ಚಿತ್ತಾಪೂರ –
ಸಾಮಾನ್ಯವಾಗಿ ಕ್ಲಾಸ್ ರೂಮ್ ನಲ್ಲಿ ನಿಂತುಕೊಂಡು ಮಕ್ಕಳ ಮಧ್ಯೆ ಹಾಗೇ ಹೀಗೆ ಪಾಠವನ್ನು ಬೋಧನೆ ಮಾಡೊದನ್ನು ಕೇಳಿದ್ದೇವೆ ನೋಡಿದ್ದೇವೆ.ಆದರೆ ಇಲ್ಲೊಬ್ಬ ಶಿಕ್ಷಕಿಯೊಬ್ಬರು ವಿಶೇಷವಾಗಿ ಪಾಠ ಬೋಧನೆಯ ಮೂಲಕ ಈಗ ರಾಜ್ಯದ ಗಮನ ಸೆಳೆದಿದ್ದಾರೆ.ಹೌದು ಅದು ಕೇವಲ ಎಲ್ಲರಂತೆ ಪಾಠವನ್ನು ಮಾಡದೇ ಮಕ್ಕಳನ್ನು ಬಳಕೆ ಮಾಡಿ ಅವರಿಂದಲೇ ಕಲಿತಾ ಚಟುವಟಿಕೆಗಳನ್ನು ಮಾಡಿಸಿ ಪರಿಣಾಮಕಾರಿಯಾಗಿ ಪಾಠವನ್ನು ಬೋಧನೆ ಮಾಡಿ ಕಲಿಕೆ ಗಟ್ಟಿಗೊಳ್ಳುವಂತೆ ಮಾಡಿ ಗಮನ ಸೆಳೆದಿದ್ದಾರೆ
ಕೇವಲ ಗಮನ ಸೆಳೆಯದೆ ವಿಶಿಷ್ಟವಾಗಿ ಗಮನ ಸೆಳೆಯು ವದರೊಂದಿಗೆ ಮಾದರಿಯಾಗಿ ನಮ್ಮ ಮುಂದೆ ನಿಂತುಕೊಂ ಡಿದ್ದಾರೆ.ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲ್ಲೂಕಿನ ಡೆಂಗಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ್ ಶಿಕ್ಷಕಿಯಾಗಿರುವ ಶ್ರೀಮತಿ ಸಂಗೀತಾ ಶಂಕರ ಜಾನತೆ ಅವರೇ ವಿಶೇಷ ಬೋಧನೆಯ ಮೂಲಕ ಈಗ ಗಮನ ಸೆಳೆದಿದ್ದಾರೆ.
ಕ್ಲಾಸ್ ರೂಮ್ ನಲ್ಲಿ ಎಲ್ಲರ ಹಾಗೇ ಸಾಮಾನ್ಯ ರೀತಿಯಲ್ಲಿ ಪಾಠವನ್ನು ಮಾಡದೇ ಇವರು ಮಕ್ಕಳಿಂದಲೇ ಕಲಿಕಾ ಚಟುವಟಿಕೆಗಳಿಗೆ ಬೇಕಾದ ಪಾಠೋಪಕರಣಗಳನ್ನು ಮಾಡಿಸಿ ಅವುಗಳಿಂದ ಚಟುವಟಿಕೆಗಳನ್ನು ಮಾಡಿಸಿ ಮಕ್ಕಳಿಗೆ ಬೋಧನೆಯನ್ನು ಮಾಡಿ ಕಲಿಕಾ ಗುಣಮಟ್ಟ ಗಟ್ಟಿಗೊಳ್ಳುವಂತೆ ಮಾಡಿ ಪರಿಣಾಮಕಾರಿಯಾಗಿ ಕಲಿಸಿ ದ್ದಾರೆ ಇದರೊಂದಿಗೆ ಈ ಟೀಚರ್ ಅವರು ವಿಶೇಷ ವಿಭಿನ್ನ ವಾದ ರೀತಿಯಲ್ಲಿ ಬೋಧನೆ ಮಾಡಿ ಗಮನ ಸೆಳೆದಿದ್ದು ಮಾದರಿಯಾಗಿದ್ದಾರೆ.
ಸಾಮಾನ್ಯವಾಗಿ ನಾಲ್ಕು ಗೋಡೆಯ ಮಧ್ಯೆ ಮಕ್ಕಳ ಮುಂದೆ ನಿಂತುಕೊಂಡು ಪಾಠವನ್ನು ಮಾಡೊದು ಸರಳ ಸುಲಭದ ಮಾತಲ್ಲ ಹೀಗಿರುವಾಗ ಇವರು ಹೀಗೆ ವಿಭಿನ್ನ ವಾದ ರೀತಿಯಲ್ಲಿ ವಿಶೇಷವಾಗಿ ಕೆಲವೊಂದಿಷ್ಟು ಚಟುವಟಿ ಕೆಗಳನ್ನು ಉಪಯೋಗ ಮಾಡಿಕೊಂಡು ಅವುಗಳನ್ನು ಮಕ್ಕಳಿಂದಲೇ ಮಾಡಿಸಿ ಕ್ಲಾಸ್ ರೂಮ್ ನಲ್ಲಿಯೇ ಪ್ರಾಯೋಗಿಕವಾಗಿ ಮಾಡಿಸುತ್ತಾ ಕಲಿಕೆ ಗಟ್ಟಿಗೊಳ್ಳುವುದ ರೊಂದಿಗೆ ವಿಶೇಷವಾದ ಕಾರ್ಯದ ಮೂಲಕ ಮಕ್ಕಳಿಗೆ ಬೋಧನೆ ಮಾಡಿ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ ಸಂಗೀತಾ ಮೇಡಂ ಅವರು ಇದರೊಂದಿಗೆ ಇತರರಿಗೂ ಮಾದರಿಯಾಗಿ ಹೀಗೂ ಮಕ್ಕಳಿಗೆ ಕ್ಲಾಸ್ ರೂಮ್ ನಲ್ಲಿ ಪಾಠ ಬೋಧನೆ ಮಾಡಬಹುದಾ ಎಂಬೊದನ್ನು ತೋರಿಸಿ ಕೊಟ್ಟಿದ್ದಾರೆ.