ದೇಶದೆಲ್ಲೆಡೆ ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದರು ಸಾವಿರಾರು ಮಕ್ಕಳು – ರಾಜ್ಯದಲ್ಲೂ ಕಂಬನಿ ಮೀಡಿಯುತ್ತಿವೆ ಮುದ್ದು ಕಂದಮ್ಮಗಳು…..

Suddi Sante Desk

ಹೊಸದಿಲ್ಲಿ –

ಮಹಾಮಾರಿ ಕೊರೊನಾದಿಂದಾಗಿ ದೇಶದೆಲ್ಲೆಡೆ ಪೊಷಕರನ್ನು ಕಳೆದುಕೊಂಡ ಸಾವಿರಾರು ಮಕ್ಕಳು ಅನಾಥರಾಗಿದ್ದಾರೆ.ಹೌದು ಕರ್ನಾಟಕದ 36 ಸೇರಿ ದೇಶಾದ್ಯಂತ ಸುಮಾರು 9,346 ಮಕ್ಕಳು ಅನಾಥ ರಾಗಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗ (ಎನ್‌ಸಿಪಿಸಿಆರ್‌) ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅಫಿಡೆವಿಟ್‌ನಲ್ಲಿ ತಿಳಿಸಿದೆ.

ಅಲ್ಲದೆ ಇಂಥ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರ ಸರಕಾರಕ್ಕೆ ನೀಡ ಬಹುದಾದ ಆರು ಶಿಫಾರಸುಗಳನ್ನು ನ್ಯಾಯಾಲಯದ ಮುಂದಿ ಟ್ಟಿದೆ.ಕಳೆದ ವಾರ ಕೊರೊನಾದಿಂದ ಅನಾಥರಾದ ಮಕ್ಕಳ ಬಗ್ಗೆ ವರದಿ ಸಲ್ಲಿಸುವಂತೆ ಎಲ್ಲ ರಾಜ್ಯ ಸರ ಕಾರಗಳಿಗೆ ಹಾಗೂ ಎನ್‌ಸಿಪಿಸಿಆರ್‌ಗೆ ಸುಪ್ರೀಂ ಕೋರ್ಟ್‌ ಸೂಚಿಸಿದ್ದ ಹಿನ್ನೆಲೆಯಲ್ಲಿ ಈ ಅಫಿಡವಿಟ್‌ ಸಲ್ಲಿಸಲಾಗಿದೆ.

ಬಾಲ ಸ್ವರಾಜ್‌ ಸಂಸ್ಥೆ ಸಿದ್ಧಪಡಿಸಿರುವ ಈ ಸಮೀಕ್ಷ ವರದಿಯಲ್ಲಿ, 2020ರ ಮಾರ್ಚ್‌ನಿಂದ 2021ರ ಮೇ 29ರ ವರೆಗೆ ನಡೆಸಲಾಗಿರುವ ಸಮೀಕ್ಷೆಯಲ್ಲಿ ದೇಶದಲ್ಲಿ 9,346 ಮಕ್ಕಳು ಪೋಷಕರ ಆಸರೆ ಕಳೆ ದುಕೊಂಡಿದ್ದಾರೆ.ತಂದೆ ತಾಯಿ ಇಬ್ಬರನ್ನೂ ಕಳೆದು ಕೊಂಡವರ ಸಂಖ್ಯೆ 1,742ರಷ್ಟಿದ್ದು, ಒಬ್ಬ ಹೆತ್ತವರ ನ್ನು ಕಳೆದು ಕೊಂಡವರ ಸಂಖ್ಯೆ 7,464ರಷ್ಟಿದೆ. ಇವ ರಲ್ಲಿ 1,224 ಮಕ್ಕಳು ಕಾನೂನು ಪ್ರಕಾರ ಪೋಷಕ ಹಕ್ಕುಗಳನ್ನು ಪಡೆದಿರುವ ಸಂಬಂಧಿಕರ ಜೊತೆಗೆ ಜೀವಿಸುತ್ತಿದ್ದರೆ,985 ಮಕ್ಕಳು ಕಾನೂನಿನ ಮಾನ್ಯತೆ ಪಡೆದಿರದ ಸಂಬಂಧಿಕರ ಜತೆಗಿದ್ದಾರೆ.6,612 ಮಕ್ಕ ಳು ಒಬ್ಬ ಹೆತ್ತವರೊಂದಿಗೆ ಜೀವಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಎನ್‌ಸಿಪಿಸಿಆರ್‌ನ ಪ್ರಮುಖ ಶಿಫಾರಸುಗಳು

  1. ಹೆತ್ತವರಲ್ಲಿ ಒಬ್ಬರು ಅಥವಾ ಇಬ್ಬರೂ ಇಲ್ಲವಾ ಗಿದ್ದಲ್ಲಿ ಅಥವಾ ಕುಟುಂಬದ ದುಡಿಯುವ ವ್ಯಕ್ತಿಯು ಕೊರೊನಾಕ್ಕೆ ಬಲಿಯಾಗಿದ್ದಲ್ಲಿ ಆ ಮಕ್ಕಳ ಎಲಿಮೆಂಟರಿ ಶಿಕ್ಷಣದ ಹೊರೆಯನ್ನು 2009ರ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ, ಸಂಬಂಧಿಸಿದ ರಾಜ್ಯ ಸರಕಾರವೇ ಹೊರಬೇಕು. ಮಕ್ಕಳು ಖಾಸಗಿ ಶಾಲೆಯಲ್ಲಿದ್ದರೂ ಅವರ ಜವಾಬ್ದಾರಿ ಸಂಬಂಧಪಟ್ಟ ರಾಜ್ಯ ವಹಿಸಿಕೊಳ್ಳ ಬೇಕು.ಈ ಸೌಲಭ್ಯ ಮಕ್ಕಳಿಗೆ ಸಿಗುವಂತೆ ಮಾಡಲು ಅನಾಥರಾದ ಮಕ್ಕಳ ಪೋಷಕರು, ತಾವಿರುವ ಜಿಲ್ಲೆಯಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಯನ್ನು (ಸಿಡಬ್ಲ್ಯುಸಿ) ಸಂಪರ್ಕಿಸಬೇಕು. ಸಮಿತಿಯ ಶಿಫಾರಸಿನ ಮೇರೆಗೆ ಮಕ್ಕಳನ್ನು ಆರ್‌ಟಿಇ ವ್ಯಾಪ್ತಿಗೊಳಪಡಿಸಿ ರಾಜ್ಯ ಸರಕಾರ ಗಳು ಶಿಕ್ಷಣದ ಖರ್ಚನ್ನು ವಹಿಸಿಕೊಳ್ಳಬಹುದು. 1ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ ಈ ಕ್ರಮ ಅನ್ವಯ. 8ನೇ ತರಗತಿ ದಾಟಿದ ಮಕ್ಕಳ ಶಿಕ್ಷಣ ಆರ್‌ಟಿಇ ವ್ಯಾಪ್ತಿಗೆ ಬರುವುದಿಲ್ಲವಾದ್ದ ರಿಂದ, ಆ ಮಕ್ಕಳ ಶಿಕ್ಷಣಕ್ಕಾಗಿ ರಾಜ್ಯ ಸರಕಾರ ಗಳು ತಮ್ಮ ವ್ಯಾಪ್ತಿಯಲ್ಲಿನ ಸರಕಾರಿ ಅಥವಾ ಖಾಸಗಿ ಶಾಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಗಳನ್ನು ಜಾರಿಗೊಳಿಸಬೇಕು. ಅಂಥ ಮಕ್ಕಳ ಶಿಕ್ಷಣದ ಖರ್ಚನ್ನು ಕೇಂದ್ರ ಸರಕಾರ ಈಗಾಗ ಲೇ ಘೋಷಿಸಿರುವಂತೆ ಪಿಎಂ-ಕೇರ್ಸ್‌ ವತಿ ಯಿಂದ ನಿಭಾಯಿಸಬೇಕು ಶಿಫಾರಸ್ಸು ಮಾಡಲಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.