ಹೊಸ ಬೊಲೆರೊ ಪೂಜೆಗೆಂದು ಧರ್ಮಸ್ಥಳಕ್ಕೆ ಹೊರಟವರು…..

Suddi Sante Desk

ಯಲ್ಲಾಪುರ –

ಹೊಸ ಬೊಲೆರೊ ಖರೀದಿ ಮಾಡಿ ಪೂಜೆಗೆಂದು ಧರ್ಮಸ್ಥಳಕ್ಕೆ ಹೊರಟಿದ್ದವರ ವಾಹನವೊಂದು ಅಪಘಾತವಾಗಿ ಇಬ್ಬರು ಸಾವಿಗೀಡಾದ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ಅರಬೈಲ್ ಘಟ್ಟದಲ್ಲಿ ನಡೆದಿದೆ. ಈ ಒಂದು ಭೀಕರ ಅಪಘಾತ ಸಂಭವಿಸಿದ್ದು ಬೊಲೆರೊ ವಾಹನಕ್ಕೆ ಎಡದಿಂದ ಒಂದು ಲಾರಿ, ಬಲದಿಂದ ಮತ್ತೊಂದು ಟಿಪ್ಪರ್ ಡಿಕ್ಕಿ ಹೊಡೆದಿದ್ದು, ಲಾರಿ-ಟಿಪ್ಪರ್ ಮಧ್ಯೆ ಸಿಕ್ಕ ಹೊಸ ಬೊಲೆರೊ ನಜ್ಜುಗುಜ್ಜಾಗಿದೆ.

ಬಾಗಲಕೋಟೆಯ ಲೋಕಾಪುರದ 8 ಜನರು ಬೊಲೆರೊ ದಲ್ಲಿ ಗೋಕರ್ಣ ಮತ್ತು ಧರ್ಮಸ್ಥಳ ಕ್ಕೆಂದು ಹೋಗುತ್ತಿದ್ದರು. ಈ ಪೈಕಿ ನಾಲ್ವರು ಮಹಿಳೆಯರು ಇಬ್ಬರು ಪುರುಷರು ಹಾಗೂ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದರು. ಹೊಸ ಬೊಲೆರೊ ಖರೀದಿಸಿದ್ದ ಕುಟುಂಬ ಕಾರಿಗೆ ಪೂಜೆ ಮಾಡಿಸ ಲೆಂದು ದೇವರ ಸನ್ನಿಧಿಗೆ ಹೊರಟಿದ್ದರು.

ಧರ್ಮಸ್ಥಳಕ್ಕೆ ಹೊರಟಿದ್ದರು ಮಾರ್ಗಮಧ್ಯೆ ಭೀಕರ ಅಪಘಾತವಾಗಿದ್ದು ಕಾರಿನಲ್ಲಿದ್ದ ಭಾಗ್ಯಶ್ರೀ(35) ಮತ್ತು ಚಿಕ್ಕಮ್ಮ (28) ಮೃತಪಟ್ಟಿದ್ದಾರೆ. ಬೊಲೆರೊ ದಲ್ಲಿದ್ದ ತಿಮ್ಮನ ಗೌಡ, ಹನುಮಂತ, ಲಕ್ಷ್ಮೀ, ಶೃತಿ, ಆಕಾಶ ಮತ್ತು ಅಪೇಕ್ಷಾ ಗಂಭೀರ ಗಾಯಗೊಂಡಿ ದ್ದಾರೆ. ಇನ್ನೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಇವರನ್ನು ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.