ಹುಬ್ಬಳ್ಳಿ –
ನಿದ್ದೆಗೆಟ್ಟು ಬೆಳಗಿನ ಜಾವ ಡೂಟಿ ಗೆ ಬಂದ ಡ್ರೈವರ್ ಗೆ ಕೈಕೊಟ್ಟ ಚಿಗರಿ – ಹುಬ್ಬಳ್ಳಿಯಲ್ಲಿ ಬಿಡಿಯಾಗಿ ಡಿಪೋ ಸೇರಿದ ಬಸ್ ಇದ್ಯಾವುದು ಡಿಸಿಯವರ ಗಮನಕ್ಕೆ ಬರುತ್ತಿಲ್ಲವೇ
ಹೌದು ದಿನದಿಂದ ದಿನಕ್ಕೆ ಚಿಗರಿ ಬಸ್ ಗಳ ಪರಸ್ಥಿತಿ ಕೈಮೀರಿ ಹೊಗುತ್ತಿದೆ.ಆರಂಭಗೊಂಡು ಐದಾರು ವರ್ಷಗಳು ಕಳೆದಿದ್ದು ಸಧ್ಯ ಅದೇ ಬಸ್ ಗಳು ಅವಳಿ ನಗರದ ಮಧ್ಯೆ ಸಂಚಾರವನ್ನು ಮಾಡುತ್ತಿದ್ದು ಈ ನಡುವೆ ಬಸ್ ಗಳ ಸರಿಯಾದ ನಿರ್ವಹಣೆ ಮತ್ತು ವ್ಯವಸ್ಥೆ ಇಲ್ಲದ ಪರಿಣಾಮ ವಾಗಿ ಸಧ್ಯ ಚಿಗರಿ ಬಸ್ ಗಳ ಪರಸ್ಥಿತಿ ಸರಿಯಾ ಗಿಲ್ಲ ಎಂಬ ಮಾತುಗಳು ಬಸ್ ನ್ನು ನೋಡಿದರೆ ಕಂಡು ಬರುತ್ತದೆ.
ಹೀಗಿರುವಾಗ ಡ್ರೈವರ್ ಗಳು ಕೂಡಾ ಬೇಸತ್ತಿದ್ದು ಬಸ್ ಗಳ ವ್ಯವಸ್ಥೆಯನ್ನು ನೋಡಿ ಸುಧಾರಣೆ ಮಾಡಬೇಕಾದ ಡಿಸಿಯವರು ಕಣ್ಮುಚ್ಚಿ ಕುಳಿತಂತೆ ಕಾಣುತ್ತಿದೆ.ಪ್ರತಿದಿನ ಡ್ರೈವರ್ ಗಳ ಕಾರ್ಯವೈಖ ರಿಯನ್ನು ಬಸ್ ಗಳಲ್ಲಿ ಸಂಚಾರ ಮಾಡಿ ತಿಳಿದು ಕೊಳ್ಳುತ್ತಿರುವ ಡಿಸಿ ಯವರಿಗೆ ಇದ್ಯಾವುದು ಕಾಣುತ್ತಿಲ್ಲವೇ ಕಂಡರು ಕಾಣದಂತೆ ಇದ್ದಾರೆ ಎಂಬ ಮಾತುಗಳು ನಿಜ.
ಇನ್ನು ಇದನ್ನು ನೋಡಿದ್ದರೆ ಗಮನಕ್ಕೆ ಬಂದಿದ್ದರೆ ಅವರು ಮೊದಲು ಹಾಳಾಗುತ್ತಿರುವ ಚಿಗರಿ ಬಸ್ ಗಳನ್ನು ಸರಿಯಾಗಿ ಮಾಡಿಸುತ್ತಿದ್ದರು ಆದರೆ ಅದ್ಯಾವುದು ಆಗುತ್ತಿಲ್ಲ ಹೀಗಾಗಿ ಇದ್ದ ಪರಸ್ಥಿತಿ ಯಲ್ಲಿ ಚಾಲಕರು ಕರ್ತವ್ಯವನ್ನು ಮಾಡುತ್ತಿದ್ದು ಇನ್ನು ಜನರಲ್ ಡೂಟಿ ಮಾಡುವ ಚಾಲಕರು ನಿದ್ದೆಗೆಟ್ಟು ಬೆಳಗಿನ ಬಂದು ಒಂದು ಎರಡು ಟ್ರೀಪ್ ಮಾಡುವಾಗ ಬಸ್ ಗಳು ಕೈಕೊಡುತ್ತಿದ್ದು ಇದಕ್ಕೆ ಪ್ರತಿದಿನ ರಸ್ತೆಯಲ್ಲಿ ಮತ್ತು ಡಿಪೋ ಗೆ ಬರುವ ಬಸ್ ಗಳೇ ಸಾಕ್ಷಿಯಾಗಿದ್ದು
ನಿದ್ದೆಗೆಟ್ಟು ಬೆಳಗಿನ ಜಾವ ಡೂಟಿ ಮಾಡಲು ಬರುವ ಡ್ರೈವರ್ ಗಳಿಗೆ ಬಸ್ ಗಳು ಪದೇ ಪದೇ ಕೈಕೊಡುತ್ತಿದ್ದು ರಸ್ತೆಯಲ್ಲಿಯೇ ಬಿಡಿಯಾದರೆ ಜನರನ್ನು ಇಳಿಸಿ ಡಿಪೋ ಗೆ ಹೋಗುವುದೇ ದೊಡ್ಡ ಕೆಲಸವಾಗಿದ್ದು ಇನ್ನಾದರು ಕಂಡು ಕಾಣ ದಂತೆ ಇರುವ ಡಿಸಿಯವರೇ ಈ ಒಂದು ವ್ಯವಸ್ಥೆ ಯನ್ನು ಒಮ್ಮೆ ನೋಡಿ ಸುಧಾರಣೆ ಮಾಡಿ ಈ ಒಂದು ನಿರೀಕ್ಷೆಯಲ್ಲಿ ಎರಡು ಡಿಪೋ ಗಳ ಚಾಲಕರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..