ಬೆಳ್ಳಂ ಬೆಳಿಗ್ಗೆ ಭೀಕರ ಅಫಘಾತ ಮೂವರು ಯುವಕರು ಸಾವು – ಅಂಬ್ಯುಲೆನ್ಸ್ ಮತ್ತು ಬೈಕ್ ನಡುವೆ ಅಪಘಾತ…..

Suddi Sante Desk
ಬೆಳ್ಳಂ ಬೆಳಿಗ್ಗೆ ಭೀಕರ ಅಫಘಾತ ಮೂವರು ಯುವಕರು ಸಾವು – ಅಂಬ್ಯುಲೆನ್ಸ್ ಮತ್ತು ಬೈಕ್ ನಡುವೆ ಅಪಘಾತ…..

ಶಿವಮೊಗ್ಗ

ಬೆಳ್ಳಂ ಬೆಳಿಗ್ಗೆ ಭೀಕರ ಅಫಘಾತ ಮೂವರು ಯುವಕರು ಸಾವು – ಅಂಬ್ಯುಲೆನ್ಸ್ ಮತ್ತು ಬೈಕ್ ನಡುವೆ ಅಪಘಾತ ಹೌದು

ಅಂಬ್ಯುಲೆನ್ಸ್ ಮತ್ತು ಬೈಕ್‌ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೂವರು ಯುವಕರು ಸಾವಿಗೀಡಾದ ಘಟನೆ ಶಿವಮೊಗ್ಗ ದಲ್ಲಿ ನಡೆದಿದೆ.ಹೌದು ಅಂಬ್ಯುಲೆನ್ಸ್ ಹಾಗೂ ಬೈಕ್‌ ನಡುವೆ ಸಂಭವಿಸಿದ ಭೀಕರ ಅಪಘಾತ ದಲ್ಲಿ ಮೂವರು ಸವಾರರು ಸ್ಥಳದಲ್ಲೇ ಮೃತಪಟ್ಟಿ ದ್ದಾರೆ.

ದಾವಣಗೆರೆ ಜಿಲ್ಲೆಯ ಹಳೆ ಜೋಗದ ನಿವಾಸಿಗ ಳಾದ ಪ್ರಸನ್ನ(25)ಕಾರ್ತಿಕ್‌(24)ಮತ್ತು ಅರುಣ್‌ ಕುಮಾರ್‌(26) ಮೃತ ಬೈಕ್‌ ಸವಾರರಾದವರಾಗಿ ದ್ದಾರೆ.ಶಿವಮೊಗ್ಗದಿಂದ ಶಿಕಾರಿಪುರದ ಮೂಲಕ ಮಾಸೂರು ಗ್ರಾಮಕ್ಕೆ ಒಂದೇ ಬೈಕ್‌ನಲ್ಲಿ ಮಧ್ಯ. ರಾತ್ರಿ 1 ಗಂಟೆ ಸುಮಾರಿನಲ್ಲಿ ಬರುತ್ತಿದ್ದಾಗ ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದ ಬಳಿ ಎದುರಿಗೆ ಅತಿ ವೇಗವಾಗಿ ಬರುತ್ತಿದ್ದ ಅಂಬ್ಯುಲೆನ್ಸ್ ಬೈಕ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಮೂವರೂ ಸ್ಥಳದಲ್ಲೇ ದಾರುಣವಾಗಿ ಮೃತ ಪಟ್ಟಿದ್ದಾರೆ.

ಇನ್ನೂ ಸುದ್ದಿ ತಿಳಿದು ಶಿಕಾರಿಪುರ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀ ಲನೆ ನಡೆಸಿ ಮೂವರು ಯುವಕರ ಮೃತದೇಹಗ ಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಪಘಾತದಿಂದಾಗಿ ಅಂಬ್ಯುಲೆನ್ಸ್ ಮತ್ತು ಬೈಕ್‌ ರಸ್ತೆಯಲ್ಲಿ ನಿಂತಿದ್ದರಿಂದ ಕೆಲಕಾಲ ಈ ಮಾರ್ಗ ದಲ್ಲಿ ಬೆಳಗಿನ ಜಾವ ಸಂಚಾರಕ್ಕೆ ಅಡಚರಣೆ ಉಂಟಾಗಿತ್ತು ಸ್ಥಳದಲ್ಲಿದ್ದ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸುದ್ದಿ ಸಂತೆ ನ್ಯೂಸ್ ಶಿವಮೊಗ್ಗ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.