ಬದಲಾವಣೆಯಾಗಲಿದೆ ಶಾಲಾ ಸಮಯ – ಶೀಘ್ರದಲ್ಲೇ ಹೊರಬೀಳಲಿದೆ ಹೊಸ ಸಮಯದ ವೇಳಾಪಟ್ಟಿ…..

Suddi Sante Desk
ಬದಲಾವಣೆಯಾಗಲಿದೆ ಶಾಲಾ ಸಮಯ – ಶೀಘ್ರದಲ್ಲೇ ಹೊರಬೀಳಲಿದೆ ಹೊಸ ಸಮಯದ ವೇಳಾಪಟ್ಟಿ…..

ಬೆಂಗಳೂರು

ಸಂಚಾರದಟ್ಟಣೆ ಸಮಸ್ಯೆ ನಿವಾರಣೆಗೆ ಶಾಲಾ ಸಮಯ ಬದಲಾವಣೆ ಬಗ್ಗೆ ಚರ್ಚೆ ನಡೆಸುವಂತೆ ಹೈಕೋರ್ಟ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಮುಖಂಡರ ಸಭೆ ಕರೆದು ತೀರ್ಮಾನಿಸಲು ಮುಂದಾಗಿದೆ.

ಹೌದು ರಾಜ್ಯಾದ್ಯಂತ ಬಹುತೇಕ ಶಾಲೆಗಳಲ್ಲಿ ಬೆಳಗ್ಗೆ 9 ಗಂಟೆ ಸುಮಾರಿಗೆ ಶಾಲೆಗಳು ಆರಂಭ ವಾಗುತ್ತವೆ.ಶಾಲಾ ಸಮಯವನ್ನು ಅರ್ಧ ಗಂಟೆ ಬೇಗನೆ ಮಾಡಬೇಕೆಂಬ ಚಿಂತನೆ ನಡೆದಿದೆ. ಆದರೆ ಇದರಿಂದ ಅನಾನುಕೂಲವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು ಈ ಒಂದು ಕುರಿತು ಚರ್ಚೆ ಗಳು ಕೂಡಾ ನಡೆದಿವೆ.

ಮಕ್ಕಳು ಬೇಗ ಬೆಳಿಗ್ಗೆ ಬೇಗನೇ ಏಳಬೇಕು, ದೈಹಿಕ ಚಟುವಟಿಕೆಗೆ ಕಡಿಮೆ ಅವಕಾಶ ಸಿಗುತ್ತದೆ ಕಡಿಮೆ ನಿದ್ದೆಯಿಂದ ಆರೋಗ್ಯ ಸಮಸ್ಯೆ ಎದುರಾ ಗಬಹುದು.ಸಂಜೆ ಸಮಯಕ್ಕೆ ಶಾಲೆ ಬಿಡುವುದು ವಿಳಂಬವಾಗುತ್ತದೆ.ಶಾಲಾ ಸಮಯಕ್ಕೆ ಉದ್ಯೋ ಗಿಗಳು ಕಂಪನಿಗಳಿಂದ ಹೊರಬರುವುದರಿಂದ ಸಂಚಾರ ದಟ್ಟಣೆ ಆಗಬಹುದು ಹೀಗಾಗಿ ಶಾಲಾ ಸಮಯ ಬದಲಾಯಿಸಿದರೆ ಅನಾನುಕೂಲವಾ ಗುತ್ತದೆ ಎನ್ನುವ ಕಾರಣಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ.

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಶಾಲೆ ಮತ್ತು ಕೈಗಾರಿಕೆಗಳ ಕಾರ್ಯನಿರ್ವಹಣೆ ಸಮಯ ಬದಲಾವಣೆಗೆ ಹೈಕೋರ್ಟ್ ಸರ್ಕಾರಕ್ಕೆ ಸಲಹೆ ನೀಡಿದೆ.ಸಂಚಾರದಟ್ಟಣೆಗೆಪ್ರಮುಖವಾಗಿ ಕಾರಣವಾಗಿರುವ ಶಾಲೆ,ಕೈಗಾರಿಕೆ,ವಾಣಿಜ್ಯ ಸಂಸ್ಥೆ ಕಂಪನಿಗಳ ಪ್ರತಿನಿಧಿಗಳು ಸೇರಿದಂತೆ ಇತರರ ಸಭೆ ಕರೆದು ಚರ್ಚೆ ನಡೆಸಲು ಕೋರ್ಟ್ ಸೂಚನೆ ನೀಡಿದೆ.

ಈ ನಿಟ್ಟಿನಲ್ಲಿಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಬೆಂಗಳೂರಿನಲ್ಲಿ ಮಾತ್ರ ಸಮಯ ಬದಲಾವಣೆ ಮಾಡಬೇಕೆ ಅಥವಾ ರಾಜ್ಯಾದ್ಯಂತ ಶಾಲೆಗಳ ಸಮಯ ಬದಲಾವಣೆ ಮಾಡಬೇಕೆಂ ಬುದರ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳ ಲಾಗುವುದು ಎಂದು ಇಲಾಖೆಯ ಅಧಿಕಾರಿ ಗಳು ಹೇಳಿದ್ದಾರೆ.

ಅನಿಲ್ ಕುಮಾರ್ ಉಳವನ್ನವರ ,ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.