ಬೈಕ್ ಗೂಡ್ಸ್ ಡಿಕ್ಕಿ ಮೂರು ಬೈಕ್ ಸವಾರರು ಸಾವು
ಚಾಮರಾಜನಗರ –
ಭೀಕರ ರಸ್ತೆ ಅಪಘಾತಕ್ಕೇ ಮೂವರು ಬೈಕ್ ಸವಾರರ ಸಾವಿಗೀಡಾರುವ ಪ್ರಕರಣ ಚಾಮರಾಜನಗರಲ್ಲಿ ನಡೆದಿದೆ.ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಧನಗೆರೆ-ಸತ್ತೇಗಾಲ ಬಳಿ ಈ ಒಂದು ರಸ್ತೆ ಅಪಘಾತ ಸಂಭವಿಸಿದೆ. ಬೈಕ್ ಮತ್ತು ಗೂಡ್ಸ್ ವಾಹನ ನಡುವೆ ಪರಸ್ಪರ ಡಿಕ್ಕಿಯಾಗಿದ್ದು ಭೀಕರ ಅಪಘಾತಕ್ಕೇ ಮೂವರು ಬೈಕ್ ಸವಾರರ ಸಾವಿಗೀಡಾಗಿದ್ದಾರೆ.
ಹನೂರು ತಾಲ್ಲೂಕಿನ ಪಳನಿ ಮೇಡು ಗ್ರಾಮದ ಡೇವಿಡ್, ಶೇಷರಾಜು, ಶೇಟು ಸಾವಿಗಾಡಾದವರಾಗಿದ್ದಾರೆ.ಗೂಡ್ಸ್ ವಾಹನ ಚಾಲಕನ ಅಜಾಗರೂಕತಾ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ. ತಾಲ್ಲೂಕಿನ ಸತ್ತೇಗಾಲ ಹಾಗೂ ಧನಗೆರೆ ಮುಖ್ಯರಸ್ತೆಯಲ್ಲಿ ಈ ಒಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಬೈಕ್ ನಲ್ಲಿ ಮೂವರು ತೆರಳುತ್ತಿದ್ದರು. ಇನ್ನೂ ಕೊಳ್ಳೇಗಾಲ ದಿಂದ ಸತ್ತೇಗಾಲದ ಕಡೆಗೆ ಗೂಡ್ಸ್ ವಾಹನ ಹೋಗುತ್ತಿತ್ತು. ವೇಗವಾಗಿ ಮತ್ತು ಅಜಾಗರೂಕತೆಯಿಂದ ಬಂದ ಗೂಡ್ಸ್ ವಾಹನ ಚಾಲಕ ಅಜಾಗರೂಕತೆಯಿಂದ ಚಲಿಸಿ ಬೈಕ್ ಸವಾರಿಗೆ ಡಿಕ್ಕಿ ಹೊಡೆದಿದೆ.ಡಿಕ್ಕಿ ಹೊಡೆದ ಪರಿಣಾಮದಿಂದ ಸ್ಥಳದಲ್ಲೇ ಮೂವರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ.ರಸ್ತೆ ತೂಂಬೆಲ್ಲಾ ಬೈಕ್ ನಲ್ಲಿದ್ದ ಮೂವರು ಗೆಳೆಯರ ದೇಹಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವ ಚಿತ್ರಣ ಕಂಡು ಬಂದಿತು.
ಇನ್ನೂ ಭೀಕರ ಅಪಘಾತದ ವಿಷಯ ತಿಳಿದ ಚಾಮರಾಜನಗರದ ಡಿವೈಎಸ್ಪಿ ನಾಗರಾಜು, ಸರ್ಕಲ್ ಇನ್ಸ್ಪೆಕ್ಟರ್ ಶ್ರೀಕಾಂತ್, ಗ್ರಾಮಾಂತರ ಎಸ್ಐ ಅಶೋಕ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಅಲ್ಲದೇ ಮೃತರಾದ ಶವಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಶವಾಗಾರಕ್ಕೆ ಸಾಗಿಸಿದರು.ಈ ಸಂಭಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣವನ್ನು ದಾಖಲಿಸಿಕೊಂಡಿರುವ.ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ. ಇನ್ನೂ ಅತ್ತ ವಿಷಯ ತಿಳಿದ ಮೂವರು ಯುವಕರ ಸಾವಿನ ಸುದ್ದಿ ಕೇಳಿದ ಕುಟುಂಬಸ್ಥರ ಆಕ್ರಂದನ ಸ್ಥಳದಲ್ಲಿ ಮುಗಿಲು ಮುಟ್ಟಿದ್ದು ಕಂಡು ಬಂದಿತು.