ಮೈಸೂರು –
ಒಂದನೇಯ ಅಲೆಗಿಂತ ಎರಡನೇಯ ಅಲೆ ಸಾಕಷ್ಟು ಪ್ರಮಾಣದಲ್ಲಿ ರಾಜ್ಯದಲ್ಲಿ ಸಾವು ನೋವನ್ನುಂಟು ಮಾಡಿದೆ.ಅದರಲ್ಲೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇವರೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕರು ಮೃತರಾಗಿದ್ದಾರೆ.ಚುನಾವಣೆ ಕರ್ತವ್ಯ,ಕೋವಿಡ್ ಕರ್ತವ್ಯ,ಮಾಡಿದ್ದ ಅದೇಷ್ಟೋ ಶಿಕ್ಷಕರು ರಾಜ್ಯದಲ್ಲಿ ಸಾಲು ಸಾಲಾಗಿ ಮೃತರಾಗಿ ದ್ದಾರೆ.ಹೆಚ್ಚಿನ ಪ್ರಮಾಣದಲ್ಲಿ ನಡೆದ ಸಾವಿನ ಸರಣಿ ಯನ್ನು ಇನ್ನೂ ಮರೆತಿಲ್ಲ ಮರೆಯಲಾಗುತ್ತಿಲ್ಲ ಇನ್ನೂ ಕೂಡಾ ಮಹಾಮಾರಿಯ ಭಯದ ನಡುವೆ ಸಧ್ಯ ಶೈಕ್ಷಣಿಕ ವರ್ಷ ಆರಂಭವಾಗಿದ್ದು ಬಸ್ ಸಂಚಾರ ವಿಲ್ಲದಿದ್ದರೂ ಕೂಡಾ ಶಾಲೆಗಳತ್ತ ಶಿಕ್ಷಕರು ಹೆಜ್ಜೆ ಹಾಕಿದ್ದಾರೆ.
ಇದೂ ಒಂದು ಕಥೆಯಾದರೆ ಇನ್ನೂ ಇದೇಲ್ಲದರ ಆತಂಕದ ನಡುವೆ ಮೈಸೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಶಿಕ್ಷಕರಿಗೆ ಮತ್ತೊಂದು ಆತಂಕವನ್ನು ತಂದಿಟ್ಟಾರೆ.ಹೌದು ಮೈಸೂರಿನಲ್ಲಿ ಇನ್ನೂ ಪಾಸಿಟಿವಿಟಿ ಕಡಿಮೆಯಾಗದ ಕಾರಣಕ್ಕಾಗಿ ಲಾಕ್ ಡೌನ್ ಇದೆ .ಒಂದು ಕಡೆಗೆ ಲಾಕ್ ಡೌನ್ ಮತ್ತೊಂದು ಕಡೆಗೆ ಜಿಲ್ಲೆಯಲ್ಲಿ ಇನ್ನೂ ಕಡಿಮೆ ಯಾಗದ ಕರೋನಾ ಆತಂಕ ಹೀಗಾಗಿ ಭಯದಲ್ಲಿರು ವ ಜಿಲ್ಲೆಯ ಶಿಕ್ಷಕರಿಗೆ ಬಿಇಓ ಅವರು ದೊಡ್ಡದಾದ ಅತಂಕವನ್ನು ತಂದಿಟ್ಟಿದ್ದಾರೆ.ಹೌದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿನ ಎಲ್ಲಾ ಮತಗಟ್ಟೆಗಳಲ್ಲಿ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಬೂತ್ ಮಟ್ಟದ ಎಲ್ಲಾ ಕುಟಂಬದ ಸದಸ್ಯರಿಗೆ ಕೋವಿಡ್ ಹಾಗೂ ಆರೋಗ್ಯ ತಪಾಸಣೆ ಅಭಿಯಾನ ಕಾರ್ಯ ಕ್ರಮಕ್ಕೆ ಬಿಎಲ್ ಓ ಹಾಗೂ ಶಿಕ್ಷಕರನ್ನು ನೇಮಕ ಮಾಡಿದ್ದಾರೆ.
ಕರೋನಾ ನಿಯಂತ್ರಣ ಮಾಡುವ ಉದ್ದೇಶ ಏನೋ ಸರಿಯಾಗಿದೆ ಬಿಇಓ ಅವರೇ ಆದರೆ ರಾಜ್ಯದಲ್ಲಿ ಕೋವಿಡ್ ನಿಂದಾಗಿ ಸಾಲು ಸಾಲಾಗಿ ನಿಧನರಾಗಿ ರುವ ಶಿಕ್ಷಕರು ನಿಮಗೆ ಕಾಣಿಸಿಲ್ಲವೇ ಹೀಗ್ಯಾಕೆ ಮಾಡಿದ್ರಿ ಶಾಸಕರ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ನೀವು ತಿರ್ಮಾನವನ್ನು ತಗೆದುಕೊಂಡು ಏಕಾಎಕಿ ಯಾಗಿ ಹೀಗೆ ಶಿಕ್ಷಕರನ್ನು ನೇಮಕ ಮಾಡಿಈಗಾಗಲೇ ಭಯದಲ್ಲಿರುವ ಶಿಕ್ಷಕರಿಗೆ ಮತ್ತೊಂದು ಭಯದೊಂ ದಿಗೆ ಆತಂಕವನ್ನು ತಂದಿಟ್ಟಿದ್ದು ದುರಂತವಾಗಿದ್ದು ಅದು ಮತ್ತೆ ಕೋವಿಡ್ ಡೂಟಿ ಗೆ ನೇಮಕಮಾಡಿದ್ದು ಸರಿನಾ ಇನ್ನೂ ಪ್ರಮುಖವಾಗಿ ಶಿಕ್ಷಕರ ಧ್ವನಿಯಾಗಿ ರುವ ಸಂಘಟನೆಯ ಮಹಾನ್ ನಾಯಕರೇ ಎಲ್ಲಿ ದ್ದೀರಾ ಈ ಒಂದು ಆದೇಶ ಕಾಣುತ್ತಿಲ್ಲವೇ ಆತಂಕದ ಲ್ಲಿರುವ ಶಿಕ್ಷಕರ ಪರವಾಗಿ ಈಗಲಾದರೂ ಧ್ವನಿ ಎತ್ತಿ