಟ ಮಾಡುವಿರಾ ಯೋಚಿಸಿ ನನ್ನಲ್ಲಿ ಬರಲು ನಿಮಗಿದು ಕೊನೆಯ ಅವಕಾಶ.. ಮುಂದಿನ ವರ್ಷ ನೋಡೋಣ ಎಂದರೆ ಅವಕಾಶ ಇಲ್ಲ

ಯಾಕಂದ್ರೆ ಇದು ನಿಮ್ಮ ಮಾಡು ಇಲ್ಲವೇ ಮಡಿ ಹೋರಾಟ ಈ ಬಾರಿ ನಿಮ್ಮ ಬೇಡಿಕೆ ಈಡೇರಿ ಸಿಯೇ ನಿಮ್ಮನ್ನು ನಾನು ಇಲ್ಲಿಂದ ಬಿಟ್ಟು ಕಳುಹಿಸಿ ಕೊಡುವುದು ಅದೆಷ್ಟೇ ದೊಡ್ಡ ಸಂಖ್ಯೆಯಲ್ಲಿ ಬಂದ್ರೂ ನಾನು ನಿಮಗೆ ಆಶ್ರಯ ನೀಡುತ್ತೇನೆ ಬೇಡಿಕೆ ಈಡೇರುವವರೆಗೂ ನೀವು ಇಲ್ಲೇ ಇರಲು ನಾನು ಸಕಲ ಸಿದ್ಧತೆ ಮಾಡಿ ಕೊಂಡಿದ್ದೇನೆ.ಬನ್ನಿ…..ಇದೇ ಡಿಸೆಂಬರ್ 19ರಿಂದ ನಿಮ್ಮದೇ ನಿರೀಕ್ಷೆಯಲ್ಲಿದ್ದೇನೆ….ಇಂತಿ ನಿಮ್ಮ….ಸ್ವಾತಂತ್ರ್ಯ ಉದ್ಯಾನವನ ಬೆಂಗಳೂರು

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.