This is the title of the web page
This is the title of the web page

Live Stream

April 2023
T F S S M T W
 12345
6789101112
13141516171819
20212223242526
27282930  

| Latest Version 8.0.1 |

State News

ಲಿಖಿತ ಭರವಸೆ ಕೊಟ್ಟರೆ ಮಾತ್ರ ರಾಜ್ಯ ಸರ್ಕಾರಿ ನೌಕರರ ಮುಷ್ಕರ ವಾಪಸ್ ನೌಕರರ ಬೇಡಿಕೆ –ಡೆಡ್ ಲೈನ್ ಗೆ ಕೊನೆಯ ದಿನ ಹೋರಾಟಕ್ಕೆ ಸಿದ್ದರಾಗುತ್ತಿದ್ದಾರೆ ನಾಡಿನ ಸರ್ಕಾರಿ ನೌಕರರು


ಬೆಂಗಳೂರು

7ನೇ ವೇತನ ಆಯೋಗ ಹಳೆ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಮಾರ್ಚ್ 1 ರಿಂದ ರಾಜ್ಯದಲ್ಲಿ ರಾಜ್ಯ ಸರ್ಕಾರಿ ನೌಕರರು ಪ್ರತಿಭಟನೆ ಮಾಡುತ್ತಿ ದ್ದಾರೆ ಈಗಾಗಲೇ ಈ ಕುರಿತಂತೆ ರಾಜ್ಯ ಸರ್ಕಾರಕ್ಕೆ ಡೆಡ್ ಲೈನ್ ನೀಡಿದ್ದು ಸಮಯಾವಕಾಶ ಮುಗಿ ಯುತ್ತಾ ಬರುತ್ತಿದ್ದರೂ ಕೂಡಾ ಮುಖ್ಯಮಂತ್ರಿ ಈ ಕುರಿತಂತೆ ಯಾರೊಬ್ಬರ ಜೊತೆಯಲ್ಲಿ ಮಾತನಾ ಡುತ್ತಿಲ್ಲ ನೋಡುತ್ತಿಲ್ಲ

ಹೀಗಾಗಿ ಕರ್ನಾಟಕದ ಸರ್ಕಾರಿ ನೌಕರರು ಮಾರ್ಚ್ 1ರಿಂದ ಉದ್ಯೋಗಕ್ಕೆ ಗೈರು ಹಾಜ ರಾಗುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಸಿದ್ದರಾಗುತ್ತಿದ್ದಾರೆ.ವಿವಿಧ ಬೇಡಿಕೆಗಳ ಈಡೇರಿ ಕೆಗಾಗಿ ಆಗ್ರಹಿಸಿ ಸರ್ಕಾರಿ ನೌಕರರು ಈ ಒಂದು ಮುಷ್ಕರವನ್ನು ನಡೆಸುತ್ತಿದ್ದು ಮುಷ್ಕರದ ಕರೆ ವಾಪಸ್ ಪಡೆಯಲು ಸರ್ಕಾರ ಲಿಖಿತವಾಗಿ ಭರವಸೆ ನೀಡಬೇಕು ಎಂದು ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಹೇಳಿದ್ದಾರೆ.

 

 

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಅವರು ಮಾತನಾಡಿ 7ನೇ ವೇತನ ಆಯೋಗದ ಮಧ್ಯಂತರ ವರದಿ ಅನು ಷ್ಠಾನದ ಬಗ್ಗೆ ಸರ್ಕಾರ ಆದೇಶ ಹೊರಡಿಸಿಬೇಕು ಈ ಕುರಿತಂತೆ ಲಿಖಿತ ಭರವಸೆ ಬೇಕು ಹಾಗೆ ಹಳೆ ಪಿಂಚಣಿ ಯೋಜನೆ ಕುರಿತಂತೆಯೂ ಕೂಡಾ ಲಿಖಿತವಾಗಿ ನಮಗೆ ಆದೇಶ ಬೇಕು ಅಂದಾಗ ಮಾತ್ರ ಮಾರ್ಚ್ 1ರಿಂದ ಕರೆ ನೀಡಿರುವ ಅನಿರ್ಧಿ ಷ್ಟಾವಧಿ ಮುಷ್ಕರಕ್ಕೆ ವಾಪಸ್ ಪಡೆದುಕೊಳ್ಳಲಾ ಗುತ್ತದೆ ಎಂದರು.

ಕರ್ನಾಟಕ ಸರ್ಕಾರದ ಮುಂದೆ ಈಗಾಗಲೇ ಜುಲೈ 1, 2022ರಿಂದ ಜಾರಿಗೆ ಬರುವಂತೆ ಶೇ 40ರಷ್ಟು ವೇತನ ಹೆಚ್ಚಳ ಸೌಲಭ್ಯ ಒದಗಿಸಬೇಕು ಎನ್‌ಪಿ ಎಸ್ ರದ್ದುಗೊಳಿಸಬೇಕು,ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು ಎಂಬ ಬೇಡಿಕೆಗಳನ್ನು ಇಡಲಾಗಿದೆ.

ಬಜೆಟ್‌ ಭಾಷಣದಲ್ಲಿ 7ನೇ ವೇತನ ಆಯೋಗದ ಬಗ್ಗೆ ಸರ್ಕಾರ ಯಾವುದೇ ಪ್ರಸ್ತಾವನೆ ಮಾಡಿಲ್ಲ ಎಂದು ರಾಜ್ಯ ಸರ್ಕಾರಿ ನೌಕರರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ 2023-24ನೇ ಸಾಲಿನ ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.7ನೇ ವೇತನ ಆಯೋಗದಿಂದ ಶೀಘ್ರ ಮಧ್ಯಂತರ ವರದಿ ಪಡೆದು ಜಾರಿ ಮಾಡು ವಂತೆ ಹಿಂದಿನಿಂದಲೂ ಒತ್ತಾಯಿಸುತ್ತಾ ಬರಲಾ ಗಿದೆ.

2023-4ನೇ ಸಾಲಿನ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ನಿರೀಕ್ಷೆ ಮಾಡಲಾಗಿತ್ತು ಆದರೆ ಅದು ಹುಸಿಯಾಗಿದೆ ಆದ್ದರಿಂದ ನೌಕರರು ಅನಿವಾ ರ್ಯವಾಗಿ ಕರ್ತವ್ಯಕ್ಕೆ ಗೈರಾಗುವ ಮೂಲಕ ಮುಷ್ಕರ ನಡೆಸಲು ಮುಂದಾಗಿದ್ದೇವೆ ಎಂದರು.

 

 

ಇನ್ನೂ ಈ ಒಂದು ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿಯಿಂದ ವಿಧಾನಸೌಧದ ತನಕ ಎಲ್ಲಾ ನೌಕರರು ಮಾರ್ಚ್ 1ರಿಂದ ಕರ್ತವ್ಯಕ್ಕೆ ಗೈರಾಗುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರ ದಲ್ಲಿ ಪಾಲ್ಗೊಳ್ಳುವ ಕುರಿತು ಒಮ್ಮತದ ತೀರ್ಮಾ ನವನ್ನು ಕೈಗೊಳ್ಳಲಾಗಿದೆ ಎಂದರು.

 

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಅವರು ಮಾತನಾಡಿ 7ನೇ ವೇತನ ಆಯೋಗದ ಮಧ್ಯಂತರ ವರದಿ ಅನುಷ್ಠಾನದ ಬಗ್ಗೆ ಸರ್ಕಾರ ಆದೇಶ ಹೊರಡಿಸಿಬೇಕು ಈ ಕುರಿತಂತೆ ಲಿಖಿತ ಭರವಸೆ ಬೇಕು ಹಾಗೆ ಹಳೆ ಪಿಂಚಣಿ ಯೋಜನೆ ಕುರಿತಂತೆಯೂ ಕೂಡಾ ಲಿಖಿತವಾಗಿ ನಮಗೆ ಆದೇಶ ಬೇಕು ಅಂದಾಗ ಮಾತ್ರ ಮಾರ್ಚ್ 1ರಿಂದ ಕರೆ ನೀಡಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ವಾಪಸ್ ಪಡೆದುಕೊಳ್ಳಲಾಗುತ್ತದೆ ಎಂದರು.ಕರ್ನಾಟಕ ಸರ್ಕಾರದ ಮುಂದೆ ಈಗಾಗಲೇ ಜುಲೈ 1, 2022ರಿಂದ ಜಾರಿಗೆ ಬರುವಂತೆ ಶೇ 40ರಷ್ಟು ವೇತನ ಹೆಚ್ಚಳ ಸೌಲಭ್ಯ ಒದಗಿಸಬೇಕು. ಎನ್‌ಪಿಎಸ್ ರದ್ದುಗೊಳಿಸಬೇಕು, ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು ಎಂಬ ಬೇಡಿಕೆಗಳನ್ನು ಇಡಲಾಗಿದೆ. ಬಜೆಟ್‌ ಭಾಷಣದಲ್ಲಿ 7ನೇ ವೇತನ ಆಯೋಗದ ಬಗ್ಗೆ ಸರ್ಕಾರ ಯಾವುದೇ ಪ್ರಸ್ತಾವನೆ ಮಾಡಿಲ್ಲ ಎಂದು ರಾಜ್ಯ ಸರ್ಕಾರಿ ನೌಕರರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ 2023-24ನೇ ಸಾಲಿನ ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 7ನೇ ವೇತನ ಆಯೋಗದಿಂದ ಶೀಘ್ರ ಮಧ್ಯಂತರ ವರದಿ ಪಡೆದು ಜಾರಿ ಮಾಡುವಂತೆ ಹಿಂದಿನಿಂದಲೂ ಒತ್ತಾಯಿಸುತ್ತಾ ಬರಲಾಗಿದೆ.2023-4ನೇ ಸಾಲಿನ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ನಿರೀಕ್ಷೆ ಮಾಡಲಾಗಿತ್ತು ಆದರೆ ಅದು ಹುಸಿಯಾಗಿದೆ ಆದ್ದರಿಂದ ನೌಕರರು ಅನಿವಾರ್ಯವಾಗಿ ಕರ್ತವ್ಯಕ್ಕೆ ಗೈರಾಗುವ ಮೂಲಕ ಮುಷ್ಕರ ನಡೆಸಲು ಮುಂದಾಗಿದ್ದೇವೆ” ಎಂದರು.

 


Suddi Sante Desk

Leave a Reply