ಭಯದಲ್ಲಿ ಆ ಶಿಕ್ಷಕರು-ಎಲ್ಲವನ್ನೂ ಗಮನಿಸುತ್ತಿರುವ ಇಲಾಖೆಯ ಅಧಿಕಾರಿಗಳು….

Suddi Sante Desk

ಬೆಂಗಳೂರು –

ರಾಜ್ಯದಲ್ಲಿ ಸಧ್ಯ ಶೈಕ್ಷಣಿಕ ವರ್ಷ ಆರಂಭವಾಗಿದ್ದು ಬಹುತೇಕ ಶಿಕ್ಷಕರು ಶಾಲೆಗಳತ್ತ ಮುಖ ಮಾಡಿದ್ದು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಇದು ಸಧ್ಯ ಶಿಕ್ಷಕರ ಕಾರ್ಯ ಚಟುವಟಿಕೆ ಯಾಗಿದ್ದು ಇನ್ನೂ ಕೆಲ ಶಿಕ್ಷಕರು ಶಾಲೆಗಳಿಗೆ ಚಕ್ಕರ್ ಹೊಡೆ ಯುತ್ತಿರುವ ಕುರಿತು ಸಾರ್ವಜನಿಕರಿಂದ ದೂರು ಗಳು ಬಂದಿವೆ.ಇದರಿಂದಾಗಿ ಇದನ್ನು ಇಲಾಖೆ ಗಂಭೀರ ವಾಗಿ ಪರಿಗಣಿಸಿದೆ ಕರೋನ ಕಾರಣವನ್ನು ಮುಂದಿಟ್ಟುಕೊಂಡು ಪದೇ ಪದೇ ಶಾಲೆಗೆ ಗೈರಾಗು ತ್ತಿರುವ ಶಿಕ್ಷಕರಿಗೆ ಬಿಸಿ ಮುಟ್ಟಿಸಲು ಅಧಿಕಾರಿಗಳು ಮುಂದಾಗಿದ್ದಾರೆ

ಹೌದು ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿ ಹಿನ್ನೆಲೆ ಸರಕಾರಿ ಶಾಲೆಗಳ ತರಗತಿ ಗಳು ಆರಂಭವಾಗಿಲ್ಲ ಶೈಕ್ಷಣಿಕ ವರ್ಷ ಆರಂಭ ವಾಗಿದ್ದು ಶಾಲಾ ಶಿಕ್ಷಕರಿಗೆ ಬಾಗಿಲು ಓಪನ್‌ ಆಗಿವೆ.

ಕೋವಿಡ್‌ ಕಾರಣದೊಂದಿಗೆ ಮಕ್ಕಳು ಇಲ್ಲ ಅಂತಾ ನೆಪ ಹೇಳಿಕೊಂಡು ಆಗಾಗ ಶಾಲೆಗೆ ಗೈರಾಗುತ್ತಿರುವ ಶಿಕ್ಷಕರಿಗೆ ಬಿಸಿ ಮುಟ್ಟಿಸಲು ಈಗ ಅಧಿಕಾರಿಗಳು ಇಲಾಖೆ ಮುಂದಾಗಿದ್ದು ಗೈರಾಗುತ್ತಿರುವ ಶಿಕ್ಷಕರಿಗೆ ಈಗ ನೋಟಿಸ್‌ ಭಯ ಶುರುವಾಗಿದೆ. ಗ್ರಾಮೀಣ ಭಾಗದ ದೊಡ್ಡಿ,ತಾಂಡಾ ಶಾಲೆಗಳ ಶಿಕ್ಷಕರು ಸೇರಿ ದಂತೆ ಶಾಲೆಗೆ ಗೈರಾಗುತ್ತಿರುವ ಬಹುತೇಕ ಶಿಕ್ಷಕರಿಗೆ ಆತಂಕ ತಂದಿದ್ದು ಇದನ್ನು ಇಲಾಖೆಯ ಅಧಿಕಾರಿ ಗಳು ಗಂಭೀರವಾಗಿ ಪರಿಗಣಿಸಿದ್ದು ನೋಟೀಸ್ ನೀಡಲು ಸಿದ್ದತೆ ನಡೆಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.