ಆಸ್ಸಾಂ –
ಶಿಕ್ಷಕರ ದಿನಾಚರಣೆಯ ದಿನ ಮಕ್ಕಳಿಂದ ತುಂಡು ಉಡುಗೆಯಲ್ಲಿ ನರ್ತನ ಮಾಡಿಸುವ ಮೂಲಕ ಶಾಲೆ ಯೊಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.ಹೌದು ಬಾಲಿವುಡ್ ನಟಿಯರನ್ನು ಅನುಕರಿಸುವ ಅಶ್ಲೀಲ, ಅಸಭ್ಯ ಭಂಗಿಗಳಿರುವ ಈ ಹಾಡಿಗೆ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಮಾಡಿಸಲಾಗಿದ್ದು ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಅಸ್ಸಾಂನ ದೆಮಾಜಿಯಲ್ಲಿರುವ ಸುವಿದ್ಯಾ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಈ ಕೃತ್ಯ ನಡೆದಿದೆ.ಸೆಪ್ಟೆಂಬರ್ 5 ರಂದು ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಅತಿರೇಕದ ನೃತ್ಯವನ್ನು ಮಕ್ಕಳಿಂ ದಲೇ ಪ್ರದರ್ಶಿಸಲಾಗಿದ್ದು ಅಲ್ಲಿದ್ದ ಪೋಷಕರೇ ಈ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದಾರೆ.
ವೋಕ್‌ಫ್ಲಿಕ್ಸ್ ಎಂಬ ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನನು ತಮ್ಮ ಖಾತೆಯಲ್ಲಿ ಶೇರ್ ಮಾಡಿ ಕೊಂಡಿದ್ದಾರೆ.ಈ ಕುರಿತು ಶಿಕ್ಷಣ ಇಲಾಖೆಗೂ ಸಹ ದೂರು ನೀಡಲಾಗಿದೆ ಆದರೆ ಇದುವರೆಗೂ ಯಾರ ಮೇಲೆಯೂ ಕ್ರಮ ಕೈಗೊಂಡಿಲ್ಲ ಇದು ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಮಾಡಿರುವ ಅಪಮಾನ ಎಂದು ಕೆಲವರು ಪ್ರತಿಕ್ರಯಿಸಿದ್ದರೆ,
ಇನೂ ಕೆಲವರು ಪೋಷಕರು ಹಾಗೂ ಶಿಕ್ಷಕರು ಇಬ್ಬರೂ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಸೋತಿದ್ದಾರೆಂದು ಕಿಡಿ ಕಾರಿದ್ದು ಇಲಾಖೆ ಯಾವ ಕ್ರಮವನ್ನು ಕೈಗೊಳ್ಳುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಅಸ್ಸಾಂ….
ಸು






















