ಮಧುಗಿರಿ –
ಅನುದಾನ ದುರುಪಯೋಗ, ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯದ ಆರೋಪದ ಮೇರೆಗೆ ಮೂವರು ಶಿಕ್ಷಕರನ್ನು ಅಮಾನತುಗೊಳಿಸಿದ ಘಟನೆ ಮಧುಗಿರಿ ಯಲ್ಲಿ ನಡೆದಿದೆ ಹೌದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತರಾಯಪ್ಪ ಆದೇಶಿಸಿ ದ್ದಾರೆ.ಪಟ್ಟಣದ ಕೆ.ಆರ್.ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯ ಶಿಕ್ಷಕಿ ಎಚ್.ಎಸ್.ಅನುಪಮಾ ತಾಲ್ಲೂಕಿನ ಹಳೆಇಟಕಲೋಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ
ಶಾಲೆಯ ಸಹ ಶಿಕ್ಷಕ ಆರ್.ವೆಂಕಟಪ್ಪ, ದೊಡ್ಡ ದಾಳವಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಎ.ಆರ್.ಶ್ರೀನಿವಾಸಮೂರ್ತಿ ಅಮಾನತುಗೊಂ ಡವರು.ಎಚ್.ಎಸ್.ಅನುಪಮಾ ‘ಪಿಎಂಶ್ರೀ ಯೋಜನೆಯ ಅನುದಾನದಲ್ಲಿ ಖರ್ಚಾದ ಹಣಕ್ಕೆ ಸರಿಯಾದ ಬಿಲ್ ನೀಡಿಲ್ಲ. ಡಿಜಿಟಲ್ ಗ್ರಂಥಾಲ ಯಕ್ಕೆ ವೆಚ್ಚ ಮಾಡಿದ ಹಣಕ್ಕೂ ಬಿಲ್ ಮತ್ತು ಆದಾಯ ತೆರಿಗೆ ಕಟಾವಣೆ ಮಾಡಿಲ್ಲ. ಮಕ್ಕಳಿಂದ ಶಾಲೆ ಸ್ವಚ್ಛ ಮಾಡಿಸುತ್ತಾರೆ’ ಎಂಬ ಆರೋಪದ ಮೇಲೆ ಕ್ರಮಕೈಗೊಳ್ಳಲಾಗಿದೆ.
ಆರ್.ವೆಂಕಟಪ್ಪ ಹಳೆಇಟಕಲೋಟಿ ಗ್ರಾಮದ ಸರ್ವೆ ನಂಬರ್ 48 ರಲ್ಲಿ 3.33 ಗುಂಟೆ ಜಮೀನು ಮಂಜೂರಾತಿ ಸಂಬಂಧದಲ್ಲಿ ದಾಖಲಾತಿಗಳನ್ನು ತಿದ್ದಿ ಸಾಗುವಳಿ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿ ಸೂಚನೆ ಮೇರೆಗೆ ಕ್ರಮ ವಹಿಸಲಾಗಿದೆ.
‘ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಹೆಣ್ಣು ಮಕ್ಕಳನ್ನು ಶೌಚಾಲಯಕ್ಕೆ ಬಿಡದಿರು ವುದು, ಮಕ್ಕಳಿಗೆ ಯಾವಾಗಲೂ ನೃತ್ಯ ಮಾಡಿ ಸುತ್ತಾ ಸರಿಯಾಗಿ ಬೋಧನೆ ಮಾಡದೆ ಕರ್ತವ್ಯ ಲೋಪ ಎಸಗಿದ’ ಆರೋಪ ಎದುರಿಸುತ್ತಿದ್ದ ಎ.ಆರ್.ಶ್ರೀನಿವಾಸಮೂರ್ತಿ ಸೇರಿ ಮೂವರನ್ನು ಅಮಾನತುಗೊಳಿಸಲಾಗಿದೆ.
ಸುದ್ದಿ ಸಂತೆ ನ್ಯೂಸ್ ಮಧುಗಿರಿ …..