ಬೆಂಗಳೂರು –
ಮಹಾಮಾರಿ ಕೋವಿಡ್ ಗೆ ರಾಜ್ಯದಲ್ಲಿ ಮತ್ತೆ ಇಂದು ಮತ್ತೆ ಮೂವರು ಜನ ಶಿಕ್ಷಕರು ಸಾವಿಗೀಡಾಗಿದ್ದಾರೆ. ಕರೋನಾ ಸೋಂಕು ಕಾಣಿಸಿಕೊಂಡು ಆಸ್ಪತ್ರಗೆ ದಾಖಲಾಗಿದ್ದ ನಾಡಿನ ಮೂಲೆ ಮೂಲೆಗಳಲ್ಲಿನ ಶಿಕ್ಷಕರು ಇಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಹಮಜಿ ಹುಸೇನ್ ದಾವಣ ಗೇರಿ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ನವಿಹಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ದ್ದು ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ದಾವ ಣಗೇರಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯ ನ್ನು ಪಡೆದುಕೊಳ್ಳುತ್ತಿದ್ದರು.

ಮೈಸೂರು ಜಿಲ್ಲೆಯ ತಿ ನರಸೀಪುಲರ ತಾಲ್ಲೂಕಿನ ಹೊಸರುಹುಂಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ರಾಜೇಶ್ ಕೂಡಾ ಕೋವಿಡ್ ಗೆ ಬಲಿಯಾಗಿ ದ್ದಾರೆ.ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನಲೆ ಯಲ್ಲಿ ಮೈಸೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದ ರಾಜೇಶ್ ಅವರು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.

ಇತ್ತ ಬೆಂಗಳೂರಿನ ಉತ್ತರ ವಲಯದ ಪ್ರಾಥಮಿಕ ಶಾಲೆಯ ಚಂದ್ರಶೇಖರಯ್ಯ ಕೂಡಾ ಮಹಾಮಾರಿ ಕರೋನಾ ಗೆ ಬಲಿಯಾಗಿದ್ದಾರೆ.ಕಳೆದ ಒಂದು ವಾರ ದ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಬೆಂಗ ಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.ಇವರು ಕೂಡಾ ಚಿಕಿತ್ಸೆ ಫಲಿಸದೇ ಇಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರಾದ ಶಿಕ್ಷಕರಿಗೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರಾದ ಅಶೋಕ ಸಜ್ಜನ,ಎಲ್ ಐ ಲಕ್ಕಮ್ಮನವರ,ಶರಣಬಸವ ಬನ್ನಿಗೊಳ, ಸಂಗಮೇಶ ಕನ್ನಿನಾಯ್ಕರ್,ಎಸ್ ಎಫ್ ಪಾಟೀಲ, ರವಿ ಬಂಗೇನವರ,ಅಕ್ಬರಅಲಿ ಸೋಲಾ ಪೂರ,ರಾಜುಸಿಂಗ್ ಹಲವಾಯಿ,ಚಂದ್ರಶೇಖರ ಶೆಟ್ರು,ನಾರಾಯಣಸ್ವಾಮಿ,ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ, ಎಸ್ ಎಫ್, ಧನಿಗೊಂಡ, ರುಸ್ತಂ ಕನವಾಡೆ,ಬಿ ವಿ ಪ್ರೇಮಾವತಿ, ಕೀರ್ತಿವತಿ ವಿ ಎನ್, ಜೆ ಟಿ ಮಂಜುಳಾ,.ಸೀಮಾ ನಾಯಕ, ಭಾರತಿ ಭಂಡಾರಿ, ಮಂಜುಳಾ ಬಾಗಲೂರು, ನಾಗವೇಣಿ, ಇಂದಿರಾ.ಮುಕಾಂಬಿಕಾ ಭಟ್. ನಾಗರತ್ನ, ಲಕ್ಷ್ಮೀದೇ ವಮ್ಮ, ಎಂ ವಿ,ಕುಸುಮಾ ಎಸ್ ಹೊಳೆಯಣ್ಣ ನವರ,ಬಿ ವಿ ಅಂಗಡಿ ,ಜಗದೀಶ್ ಬೋಳಸೂರ, ಹನಮಂತಪ್ಪ ಬೂದಿಹಾಳ ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ ಅಲ್ಲದೇ ಮೃತ ಕುಟುಂಬಕ್ಕೆ ಕೂಡಲೇ ರಾಜ್ಯ ಸರ್ಕಾರ ಕರೋನಾ ವಾರಿಯರ್ಸ್ ಅಂತಾ ಸೂಕ್ತ ಪರಿಹಾರ ನೀಡುವಂತೆ ಒತ್ತಾಯವನ್ನು ಮಾಡಿದೆ.