ಬೆಂಗಳೂರು –
ಚಲನಚಿತ್ರ ನಟಿ ಬಿಜೆಪಿ ಯ ಮಹಿಳಾ ಘಟಕದ ಶೃತಿ ಅವರನ್ನು ಕರ್ನಾಟಕ ಮಧ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ.ಈ ಹಿಂದೆ ಅಧ್ಯಕ್ಷರಾಗಿದ್ದ ಧಾರವಾಡದ ಹನಮಂತ ಕೊಟಬಾಗಿ ನೇಮಕವಾಗಿ ದ್ದರು.ಇವರ ನೇಮಕ ಕುರಿತಂತೆ ಬೆಳಗಾವಿ ಜಿಲ್ಲೆಯ ಕಿತ್ತೂರ ಶಾಸಕ ಸೇರಿದಂತೆ ಹಲವರು ವಿರೋಧ ಮಾಡಿದ್ದರು.ನಂತರ ಅವರನ್ನು ತಗೆಯಲಾಗಿತ್ತು ನಂತರ ಈವರೆಗೆ ಯಾರು ಕೂಡಾ ನೇಮಕವಾಗಿ ದ್ದಿಲ್ಲ ಸಧ್ಯ ಹೊಸದಾಗಿ ಇವರನ್ನು ನೇಮಿಸಲಾಗಿದೆ.
ಈವರೆಗೂ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಅವರನ್ನು ಮೊನ್ನೆಯಷ್ಟೇ ಬದಲಾವಣೆ ಮಾಡಲಾಗಿತ್ತು.ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಪ್ತ ಕಾಪು ಸಿದ್ದಲಿಂಗ ಸ್ವಾಮಿ ಅವರನ್ನು ಈ ಹುದ್ದೆಗೆ ನೇಮಿಸಲಾಗಿತ್ತು. ನಂತರ ಇದೆಲ್ಲದರ ಬೆಳವಣಿಯ ನಡುವೆ ಕಾವೇರಿ ನಿವಾಸದಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದ ಶೃತಿ ಅವರು ತಮ್ಮನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದವರ ಬಗ್ಗೆ ಕಾರಣ ಕೇಳಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಅವರನ್ನು ಮಧ್ಯಪಾನ ಸಂಯಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದು ಅಧಿಕಾರವನ್ನು ವಹಿಸಿಕೊಂಡಿದ್ದಾರೆ.