ವಿಜಯಪುರ –
ಶಾಲಾ-ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳು ಅಪಾಯ ಲೆಕ್ಕಿಸದೆ ಸರ್ಕಾರಿ ಬಸ್ ಗಳ ಟಾಪ್ ಮೇಲೆ ಹತ್ತಿ ಪ್ರಯಾ ಣಿಸುತ್ತಿದ್ದಾರೆ.ಸೂಕ್ತ ಬಸ್ ಸೌಲಭ್ಯವಿಲ್ಲದೆ ಪರದಾಡುತ್ತಿ ರುವ ವಿದ್ಯಾರ್ಥಿಗಳು ಬಸ್ ಗೆ ಏಣಿ ಬಳಿ ಬಸ್ ಮೇಲ್ಭಾಗ ದಲ್ಲಿ ಕೂತು ಸಂಚರಿಸುವ ದುಸ್ಥಿತಿ ಬಂದಿದೆ.
ಇದು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಗ್ರಾಮದ ವಿದ್ಯಾರ್ಥಿಗಳ ಗೋಳಾಟ.ಅಗತ್ಯ ಬಸ್ ಗಳನ್ನು ಬಿಡುವಂತೆ ವಿದ್ಯಾರ್ಥಿಗಳು ಮನವಿ ಮಾಡು ತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿ ಧಿಗಳು ಜಾಣಕುರುಡರಂತೆ ವರ್ತಿಸುತ್ತಿದ್ದಾರೆ.ಏನಾದರೂ ಅನಾಹುತ ಸಂಭವಿಸಿದೆ ಇದಕ್ಕೆ ಸಾರಿಗೆ ಇಲಾಖೆ ಅಧಿಕಾರಿ ಗಳೇ ಹೊಣೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಶಾಲಾ-ಕಾಲೇಜಿಗೆ ತೆರಳುವ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಸಹಜವಾಗಿ ಹೆಚ್ಚಿರುತ್ತೆ.ಆದರೆ ಅಗತ್ಯ ಸಾರಿಗೆ ಬಸ್ ಸಂಚಾರ ಇಲ್ಲದಿರುವ ಪರಿಣಾಮ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರ ಸಂಕಷ್ಟ ಹೇಳತೀರದು.ಜಾಗ ಇಲ್ಲದಿ ದ್ದರೂ ನೂರಾರು ಸಂಖ್ಯೆಯಲ್ಲಿ ಒಂದೇ ಬಸ್ ನಲ್ಲಿ ಸಂಚ ರಿಸುತ್ತಿದ್ದಾರೆ.ಬಸ್ ಒಳಗೆ ನಿಲ್ಲೋಕೂ ಜಾಗ ಇಲ್ಲದ ಕಾರಣ ಏಣಿ ಹಾಕಿ ಬಸ್ ಮೇಲೆ ಹತ್ತಿ ಜೀವ ಭಯದಲ್ಲೇ ಪ್ರಯಾಣಿಸಿದ್ದಾರೆ.