ಇದೇನಾ ನಾಡಿನ ಶಿಕ್ಷಕರ, ಶಿಕ್ಷಕರ ಸಂಘಟನೆಯ ಒಗ್ಗಟ್ಟು……ಯಾಕೇ ಕೊಲೆಯಾದರು ನಿಮ್ಮವರಲ್ಲವೇ…….ಮೌನ ಯಾಕೇ…..ಉತ್ತರಿಸಿ

Suddi Sante Desk

ಬೆಂಗಳೂರು –

ಚಿಕ್ಕಬಳ್ಳಾಪೂರದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕ ರೊಬ್ಬರನ್ನು ಅಂತ್ಯಂತ ಕೆಟ್ಟದಾಗಿ ಹಾಗೇ ಅಮಾನು ಷವಾಗಿ ಕೊಲೆಯನ್ನು ಮಾಡಲಾಗಿದೆ.ಮನೆಯ ಮುಂದೆ ನಿಂತುಕೊಂಡಿದ್ದ ಶಿಕ್ಷಕನನ್ನು ಕರೆದೊಯ್ದ ದುಷ್ಕರ್ಮಿಗಳು ಅಮಾನುಷವಾಗಿ ಕೊಲೆ ಮಾಡಿ ದ್ದಾರೆ.ಗೌರಿ ಬಿದನೂರು ನಗರದ ಹೊರವಲಯದಲ್ಲಿ ಈ ಒಂದು ಕೊಲೆಯನ್ನು ಮಾಡಲಾಗಿದ್ದು ಬೊಮ್ಮ ನಹಳ್ಳಿಯ ಸರ್ಕಾರಿ ಶಾಲೆಯ 42 ವಯಸ್ಸಿನ ವಿಶ್ವ ನಾಥ್ ಅವರೇ ಕೊಲೆಯಾದ ಶಿಕ್ಷಕರಾಗಿದ್ದಾರೆ.ಇದು ಕೊಲೆಯ ವಿಚಾರವಾದರೆ ಇನ್ನೂ ರಾಜ್ಯದಲ್ಲಿ ಅತ್ಯಂತ ಭೀಕರವಾಗಿ ಕೊಲೆಯನ್ನು ಮಾಡಿರುವ ಚಿತ್ರಣವನ್ನು ನೋಡಿದರೆ ಯಾವ ಮನುಷ್ಯನಿಗಾ ದರೂ ತುಂಬಾ ನೋವು ಆಗುತ್ತದೆ ಹೀಗಿರುವಾಗ ತಮ್ಮದೇಯಾದ ಸಹಪಾಠಿಯೊಬ್ಬರನ್ನು ಕೊಲೆ ಮಾಡಿರುವ ವಿಚಾರ ತಿಳಿದರು ಕೂಡಾ ರಾಜ್ಯ ಮಟ್ಟದ ಶಿಕ್ಷಕರ ಸಂಘಟನೆಯ ನಾಯಕರು ಮೌನವಾಗಿದ್ದಾರೆ.

ಯಾವ ಯಾವ ವಿಚಾರಕ್ಕೇ ಏನೇಲ್ಲಾ ಮನವಿ ಕೊಡುವ ಒತ್ತಾಯವನ್ನು ಮಾಡುವ ಹಾಗೇ ಪೊಸ್ಟ್ ಮಾಡುವ ನಿಮ್ಮಲ್ಲಿ ನಿಮ್ಮದೇಯಾದ ಸಹಪಾಠಿ ಯಾಗಿದ್ದ ವಿಶ್ವನಾಥ್ ಕೊಲೆ ಕಾಣಲಿಲ್ಲವೇ. ಯಾರೊಬ್ಬರು ಕೂಡಾ ಇದನ್ನು ಖಂಡಿಸಲಿಲ್ಲ ಸೂಕ್ತ ಕ್ರಮಕ್ಕಾಗಿ ಒತ್ತಾಯವನ್ನು ಮಾಡಿ ಯಾರಿಗೂ ಮನವಿ ಕೊಡಲಿಲ್ಲ ನೀಡಲಿಲ್ಲ.ಹಾಗಾದರೇ ಕೊಲೆ ಯಾಗಿದ್ದು ಶಿಕ್ಷಕರಾಗಿದ್ದು ಅದರಲ್ಲೂ ಸರ್ಕಾರಿ ಶಾಲೆಯ ಶಿಕ್ಷಕ ಹೀಗಿರುವಾಗ ಯಾಕೇ ಮೌನ ಯಾಕೇ ಒಂದೇ ಒಂದು ಮನವಿಯನ್ನು ಕೊಡಲಿಲ್ಲ ಕೊನೆಗೆ ಪತ್ರಿಕಾ ಪ್ರಕಟಣೆಯನ್ನು ನೀಡಲಿಲ್ಲ.

ಸಾಮಾನ್ಯವಾಗಿ ಬೇರೆ ಬೇರೆ ಇಲಾಖೆಗಳನ್ನು ನೋಡಿದರೆ ಇಂತಹ ಕೃತ್ಯಗಳು ನಡೆದರೆ ಕೂಡಲೇ ಬೀದಿಗಿಳಿದು ಹೋರಾಟವನ್ನು ಮಾಡುತ್ತಾರೆ ಖಂಡಿ ಸುತ್ತಾರೆ ಆರೋಪಿಗಳನ್ನು ಬಂಧನ ಮಾಡುವಂತೆ ಒತ್ತಾಯವನ್ನು ಮಾಡುತ್ತಾರೆ ಆದರೆ ಶಿಕ್ಷಕ ವಿಶ್ವನಾ ಥ್ ರ ಕೊಲೆಯನ್ನು ನೋಡಿದರೆ ಯಾರು ಕೂಡಾ ಧ್ವನಿ ಎತ್ತದಿರೊದು ದುರಂತವೇ ಸರಿ.ಇವರು ಕೂಡಾ ನಿಮಗೆ ಸದಸ್ಯತ್ವಕ್ಕಾಗಿ ಹಣವನ್ನು ಕೊಟ್ಟಿ ದ್ದಾರೆ ಇದಕ್ಕಾದರೂ ಮಾತನಾಡಬೇಕಾಗಿತ್ತು ಆದರೆ ಮೌನವನ್ನುನೋಡಿದರೆ ಇದೇನಾ ರಾಜ್ಯದ ಶಿಕ್ಷಕರ ಸಂಘಟನೆಯ ಒಗ್ಗಟ್ಟು ಎಂಬ ಅನುಮಾನ ಕಾಡು ತ್ತಿದ್ದು ಹೀಗಾಗಿಯೇ ರಾಜ್ಯದಲ್ಲಿ ಇಂದು ಶಿಕ್ಷಕರ ಸಮಸ್ಯೆಗಳು ಜಟಿಲವಾಗಿದ್ದು ಶಿಕ್ಷಕರ ನೋವು ಗಳಿಗೆ ಹಿಡಿದ ಕೈಗನ್ನಡಿಯಾಗಿದೆ

ರಾಜ್ಯದಲ್ಲಿ 40 ವರ್ಷಗಳ ಇತಿಹಾಸ ಹೊಂದಿರುವ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದ ಏಕೈಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಶಂಭುಲಿಂಗನ ಗೌಡ ರೇ ಹಾಗೂ ಪ್ರಧಾನ ಕಾರ್ಯದರ್ಶಿ ಗಳಾದ ಚಂದ್ರಶೇಖರ ನುಗ್ಗಲಿ ಅವರೇ ಇದಕ್ಕೆ ನಿಮ್ಮ ಮೌನ ಯಾಕೇ ನಿಮ್ಮ ಉತ್ತರವೇನು ನಿಮ್ಮ ಉತ್ತರದ ನಿರೀಕ್ಷೆಯಲ್ಲಿ ರಾಜ್ಯದ ಶಿಕ್ಷಕರಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.