ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರಿಗೆ ಬಹುಮುಖ್ಯವಾದ ಮಾಹಿತಿ – ಡಿಸೆಂಬರ್ 30 ರಂದು ನಡೆಯಲಿದೆ ಈ ಒಂದು ಕಾರ್ಯಾಗಾರ ಹೌದು HRMS ತಂತ್ರಾಂಶ ಕುರಿತಂತೆ ರಾಜ್ಯ ಸರ್ಕಾರಿ ನೌಕರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿಯೊಂದನ್ನು ನೀಡ ಲಾಗಿದೆ.
ಹೌದು ರಾಜ್ಯ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ HRMS ಮತ್ತು ಖಜಾನೆ-2 ತಂತ್ರಾಂಶದ ಬಳಕೆಗೆ ಸಂಬಂಧಿಸಿದಂತೆ ತರಬೇತಿ ಹಮ್ಮಿಕೊಳ್ಳಲಾಗಿದೆ.ಇಲಾಖಾ ವ್ಯಾಪ್ತಿಯ ಕೇಂದ್ರ ಕಛೇರಿ, ಪ್ರಾದೇಶಿಕ ಕಛೇರಿಗಳು ಮತ್ತು ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವ ಹಿಸುತ್ತಿರುವ
ಅಧಿಕಾರಿ ಗಳು ಮತ್ತು ಸಿಬ್ಬಂದಿಗಳಿಗೆ HRMS ಮತ್ತು ಖಜಾನೆ-2 ತಂತ್ರಾಂಶದ ಬಳಕೆಗೆ ಸಂಬಂ ಧಿಸಿದಂತೆ ದಿನಾಂಕ 30.12.2023ರಂದು ಬೆಳಗ್ಗೆ 10.00 ಗಂಟೆಗೆ ಕೇಂದ್ರ ಕಛೇರಿಯಲ್ಲಿ ತರಬೇತಿ ಯನ್ನು ಹಮ್ಮಿಕೊಳ್ಳಲಾಗಿದೆ.
ಈ ಒಂದು ತರಬೇತಿಗೆ ಹಾಜರಾಗುವ ಸಿಬ್ಬಂದಿ ಗಳಿಗೆ ಹಾಜರಾತಿ ಪ್ರಮಾಣಪತ್ರ ಸಲ್ಲಿಸುವ ಷರತ್ತಿಗೊಳಪಟ್ಟು, ಸದರಿ ದಿನಾಂಕದಂದು ಅನ್ಯ ಕಾರ್ಯ ನಿಮಿತ್ತ ಮಂಜೂರು ಮಾಡಲಾಗಿದೆ. ಆಸಕ್ತ ನೌಕರರು ಕಛೇರಿ ಮುಖ್ಯಸ್ಥರ ಪೂರ್ವಾ ನುಮತಿಯೊಂದಿಗೆ ಸದರಿ ತರಬೇತಿ ಕಾರ್ಯ ಕ್ರಮದಲ್ಲಿ ಭಾಗವಹಿಸಲು ಅನುಮತಿ ನೀಡ ಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..