ಚಿತ್ರದುರ್ಗ –
ಮೂವರು ಶಿಕ್ಷಕಿಯರು ಅಮಾನತು ಮೂವರು ಶಿಕ್ಷಕಿಯರನ್ನು ಅಮಾನತು ಮಾಡಿದ ಜಿಲ್ಲಾಧಿಕಾರಿ ಹೌದು
ಲೋಕಸಭಾ ಚುನಾವಣೆಯ ಕರ್ತವ್ಯಲೋಪ ಹಿನ್ನಲೆಯಲ್ಲಿ ಮೂವರು ಶಿಕ್ಷಕಿಯರನ್ನು ಅಮಾನತು ಮಾಡಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.ಹೌದು ಲೋಕಸಭಾ ಚುನಾವಣೆ ಹಿನ್ನಲೆ ಎಲ್ಲೆಡೆ ಹದ್ದಿನ ಕಣ್ಣು ಇಡಲಾಗಿದ್ದು ಈ ಒಂದು ಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆಯ ದಂತೆ ಈಗಾಗಲೇ ಚೆಕ್ಪೋಸ್ಟ್ ಗಳನ್ನು ನಿರ್ಮಾಣ ಮಾಡಲಾಗಿದ್ದು
ಈ ಒಂದು ಚುನಾವಣೆಯಲ್ಲಿ ಕರ್ತವ್ಯ ನಿರ್ಲಕ್ಷ ಮಾಡಿದ ಹಿನ್ನಲೆಯಲ್ಲಿ ಮೂವರು ಶಿಕ್ಷಕಿಯರನ್ನು ಅಮಾನತು ಮಾಡಲಾಗಿಗೆ. ಚಿತ್ರದುರ್ಗ ಜಿಲ್ಲಾ ಚುನಾವಣಾಧಿಕಾರಿ, ಡಿಸಿ ಟಿ.ವೆಂಕಟೇಶ್ 3 ಶಿಕ್ಷಕಿ ಯರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಚುನಾವಣೆ ಕರ್ತವ್ಯ ನಿರ್ಲಕ್ಷ ಹಿನ್ನಲೆಯಲ್ಲಿ ಸಧ್ಯ ಜಿಲ್ಲೆಯಲ್ಲಿ 3 ಶಿಕ್ಷಕಿಯರನ್ನು ಅಮಾನತು ಮಾಡ ಲಾಗಿದೆ.
ಚಿಕ್ಕಪುರ ಗೊಲ್ಲರಹಟ್ಟಿ ಸರ್ಕಾರಿ ಶಾಲಾ ಶಿಕ್ಷಕಿ ಜಯಮ್ಮ ಕೆ ಬಿ, ತೋಪುರ ಮಾಳಿಗೆ ಶಾಲಾ ಶಿಕ್ಷಕಿ ರೂಪಾ ಎಸ್ ಹಾಗೂ ಮಠದ ಕುರುಬರಹಟ್ಟಿ ಶಾಲಾ ಶಿಕ್ಷಕಿ ಕೆ.ಗಿರಿಜಮ್ಮ ಎಂಬುವವರನ್ನು ಮತಗಟ್ಟೆ ಅಧಿಕಾರಿಗಳಾಗಿ (ಬಿಎಲ್ ಓ) ನೇಮಕ ಗೊಂಡಿದ್ದರು. ಆದರೆ, ಕರ್ತವ್ಯಕ್ಕೆ ಹಾಜರಾಗದೆ ನಿರ್ಲಕ್ಷ ತೋರಿದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾ ಚುನಾವಣಾಧಿಕಾರಿ, ಡಿಸಿ ಟಿ.ವೆಂಕಟೇಶ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಚಿತ್ರದುರ್ಗ…..