ಹುಬ್ಬಳ್ಳಿ ಧಾರವಾಡ –
ITS ಗೆ ತಗಡು ಬಡಿದಾರ ಕೋಟಿ ಕೋಟಿ ದುಬಾರಿ ಚಿಗರಿ ಬಸ್ ನಲ್ಲಿ ಇದೆಂಥಾ ವ್ಯವಸ್ಥೆ – ಸರಿಯಾಗಿ ನಿರ್ವಹಣೆ ಮಾಡದೇ ಡ್ರೈವರ್ ಮೇಲೆ ದರ್ಪ ತೋರಿದರೆ ಹೇಗೆ ಡಿಸಿ ಸಾಹೇಬ್ರೆ MD ಮೇಡಂ ಇದೇನಿದು…..ಮುಂದೆ ನಿರೀಕ್ಷಿಸಿ KMPL ಕಥೆ…..
ಹುಬ್ಬಳ್ಳಿ ಧಾರವಾಡ ಅವಳಿ ನಗರದ ಮಧ್ಯೆ ಚಿಗರಿ ಬಸ್ ಗಳು ಸಂಚಾರವನ್ನು ಮಾಡುತ್ತಿವೆ. ಐದು ವರ್ಷಗಳ ಹಿಂದೆ ಆರಂಭಗೊಂಡ ಬಸ್ ಗಳು ಸಧ್ಯ ಜನರ ನಾಡಿ ಮಿಡಿತವಾಗಿದ್ದು ಪ್ರತಿ ದಿನ ಲಕ್ಷಾಂತರ ಜನರು ಈ ಒಂದು ಬಸ್ ಗಳಲ್ಲಿ ಸಂಚಾರವನ್ನು ಮಾಡುತ್ತಿದ್ದು ಒಂದು ವಿಚಾರ ವಾದರೆ ಇನ್ನೂ ಕೋಟ್ಯಾಂತರ ಬೆಲೆ ಬಾಳುವ ಈ ಒಂದು ಬಸ್ ಗಳ ನಿರ್ವಹಣೆ ಸಧ್ಯ ಸರಿಯಾಗಿ ಆಗುತ್ತಿಲ್ಲ ಒಂದು ಪ್ರಮುಖವಾಗಿ ಬಸ್ ಗಳು ಹಾಳಾಗೊದಕ್ಕೆ ಈಗಾಗಲೇ ಹೇಳಿದಂತೆ ಸಿಮೆಂಟ್ ರಸ್ತೆಗಳೇ ಪ್ರಮುಖವಾಗಿದ್ದರೆ
ಬಸ್ ಗಳಲ್ಲಿನ ವಸ್ತುಗಳನ್ನು ಸರಿಯಾಗಿ ತರಿಸಿ ಕೊಳ್ಳುತ್ತಿಲ್ಲ ಏನು ಕೇಳಿದರು ಸಾಮಾನುಗಳಿಲ್ಲ ನಾವೇನು ಮಾಡೊಣಾ ಎಂಬ ಮಾತುಗಳು ಸರಿಯಾಗಿ ಇಲ್ಲದ ವ್ಯವಸ್ಥೆ ಸೌಲಭ್ಯಗಳ ಕೊರತೆಯ ನಡುವೆ ಚಾಲಕರು ಏನೋ ಕಷ್ಟ ಪಟ್ಟು ಹಗಲು ರಾತ್ರಿ ಎನ್ನದೇ ಕೈಯಲ್ಲಿ ಜೀವ ವನ್ನು ಇಟ್ಟುಕೊಂಡು ಕಷ್ಟಪಟ್ಟು ಕರ್ತವ್ಯವನ್ನು ಮಾಡುತ್ತಿದ್ದಾರೆ.ಇನ್ನೂ ಏನಾದರೂ ಹೆಚ್ಚು ಕಡಿಮೆಯಾದರೆ ಅಮಾನತು ಎಂಬ ಭಯವನ್ನು ಹೊಸದಾಗಿ ಡಿಸಿಯಾಗಿ ಬಂದಿರುವ ಸಿದ್ದಲಿಂಗಯ್ಯ ಸಾಹೇಬ್ರು ಮಾಡುತ್ತಿದ್ದಾರೆ.
ಇದನ್ನು ಬಿಡಿ ಸಾಹೇಬ್ರೆ ಮೊದಲು ಬಸ್ ಗಳ ವ್ಯವಸ್ಥೆ ಸರಿ ಮಾಡಿ ಸರಿಯಾಗಿ ಕೋಟಿ ಕೋಟಿ ಬೆಲೆ ಬಾಳುವ ದುಬಾರಿಯ ಈ ಒಂದು ಬಸ್ ಗಳ ನಿರ್ವಹಣೆಯಾಗುತ್ತಿಲ್ಲ ಬಸ್ ನಲ್ಲಿನ ITS ಸಂಪೂರ್ಣವಾಗಿ ಹಾಳಾಗಿದೆ. ಜಿಪಿಎಸ್ ಕನೆಕ್ಟ್ ಮಾಡಿ ಬಸ್ ಎಲ್ಲಿ ಇದೆ ಮುಂದಿನ ನಿಲ್ದಾಣ ಯಾವುದು ಪ್ರಸ್ತುತ ನಿಲ್ದಾಣ ಯಾವುದು ಹೀಗೆ ಎಲ್ಲವನ್ನೂ ಬಸ್ ನಲ್ಲಿನ ಪ್ರಯಾಣಿಕರಿಗೆ ಸಂದೇಶದ ಮೂಲಕ ಮಾಹಿತಿಯನ್ನು ನೀಡುತ್ತಾ ಹೇಳುವ ವ್ಯವಸ್ಥೆಯಾಗಿದೆ.
ಆದರೆ ಸಧ್ಯ ಈ ಒಂದು ಸೌಲಭ್ಯ ಯಾವ ಬಸ್ ನಲ್ಲೂ ಇಲ್ಲ ಬಿಡಿ ಇನ್ನೂ ಇರುವ ವ್ಯವಸ್ಥೆಯಲ್ಲಿ ಸುಧಾರಣೆ ಮಾಡೊದು ಬಿಟ್ಟು ಕೋಟಿ ಕೋಟಿ ಬೆಲೆಬಾಳುವ ಈ ಒಂದು ಬಸ್ ನಲ್ಲಿ ತಗಡು ಬಡಿದರೆ ಹೇಗೆ ದುಬಾರಿಯಾದ ಐಶಾರಾಮಿ ಚಿಗರಿ ಬಸ್ ನಲ್ಲಿ ಇದೆಂಥಾ ತಗಡು ವ್ಯವಸ್ಥೆ ಏನಿದು ಡಿಸಿ ಸಾಹೇಬ್ರೆ ನೀವು ಬೆಂಗಳೂರಿನಿಂದ ಬಂದವರು ಅನುಭವಸ್ಥರು ನಿಮ್ಮ ಮೇಲೆ ಸಾಕಷ್ಟು ಭರವಸೆಯನ್ನು ಡ್ರೈವರ್ ಗಳು ಇಟ್ಟುಕೊಂಡಿದ್ದಾರೆ ಹೀಗಿರುವಾಗ ಇದನ್ನೇಲ್ಲಾ ಸುಧಾರಣೆ ಮಾಡುವ ಬದಲಿಗೆ ಸಣ್ಣ ಪುಟ್ಟ ತಪ್ಪು ಮಾಡಿದ ಡ್ರೈವರ್ ಗಳಿಗೆ ಅಮಾನತು ಮಾಡುವ ಶಿಕ್ಷೆ ಸರಿನಾ
ಮೊದಲು ಸೌಲಭ್ಯ ಕೊಡಿ ಸುಧಾರಣೆ ಮಾಡಿ ಆ ಮೇಲೆ ಅಮಾನತು ಶಿಕ್ಷೆ ಜಾರಿ ಮಾಡಿ ಇನ್ನೂ ಇಲಾಖೆಗೆ ಖಡಕ್ ಮಹಿಳಾ ಅಧಿಕಾರಿಯಾಗಿ ಬಂದಿರುವ MD ಮೇಡಂ ಒಮ್ಮೆ ಇದನ್ನೇಲ್ಲ ನೋಡಿ ಡ್ರೈವರ್ ಗಳಿಗೆ ನೆಮ್ಮದಿಯ ವಾತಾವ ರಣನ್ನು ನಿರ್ಮಾಣ ಮಾಡಿ ಈ ಒಂದು ನಿರೀಕ್ಷೆ ಯಲ್ಲಿ ಹುಬ್ಬಳ್ಳಿ ಧಾರವಾಡ ಚಿಗರಿ ಬಸ್ ಡ್ರೈವರ್ ಗಳಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ…..