ಬೆಂಗಳೂರು –
ಶಿಕ್ಷಣ ಇಲಾಖೆ ಯಿಂದ ಬೇರೆ ಇಲಾಖೆಗಳಿಗೆ ನಿಯೋಜನೆ ಗೊಂಡ ಶಿಕ್ಷಕರನ್ನು ಮರಳಿ ಇಲಾಖೆಗೆ ಬರುವಂತೆ ಆದೇಶ ವನ್ನು ಮಾಡಲಾಗಿದೆ ಆದರೂ ಕೂಡಾ ಇನ್ನೂ ಶಿಕ್ಷಕರು ಬರುತ್ತಿಲ್ಲ ಎಂಬ ವಿಚಾರ ಇಂದು ವಿಧಾನ ಪರಿಷತ್ ನಲ್ಲಿ ತೀವ್ರ ಸ್ವರೂಪದಲ್ಲಿ ಚರ್ಚೆಯಾಯಿತು.ಹೌದು ಪರಿಷತ್ ನಲ್ಲಿ ಶಿಕ್ಷಕರ ವಿಚಾರ ಇಂದು ಸದ್ದು ಮಾಡಿದೆ.ಬಿಜೆಪಿ ಯ ವಿಧಾನ ಪರಿಷತ್ ಸದಸ್ಯ ಆಯನೂರ ಮಂಜುನಾಥ ಈ ಒಂದು ವಿಚಾರ ಕುರಿತು ಧ್ವನಿ ಎತ್ತಿದ್ದಾರೆ.ಬೇರೆ ಬೇರೆ ಅಭಿವೃದ್ಧಿಯ ಮೇಲೆ ಶಿಕ್ಷಕರು ಕೆಲಸಮಾಡುತ್ತಿದ್ದಾರೆಂದು ಗರಂ ಆಗಿದ್ದು ಕಂಡು ಬಂದಿತು
ಪರಿಷತ್ ನಲ್ಲಿ ಮಾತನಾಡಿದ ಅವರು ಸರ್ಕಾರಿ ಶಾಲೆಯ ಶಿಕ್ಷಕರು ನಿಯೋಜನೆ ಮೇಲೆ ಕೆಲಸ ಮಾಡುತ್ತಿದ್ದಾರೆ.ಅದು ಬೇರೆ ಬೇರೆ ಅಭಿವೃದ್ಧಿಯ ಮೇಲೆ ಕೆಲಸ ಮಾಡುತ್ತಿದ್ದಾರೆ. ಕೋರ್ಟ್ ಆದೇಶವಿದ್ದರೂ ಅಲ್ಲಿಯೇ ಕೆಲಸ ಮಾಡುತ್ತಿ ದ್ದಾರೆ.ನವೆಂಬರ್ ನಲ್ಲಿ ಸುತ್ತೋಲೆ ಹೊರಡಿಸಲಾಗಿದೆ. ಆದ್ರೂ ಯಾಕೆ ಇನ್ನೂ ಅವರನ್ನು ವಾಪಾಸ್ ಕರೆಸಿಲ್ಲ. ಮರಳಿ ಬಾರದ ಶಿಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಆಯನೂರು ಮಂಜುನಾಥ್ ಪ್ರಸ್ತಾಪ ಮಾಡಿದ್ದಾರೆ ಈ ಪ್ರಶ್ನೆಗೆ ಶಿಕ್ಷಣ ಸಚಿವ ನಾಗೇಶ್ ಉತ್ತರ ನೀಡಿದ್ದು ನಿಯೋಜನೆ ಮೇಲೆ ಬೇರೆ ಬೇರೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.ಹಲವರನ್ನು ವಾಪಾಸ್ ಕರೆಸುವ ಕೆಲಸ ಮಾಡಲಾಗಿದೆ.ಉಳಿದವರನ್ನು ಶೀಘ್ರವೇ ವಾಪಾಸ್ ಕರೆಸುವ ಕೆಲಸವಾಗಲಿದೆ ಎಂದರು.