ಮೈಮರತು ಬಸ್ ನಿಲ್ದಾಣದಲ್ಲಿ ಯುವ ಜೋಡಿಯ‌……….ವೈರಲ್ ಆಗಿದೆ ಜೋಡಿ ಹಕ್ಕಿಯ ಆ ದೃಶ್ಯ ಗಳು………

Suddi Sante Desk

ಮಂಡ್ಯ –

ಫೆಬ್ರವರಿ 14ರ ಪ್ರೇಮಿಗಳ ದಿನಕ್ಕೆ ನಾಲ್ಕು ದಿನ ಬಾಕಿ ಇದೆ. ಇಂತಹ ಸಂದರ್ಭದಲ್ಲೇ ಯುವ ಪ್ರೇಮಿಗಳಿಬ್ಬರು ಸಾರ್ವಜನಿಕ ಸ್ಥಳದಲ್ಲಿಯೇ ಮುತ್ತಿನ ಚುಂಬನದಲ್ಲಿ ಮೈಮರೆತ ದೃಶ್ಯ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬಸ್ ನಿಲ್ದಾಣದ ಬಸ್ ಹಿಂದೆ ನಿಂತಿದ್ದಂತ ಯುವ ಪ್ರೇಮಿಗಳಿಬ್ಬರು, ಸಾರ್ವಜನಿಕರ ಪರಿವೇ ಇಲ್ಲದೇ, ಪರಸ್ಪರ ಅಪ್ಪಿ ಚುಂಬಿಸುತ್ತಿರುವಂತ ಘಟನೆ ಕಂಡು ಬಂದಿತು. ಇಂತಹ ದೃಶ್ಯವನ್ನು ಕಂಡಂತ ಸಾರ್ವಜನಿಕರು ಅಸಹ್ಯ ರೀತಿಯಲ್ಲಿ ನಡೆದುಕೊಂಡ ಪ್ರೇಮಿಗಳ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿದ್ದು ವೈರಲ್ ಆಗಿದೆ‌.

ವೀಡಿಯೋ ನೋಡಿದಂತ ನೆಟ್ಟಿಗರು ಸಾರ್ವಜನಿಕ ಸ್ಥಳದಲ್ಲೇ ಯುವ ಪ್ರೇಮಿಗಳು ಚುಂಬಿಸಿದ್ದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಅಲ್ಲದೇ ಇಂತಹ ಘಟನೆ ಸಾರ್ವಜನಿಕ ಸ್ಥಳದಲ್ಲಿ ನಡೆಯದಂತೆ ನೋಡಿಕೊಳ್ಳಬೇಕು ಎಂಬುದಾಗಿ ಆಗ್ರಹಿಸಿದ್ದಾರೆ.ಆದರೆ ಕೆಲವೊಮ್ಮೆ ಈ ಯುವ ಜೋಡಿಗಳು ಮೈಮರೆತು ಬಿಡುತ್ತಾರೆ. ಪ್ರೀತಿಯ ಹೆಸರಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿ, ಜನರಿಗೆ ಇರುಸು-ಮುರುಸು ತಂದೊಡ್ಡುತ್ತಾರೆ.

ಮಂಡ್ಯದಬಸ್ ನಿಲ್ದಾಣದಲ್ಲಿ ಯುವ ಜೋಡಿ ಬಸ್ ನಿಲ್ದಾಣದಲ್ಲಿ ನಿಂತಿತ್ತು. ಈ ವೇಳೆ ಬಸ್ ಹಿಂಭಾಗಕ್ಕೆ ಹೋಗಿ, ಹುಡುಗ- ಹುಡುಗಿ ಇಬ್ಬರು ಪರಸ್ಪರ ಮುತ್ತಿಕ್ಕಲು ಪ್ರಾರಂಭಿಸಿದರು. ಸುತ್ತಮುತ್ತ ಸಾರ್ವಜನಿಕರು ಓಡಾಡುತ್ತಿದ್ದರೂ, ಯುವ ಪ್ರೇಮಿಗಳ ಮುತ್ತಿನ ಪ್ರಸಂಗ ಮುಂದುವರೆದಿತ್ತು. ಏನೇ ಆಗಲಿ ಯುವ ಪ್ರೇಮಿಗಳು ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.