ಚಾಮರಾಜನಗರ –
SMM ಅಂದ್ರೆ ಸೋಷಿಯಲ್ ಡಿಸ್ಟೆನ್ಸ್ ಮಾಸ್ಕ್ ಸ್ಯಾನಟೇಜರ್ ಅಂತ ಇದನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಲ್ಲಿ ಮಾತ್ರ ಮಹಾಮಾರಿ ಕೋರೊನಾ ಸೋಂಕಿನಿಂದ ಪಾರಾಗಲು ಸಾಧ್ಯ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಶಾಲಾ ಮಕ್ಕಳಿಗೆ ವಿವರಿಸಿದರು.

ಚಾಮರಾಜನಗರ ಜಿಲ್ಲೆಯ ಲೊಕ್ಕನಹಳ್ಳಿ ಸಮೀಪ ದ ಸರ್ಕಾರಿ ಶಾಲೆಗೆ ತೆರಳಿದ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಎಸ್ ಎಂ ಎಸ್ ಎಂದರೆ ಮೊಬೈಲ್‌ನಲ್ಲಿ ಕಿರು ಸಂದೇಶ ಕಳುಹಿಸೋದು ಅದು ಸೋಷಿಯಲ್ ಡಿಸ್ಟೆನ್ಸ್ ಮಾಸ್ಕ್ ಸ್ಯಾನಟೇಜರ ಅಂತ ಹೇಳಿದರು.

ಸಚಿವರ ವಿವರಣೆ ಕೇಳಿದ ವಿದ್ಯಾರ್ಥಿಗಳು ತಾವು ಕೂಡ ಎಸ್ ಎಂಎಸ್ ಅಳವಡಿಸಿ ಕೊಳ್ಳುವುದಾಗಿ ಹೇಳಿದರು.ಇದರೊಂದಿಗೆ ಈ ಒಂದು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ನೀವು ಹತ್ತು ವರ್ಷಗಳ ನಂತರ ಡಿಸಿ ಯಾಗಬೇಕೆಂದು ಹೇಳಿ ವಿದ್ಯಾರ್ಥಿ ಗಳಲ್ಲಿ ಆತ್ಮ ಸ್ಥೈರ್ಯ ವನ್ನು ತುಂಬಿದರು
ಒಂದು ಘಂಟೆಗಳ ಕಾಲ ಮಕ್ಕಳಿಗೆ ಪಾಠವನ್ನು ಹೇಳಿಕೊಟ್ಟು ಮಾತನಾಡಿದರು