ಬೆಂಗಳೂರು –
ಕಳೆದ ಹಲವಾರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಶಿಕ್ಷಕರ ಜ್ವಲಂತ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಸಲುವಾಗಿ ನವಂಬರ್ 7- 11-2021 ರಂದು ಸರ್ಕಾರಿ ನೌಕರರ ಸಂಘದ ವತಿಯಿಂದ ಮಹತ್ವದ ಸಭೆಯನ್ನು ಕರೆಯಲಾಗಿದೆ.ಷಡಾಕ್ಷರಿ ಅವರ ನೇತೃತ್ವದಲ್ಲಿ ಕರೆಯಲಾಗಿ ರುವ ಈ ಒಂದು ಸಭೆಗೆ ಈಗಾಗಲೇ ನಾಡಿನ ಬಹುತೇಕ ಶಿಕ್ಷಕರು ಬರಲು ಒಪ್ಪಿಕೊಂಡಿದ್ದಾರೆ.ಸಧ್ಯ ದೀಪಾವಳಿ ಹಬ್ಬದ ಸಂಭ್ರಮ ದಲ್ಲಿರುವ ಶಿಕ್ಷಕರು ಹಬ್ಬಗಳನ್ನು ಮುಗಿಸಿಕೊಂಡು ಬೆಂಗಳೂರಿನತ್ತ ಹೋಗಲು ಈಗಾಗಲೇ ತೀರ್ಮಾನ ತಗೆದುಕೊಂಡಿದ್ದಾರೆ.ಇವರು ಈ ಹಿಂದೆ ಹೇಳಿದಂತೆ ಅಖಾಡಕ್ಕೆ ಇಳಿದಿದ್ದು ಹೀಗಾಗಿ ಮಹತ್ವದ ಈ ಒಂದು ಸಭೆಯಲ್ಲಿ ಶಿಕ್ಷಕರು ಪಾಲ್ಗೊಂಡು ತಮ್ಮ ಸಮಸ್ಯೆ ಗಳಿಗೆ ತಾರ್ಕಿಕ ಅಂತ್ಯ ಹಾಡಲು ಕಂಡುಕೊಳ್ಳಲು ಮುಂದಾಗಿದ್ದಾರೆ
ಇದು ಒಂದು ವಿಚಾರ ವಾದರೆ ಈ ಒಂದು ಸಭೆಗೆ ಯಾವುದೇ ಕಾರಣಕ್ಕೂ ಹೋಗದಂತೆ ಶಿಕ್ಷಕರಿಗೆ ಸಂಘಟನೆ ಯೊಂದರ ನಾಯಕರು ತಾಕೀತು ಮಾಡಿದ್ದಾರಂತೆ.ಹೀಗಾಗಿ ಗೊಂದಲದಲ್ಲಿ ನಾಡಿನ ಶಿಕ್ಷಕರು ಇದ್ದಾರೆ.ನಮ್ಮ ಸಮಸ್ಯೆ ಗಳ ಕುರಿತು ಚರ್ಚೆ ಮಾಡಲು ಷಡಾಕ್ಷರಿ ಅವರೇ ಮಹತ್ವದ ಸಭೆಯನ್ನು ಕರೆದಿದ್ದಾರೆ ಹೀಗಾಗಿ ಈ ಒಂದು ಸಭೆ ತುಂಬಾ ಮಹತ್ವದ್ದಾಗಿದೆ ಹೋಗಬೇಕು ಎಂದು ಕೊಂಡಿದ್ದ ಶಿಕ್ಷಕರಿಗೆ ಸಂಘಟನೆಯ ನಾಯಕರು ಬ್ರೇಕ್ ಹಾಕಿದ್ದಾರೆ.
ಸರ್ಕಾರಿ ನೌಕರರ ಸಂಘ ಏರ್ಪಡಿಸಲಾಗಿರುವ ಈ ಒಂದು ನಿರ್ಣಾಯಕ ಮಹತ್ವದ ಸಭೆಗೆ ಬರುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಶಂಭುಲಿಂಗನ ಗೌಡ ಪಾಟೀಲರವರಿಗೆ ರಾಜ್ಯಾಧ್ಯಕ್ಷರಾದ ಷಡಾಕ್ಷರಿ ಅವರು ಆಹ್ವಾನ ನೀಡಿದ್ದು ಇದೆಲ್ಲದರ ನಡುವೆ ಈಗ ಶಿಕ್ಷಕರು ಗೊಂದಲದಲ್ಲಿ ಇದ್ದಾರೆ ಅವರು ಬಾ ಅಂತಾರೆ ಇವರು ಬೇಡ ಅಂತಾರೆ ಏನು ಮಾಡಬೇಕು ಎಂಬ ಗೊಂದಲದಲ್ಲಿದ್ದು ದಾರಿ ಕಾಣದಂತಾಗಿದೆ ಎಂಬ ಮಾತು ಕೇಳಿ ಬರುತ್ತಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು