ಧಾರವಾಡ –
ವಲಯ ಕಚೇರಿ 12 ರ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಮಾಡಿದ ಸಾರ್ವಜನಿಕರು – ಸಾಮಾಜಿಕ ಜಾಲ ತಾಣಗಳಲ್ಲಿ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡ ಸಾರ್ವಜನಿಕರು…..ಇದೇನಿದು ಗೌಡ್ರೆ ಆಯುಕ್ತರೇ ಒಮ್ಮೆ ನೋಡಿ
ಹೌದು ಸಾಮಾನ್ಯವಾಗಿ ಸರ್ಕಾರದ ಕೆಲಸ ದೇವರ ಕೆಲಸ ಎಂದುಕೊಂಡು ಪ್ರತಿಯೊಬ್ಬ ಸರ್ಕಾರಿ ನೌಕರರು ಕಚೇರಿಯಲ್ಲಿದ್ದುಕೊಂಡು ಕೆಲಸ ಕಾರ್ಯಗಳನ್ನು ಮಾಡಿದರೆ ಸಾರ್ವಜ ನಿಕರ ಪರದಾಟ ತೊಂದರೆ ಸಮಸ್ಯೆಯನ್ನು ಅನುಭವಿಸೊದು ತಪ್ಪುತ್ತದೆ ಹೀಗಿರುವಾಗ ಇವರೇ ಸರಿಯಾಗಿ ಕೆಲಸ ಕಾರ್ಯಗಳನ್ನು ಮಾಡದಿದ್ದರೆ ಹೇಗೆ
ಬೆಳಿಗ್ಗೆ ಕಚೇರಿ ಸಮಯಕ್ಕೆ ಸರಿಯಾಗಿ ಬರೋ ದಿಲ್ಲ ಬಂದರು ಅಲ್ಲೇ ಇಲ್ಲೇ ಆ ಸಭೆ ಈ ಸಭೆ ಎನ್ನುತ್ತಾ ನೂರೆಂಟು ಕೆಲಸ ಕಾರ್ಯಗಳನ್ನು ಮಾಡುತ್ತಾ ಹೋದರೆ ಕೆಲಸ ಕಾರ್ಯಗಳನ್ನು ಹೊತ್ತುಕೊಂಡು ಆಫೀಸ್ ಗಳಿಗೆ ಸಾರ್ವಜನಿಕರು ಬಂದರೆ ಸ್ಪಂದಿಸುವವರು ಯಾರು ಸಮಸ್ಯೆಗ ಳನ್ನು ಕೇಳುವವರು ಯಾರು .
ಹೌದು ಇಂತಹದೊಂದು ಸಮಸ್ಯೆಯನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ 12 ರಲ್ಲಿ ಇದೆಯಂತೆ.ಇದನ್ನು ಸಾರ್ವಜನಿಕರು ಪ್ರತಿದಿನ ಅನುಭವಿಸುತ್ತಿದ್ದು ಸಧ್ಯ ವ್ಯಕ್ತಿಯೊಬ್ಬರು ಇದನ್ನು ಬಹಿರಂಗವಾಗಿ ಬರೆದುಕೊಂಡಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ ನಂ 12 ಕಲಾ ಭವನ ಹಿಂದುಗಡೆಯ ಕಚೇರಿಯಲ್ಲಿ ಈ ಒಂದು ಪರಸ್ಥಿತಿ ಕಂಡು ಬರುತ್ತಿದೆಯಂತೆ.ಮಧ್ಯಾಹ್ನ 3:10 ನಿಮಿಷ ಆದರೂ ಇವರ ಊಟದ ಸಮಯ ಮುಗಿದಿಲ್ಲ ಮಧ್ಯಾಹ್ನ 2 ಗಂಟೆಗೆ ಬಂದರೆ ಊಟದ ಸಮಯ ಅಂತ ಸರಿಯಾಗಿ ಎದ್ದು ಹೋಗುವ ಇವರು ಕೆಲಸಕ್ಕೆ ಬರುವ ವೇಳೆ ಸಹ ಸರಿಯಾಗಿ ಇರಬೇ ಕಲ್ಲವೇ.
ಅಳ್ನಾವರ ಸಹಿತ ಸುತ್ತಮುತ್ತಲಿನ ಜಿಲ್ಲೆ ಸಹಿತ ಅನೇಕ ತಾಲೂಕುಗಳ ಜನ ಹುಬ್ಬಳ್ಳಿ ಧಾರವಾಡ ನಗರದ ಆಸ್ಪತ್ರೆಗಳಿಗೆ ಹೋಗುತ್ತಾರೆ ಆದರೆ ಅಲ್ಲಿ ಜನನ ಪ್ರಮಾಣ ಪತ್ರ ವಿತರಿಸುವ ಈ ಕಚೇರಿ ಗಳು ಕಾರ್ಯನಿರ್ವಹಿಸುವ ಸ್ಥಿತಿಯನ್ನು ನೋಡಿ ದರೆ ರಕ್ತ ಕುದಿಯುತ್ತದೆ ಎಂದು ಬರೆದಿದ್ದು ಇಷ್ಟೊಂದು ಅಸಮಾಧಾನದಿಂದ ಬರೆದಿರುವ ಇವರಿಗೆ ಕೆಲಸದಲ್ಲಿ ಹೇಗೆ ಅಸ್ಥವ್ಯಸ್ಥತೆ ಆಗಿದೆ ಎಂಬೊದನ್ನು ವಲಯದ ಜವಾಬ್ಬಾರಿಯನ್ನು ಹೊತ್ತುಕೊಂಡಿರುವ ಮೇಲಾಧಿಕಾರಿಗಳು ಆಯುಕ್ತರು ಒಮ್ಮೆ ತಿಳಿದುಕೊಂಡು ಸಮಯ ವನ್ನು ತಪ್ಪುತ್ತಿರುವ ಸಿಬ್ಬಂದಿಗಳಿಗೆ ಸಮಯದ ಪಾಠ ಹೇಳಬೇಕಿದೆ
ಇದಾಗುತ್ತದೆಯಾ ಇಲ್ಲ ಆಗಿದ್ದಾಗಲಿ ಎಂದು ಕೊಂಡು ಸುಮ್ಮನಿರುತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ……