ಕಲಬುರ್ಗಿ –
ಭಾನಾಮತಿ ಶಂಕೆ ಹಿನ್ನಲೆಯಲ್ಲಿ ಒಂದೇ ಕುಟುಂಬ ದ ಮೂವರನ್ನು ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರ್ಗಿ ಪಟ್ಟಣದಲ್ಲಿ ಮೂವರನ್ನು ಕಂಬಕ್ಕೆ ಕಟ್ಟಿ ಥಳಿಸಲಾಗಿದೆ.
ಹೌದು ಭಾನಾಮತಿ ಶಂಕೆ ಹಿನ್ನಲೆಯಲ್ಲಿ ತಾಯಿ ಮಗ ,ಸೊಸೆಯನ್ನು ಕಂಬಕ್ಕೆ ಕಟ್ಟಿ ಥಳಿತ ಮಾಡ ಲಾಗಿದೆ.ಪರದಾರ ಮೋತಕಪಳ್ಳಿ ಗ್ರಾಮದ 14 ಜನ ಸೇರಿಕೊಂಡು ಕಂಬಕ್ಕೆ ಕಟ್ಟಿ ಈ ಒಂದು ಕೃತ್ಯವನ್ನು ಮಾಡಿದ್ದಾರೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಪರ ದಾರ ಮೋತಕಪಳ್ಳಿಯಲ್ಲಿ ಈ ಒಂದು ಅಮಾನುಷ ಕೃತ್ಯ ನಡೆದಿದೆ.ಶಿವಲೀಲಾ ,ಬಕ್ಕಮ್ಮ , ಸಂಗಪ್ಪಾ ಭಾನಮತಿ ಮಾಡಿರುವ ಶಂಕೆ ಹಿನ್ನಲೆಯಲ್ಲಿ ಹಲ್ಲೆ ನಡೆಸಿದ್ದಾರೆ.ಮೂರು ಜನರಿಗೆ ಕಂಬಕ್ಕೆ ಕಟ್ಟಿ ಹಲ್ಲೆ ಮಾಡುವ ವಿಡಿಯೋ ಮೊಬೈಲ್ ನಲ್ಲಿ ಸೇರೆಯಾಗಿದ್ದು ಈಗ ವೈರಲ್ ಆಗಿದೆ
ಮೂರು ಜನರಿಗೆ ಕಲ್ಲು ಬಡಿಗೆಗಳಿಂದ ಹಲ್ಲೆಯನ್ನು ಮಾಡಲಾಗಿದೆ.ಹಣಮಂತ ಮತ್ತು ಆತನ 14 ಜನ ಸಂಗಡಿಗರು ಸೇರಿಕೊಂಡು ಹಲ್ಲೆಯನ್ನು ಮಾಡಿದ್ದಾ ರೆ. ಹಣಮಂತ ಎಂಬುವರ ಮನೆಯಲ್ಲಿರುವ ವ್ಯಕ್ತಿಗೆ ಹುಷಾರಿಲ್ಲದ ಕಾರಣ ಭಾನಾಮತಿಯ ಶಂಕೆಯನ್ನು ವ್ಯಕ್ತಪಡಿಸಿ ಹೀಗೆ ಮಾಡಿದ್ದಾರೆ
ಈ ಮೂರು ಜನರೆ ಸೇರಿಕೊಂಡು ಮಾಟ ಮಂತ್ರ ಮಾಡಿ ನಮಗೆ ತೊಂದರೆ ಕೊಡ್ತಿದ್ದಾರೆ ಅಂತಾ ಹೀಗೆ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ.ಸುಲೆಪೇಟ್ ಪೊ ಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಮಾಡಿರುವ 14 ಜನರು ಹಲ್ಲೆಯ ಬಳಿಕ ಎಸ್ಕೆ ಪ್ ಆಗಿದ್ದು ಪೊಲೀಸರು ಬಂಧನಕ್ಕೆ ಜಾಲ ಬೀಸಿ ದ್ದಾರೆ