ಚಾಮರಾಜನಗರ –
ಬಿಸಿ ಊಟತಿಂದು ಮಕ್ಕಳಲ್ಲಿ ವಾಂತಿ ಬೇಧಿ ಕಾಣಿಸಿ ಕೊಂಡ ಘಟನೆ ಚಾಮರಾಜನಗರ ದಲ್ಲಿ ನಡೆದಿದೆ ಹೌದು ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಸ್ತೂರು-1 ಶಾಲೆಯಲ್ಲಿ ಈ ಒಂದು ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕು ಕೆಸ್ತೂರು ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ ಬಿಸಿಯೂಟ ದಲ್ಲಿ ಹಲ್ಲಿ ಬಿದ್ದ ಪರಿಣಾಮವಾಗಿ ಈ ಒಂದು ಊಟವನ್ನು ಸೇವಿಸಿದ ಶಾಲೆಯ 120 ಕ್ಕೂ ಹೆಚ್ಚು ವಿದ್ಯಾರ್ಥಿ ಗಳಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ
ಬಿಸಿ ಊಟದಲ್ಲಿ ಹಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇದನ್ನು ಸೇವಿಸಿದ ಮಕ್ಕಳು ಅಸ್ವಸ್ಥ ಗೊಂಡಿದ್ದಾರೆ.ಹೀಗಾಗಿ ಅವರಲ್ಲಿ ವಾಂತಿ ಭೇದಿ ಕಾಣಿಸಿಕೊಂಡು ನಂತರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಲ್ಲಿಬಿದ್ದ ಆಹಾರ ಸೇವಿಸಿದ 120ಕ್ಕೂ ಹೆಚ್ಚು ಮಕ್ಕಳು ಸಧ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.ಇನ್ನೂ ಶಾಲೆಗೆ ಬಿಸಿಯೂಟ ಪೂರೈಸುವ ಜೆ ಎಸ್ ಎಸ್ ದಾಸೋಹ ಆಗಿದೆ.
ವಾಂತಿ ಬೇದಿಯಾಗಿರುವ ಯಳಂದೂರು ತಾಲೂಕಿನಲ್ಲಿ ಕೆಸ್ತೂರು ಗ್ರಾಮದ ವಿದ್ಯಾರ್ಥಿಗಳು.ಸದ್ಯ ಯಳಂದೂರು ತಾಲೂಕಿನ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆಯನ್ನು ನೀಡ ಲಾಗುತ್ತಿದೆ.ಇತ್ತ ಈ ಒಂದು ವಿಚಾರ ತಿಳಿದ ಪೋಷಕರು ಆಸ್ಪತ್ರೆಗೆ ಆಗಮಿಸಿ ಮಕ್ಕಳ ಆರೋಗ್ಯ ಕುಶಲೋಪರಿ ವಿಚಾರಣೆ ಮಾಡಿದರು
ಇದು ಕೆಸ್ತೂರು ಗ್ರಾಮದ ಶಾಲೆಗಳಲ್ಲಿ ಇದು ಎರಡನೆ ಬಾರಿ ನೆಡೆದಿರುವ ಘಟನೆಯಾಗಿದ್ದು ಇಲಾಖೆಯ ಅಧಿಕಾರಿ ಗಳು ಗಂಭೀರವಾಗಿ ಪರಿಗಣಿಸಿ ಮುಂದಿನ ಕ್ರಮಗಳನ್ನು ಕೈಗೊಂ ಡಿದ್ದಾರೆ.