ಬೆಂಗಳೂರು –
ಈಗಾಗಲೇ ರಾಜ್ಯದ ಸರ್ಕಾರಿ ನೌಕರರ 6ನೇ ವೇತನ ಆಯೋಗದ ಅವಧಿ ಮುಕ್ತಾಯವಾಗಿದ್ದು ವೇತನ ಪರಿಷ್ಕ್ರರಣೆಗಾಗಿ ಈಗಾಗಲೇ ರಾಜ್ಯ ಸರ್ಕಾರ ಸಮಿತಿಯನ್ನು ರಚನೆ ಮಾಡಿದೆ. ಅಧ್ಯಕ್ಷರ ನೇಮಕ ಮಾಜಿ ಮೂವರು ಸದಸ್ಯ ರನ್ನು ಕೂಡಾ ನೇಮಕ ಮಾಡಿದ್ದು ಇದರೊಂದಿಗೆ ಕಚೇರಿ ಯನ್ನು ನೀಡಿ ಇತರೆ ಕೆಲಸ ಕಾರ್ಯಕ್ಕಾಗಿ 44 ಸಿಬ್ಬಂದಿಗಳನ್ನು ಕೂಡಾ ನೇಮಕ ಮಾಡಿ ಆದೇಶವನ್ನು ಹೊರಡಿಸುವ ರಾಜ್ಯ ಸರ್ಕಾರ ಸಧ್ಯ ಸಮಿತಿ ಒಂದಿಷ್ಟು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು ಇದೇಲ್ಲದರ ನಡುವೆ ಈಗ ಈ ಭಾರಿಯ ವೇತನ ಆಯೋಗಕ್ಕೆ ತರಹೇವಾರಿ ಜವಾಬ್ದಾರಿಯ ಹೊರೆ ಇಲ್ಲ ಎಂಬಂತೆ ಕಾಣುತ್ತಿದೆ.
ರಾಜ್ಯದಲ್ಲಿ 1952ರಿಂದ ಈವರೆಗೆ 12 ವೇತನ ಆಯೋಗಗಳನ್ನು ರಚನೆ ಮಾಡಲಾಗಿದೆ. ಈ ಮೊದಲು ಆಯೋಗಗಳು ವೇತನ ಪರಿಷ್ಕರಣೆ ಯ ಜೊತೆಗೆ ಆಡಳಿತ ಸುಧಾರಣೆ,ಸರ್ಕಾರಿ ನೌಕರರ ಜವಾಬ್ದಾರಿ, ಕಾರ್ಯ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧ್ಯಯನ ನಡೆಸಿ, ವರದಿ ನೀಡಬೇಕಾಗಿತ್ತು. ಇದೆ ಕಾರಣಕ್ಕೆ ವರದಿ ಸಲ್ಲಿಕೆ ವಿಳಂಬವಾಗುತ್ತಿತ್ತು.
ಆದರೆ ಈ ಭಾರಿ ಸರ್ಕಾರ ವೇತನ ಆಯೋಗಕ್ಕೆ ವೇತನ ಪರಿಷ್ಕರಣೆ,ವಿವಿಧ ಭತ್ಯೆಗಳು ಮತ್ತು ನಿವೃತ್ತಿ ವೇತನದ ಕುರಿತು ಅಧ್ಯಯನಕ್ಕೆ ಮಾತ್ರ ಆದೇಶಿಸಿದೆ.ಹೀಗಾಗಿ ಈ ಬಾರಿ 7ನೇ ವೇತನ ಆಯೋಗಕ್ಕೆ ಬೇರೆ ಬೇರೆ ರೀತಿಯಾದ ಜವಾಬ್ದಾ ರಿಗಳಿಲ್ಲ ಹೀಗಾಗಿ ವಿಳಂಬವಾಗೊದಿಲ್ಲ ಸರಳ ವಾಗಿ ರಚನೆಯಾಗಲಿದ್ದು ಬೇಗ ಬೇಗ ಕಾರ್ಯ ವಾಗಲಿದೆ.
ಜೊತೆಗೆ ವರದಿ ನೀಡಲು ಸರ್ಕಾರ ಕೂಡಾ ಈ ಒಂದು ಸಮಿತಿಗೆ ಆರು ತಿಂಗಳ ಗಡುವನ್ನು ನೀಡಿದೆ. ಅದರೆ ಅದಕ್ಕಿಂತಲೂ ಮುಂಚಿತವಾ ಗಿಯೇ ಆಯೋಗ ವರದಿ ನೀಡಬಹುದಾಗಿದೆ. ಮಾರ್ಚ್ ತಿಂಗಳಿಂದಲೆ ವರದಿ ಅನುಷ್ಠಾನಗೊ ಳ್ಳುವ ಸಾಧ್ಯತೆ ಇದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ವಿಶ್ವಾಸ ವ್ಯಕ್ತಪಡಿಸಿದ್ದು ಸರ್ಕಾರ ಚುನಾವಣೆಗೆ ಹೋಗುವ ಮುನ್ನವೇ ಈ ಒಂದು ವರದಿ ಕೈಗೆ ಬಂದರೆ ಜಾರಿಗೆ ಮಾಡುತ್ತದೆ ಎಂಬೊದರಲ್ಲಿ ಎರಡು ಮಾತಿಲ್ಲ ಒಟ್ಟಾರೆ ಈ ಬಾರಿಯ ವೇತನ ಆಯೋಗ ಹಿಂದಿನಂತಿಲ್ಲ ತುಂಬಾ ಸರಳವಾಗಿದೆ. ವರದಿ ಸಿದ್ದಗೊಂಡು ಬೇಗನೆ ಜಾರಿಗೆ ಬರಲಿ ಎಂಬೊದು ನಮ್ಮ ಆಶಯವಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..