ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರ ವೇತನ ಪರಿಷ್ಕ್ರರಣೆ ಗಾಗಿ ಈಗಾಗಲೇ ರಾಜ್ಯ ಸರ್ಕಾರ 7ನೇ ವೇತನ ಆಯೋಗವನ್ನು ರಚನೆ ಮಾಡಲಾಗಿದೆ.ಈ ಒಂದು ವೇತನ ಆಯೋಗವನ್ನು ರಚನೆ ಮಾಡಿ ವರದಿ ನೀಡಲು ಸಮಿತಿಗೆ 6 ತಿಂಗಳ ಕಾಲ ಸಮಯ ವನ್ನು ನೀಡಿದ್ದು ಈಗಾಗಲೇ ಸಮಿತಿ ಕೂಡಾ ಕೆಲವೊಂದಿಷ್ಟು ಕೆಲಸ ಕಾರ್ಯಗಳನ್ನು ಮಾಡುತ್ತಿದೆ.
ಇನ್ನೂ ಇವೇಲ್ಲದರ ನಡುವೆ ಇದೇ ಮೊದಲ ಭಾರಿಗೆ ಅವಧಿ ಮುನ್ನವೇ ಈ ಒಂದು ಸಮಿತಿ ಯನ್ನು ರಾಜ್ಯ ಸರ್ಕಾರ ರಚನೆ ಮಾಡಿದೆ 4 ವರ್ಷ 7 ತಿಂಗಳಿಗೆ 7ನೇ ವೇತನ ಆಯೋಗವನ್ನು ರಚನೆ ಮಾಡಲಾಗಿದೆ.ಸಾಮಾನ್ಯವಾಗಿ ಈ ಹಿಂದೆ ಮೊದಲು ವೇತನ ಆಯೋಗವನ್ನು ಐದೂವರೆ ವರ್ಷಕ್ಕೆ ರಚನೆ ಮಾಡಲಾಗುತ್ತಿತ್ತು.ರಚನೆಗೊಂಡ ನಂತರ ಆಯೋಗ ಅಧ್ಯಯನ ನಡೆಸಿ, ವರದಿ ನೀಡುವಷ್ಟರಲ್ಲಿ ಹೆಚ್ಚಿನ ಸಮಯ ಕಳೆದು ಹೋಗುತ್ತಿತ್ತು.ಆದರೆ ಈ ಭಾರಿ 4 ವರ್ಷ 7 ತಿಂಗಳಿಗೆ ಆಯೋಗ ರಚನೆ ಮಾಡಲಾಗಿದೆ.
ಆಯೋಗ ತನ್ನ ವರದಿ ಸಲ್ಲಿಸಲು ಸರ್ಕಾರ ಕೂಡಾ ಸಮಿತಿಗೆ 6 ತಿಂಗಳ ಗಡುವನ್ನು ನಿಗದಿ ಮಾಡಿದೆ.ಈಗಾಗಲೆ ಆಯೋಗಕ್ಕೆ ಬೆಂಗಳೂರಿ ನಲ್ಲಿ ಕಚೇರಿ ಸಿದ್ಧವಾಗುತ್ತಿದ್ದು ಕಚೇರಿ ಕಾರ್ಯ ಮಕ್ತಾಯವಾಗಿದ್ದು ಸದಸ್ಯರು ತಮ್ಮ ಕೆಲಸ ಪ್ರಾರಂಭಿಸಿದ್ದಾರೆ.ಇನ್ನೂ ಇದೇಲ್ಲದರ ನಡುವೆ ನಿನ್ನೆಯಷ್ಟೇ ರಾಜ್ಯದ ಸರ್ಕಾರಿ ನೌಕರರ ಸಂಘವು ಕೆಲವು ಬೇಡಿಕೆಗಳನ್ನು ಇಟ್ಟಿದ್ದು ಮೊದಲು ಸಭೆಯನ್ನು ಮಾಡುವಂತೆ ಒತ್ತಾಯ ವನ್ನು ಮಾಡಿದೆ.ಸಂಘದೊಂದಿಗೆ ಸಭೆಯನ್ನು ಮಾಡಿ ಕೆಲ ವಿಚಾರಗಳ ಕುರಿತಂತೆ ಚರ್ಚೆಯನ್ನು ಮಾಡುವಂತೆ ಆಗ್ರಹವನ್ನು ಮಾಡಿದ್ದು ಇದೇಲ್ಲ ದರ ನಡುವೆ ಈ ಬಾರಿ ಅವಧಿ ಮುನ್ನವೇ ಸಮಿತಿ ರಚನೆಗೊಂಡಿದ್ದು ನೀಡಿದ ಅವಧಿಯ ಒಳಗಾ ಗಿಯೇ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿಯನ್ನು ನೀಡುತ್ತಾ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..