ಆದರ್ಶ ಗ್ರಾಮಗಳನ್ನು ಮಾಡಲು N H ಕೋನರಡ್ಡಿ ಪಣ – ಕಾಂಗ್ರೆಸ್ ಪಕ್ಷಕ್ಕೆ ಮತನೀಡಿ ಎಂದ ಕೋನರಡ್ಡಿ…..

Suddi Sante Desk
ಆದರ್ಶ ಗ್ರಾಮಗಳನ್ನು ಮಾಡಲು N H ಕೋನರಡ್ಡಿ ಪಣ – ಕಾಂಗ್ರೆಸ್ ಪಕ್ಷಕ್ಕೆ ಮತನೀಡಿ ಎಂದ ಕೋನರಡ್ಡಿ…..

ನವಲಗುಂದ

ಹೌದು ಆದರ್ಶ ಗ್ರಾಮಗಳಾಗಿ ಮಾಡುವೇ ಙಗೆ ಕಾಂಗ್ರೆಸ್ ಮತನೀಡಿ ಎಂದು ಕೋನರಡ್ಡಿ ಹೇಳಿದರು ವಿಧಾನಸಭಾ ಮತಕ್ಷೇತ್ರದ ಮಜ್ಜಿ ಗುಡ್ಡ, ಕೊಂಡಿಕೊಪ್ಪ ಸಾಸ್ವಿಹಳ್ಳಿ ಹಾಗೂ ಅಡ್ನೂರ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕರಾದ ಎನ್. ಎಚ್. ಕೋನರಡ್ಡಿ ಪ್ರಚಾರ ಮಾಡಿದರು

ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ವಿನೋದ ಅಸೂಟಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀಮತಿ ಶಾಂತಾಬಾಯಿ ಗುಜ್ಜಳ ಹಾಗೂ ಅನೇಕ ಮುಖಂಡರೊಂದಿಗೆ ಕಾಂಗ್ರೆಸ್ ಚುನಾವಣೆ ಪ್ರಚಾರ ನಡೆಸಿದರು.

ಗ್ರಾಮಗಳಲ್ಲಿನ ತಾಯಂದಿರು,ಸೋದರಿಯರು ಆರತಿ ಬೆಳಗಿ, ಪ್ರೀತಿ ಮತ್ತು ಅಭಿಮಾನದಿಂದ ಸ್ವಾಗತಿಸಿದರು.ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಶಾಸಕರಾದ ಎನ್. ಎಚ್. ಕೋನರಡ್ಡಿ ಮಾತನಾಡಿ ಮಜ್ಜಿಗುಡ್ಡ ಗ್ರಾಮದಲ್ಲಿ ಶವಸಂ ಸ್ಕಾರಕ್ಕೆ ಹೋಗುವ ರಸ್ತೆ ಹಾಳಾಗಿದ್ದು ಗ್ರಾಮ ಅನೇಕ ಸಮಸ್ಯೆಗಳ ಆಗಾರವಾಗಿದೆ.

ಕಳೆದ 5 ವರ್ಷ ಅವಧಿಯಲ್ಲಿ ಯಾವುದೇ ಅಭಿವೃದ್ದಿಯಾಗಿಲ್ಲ ಮಜ್ಜಿಗುಡ್ಡ ದಿಂದ ಅಣ್ಣಿಗೇ ರಿಗೆ ಹೋಗಲಿಕ್ಕೆ 1 ತಾಸು ಬೇಕು ಅಷ್ಟೊಂದು ರಸ್ತೆಗಳು ಹಾಳಾಗಿವೆ. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮುಂದಿನ ದಿನಮಾನದಲ್ಲಿ ಈ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಮಾಡಲಾಗುವುದು ಎಂದು ಹೇಳಿದರು.

ಪ್ರಚಾರವೇಳೆಯಲ್ಲಿ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಮಾತ ನಾಡಿ ಮಜ್ಜಿಗುಡ್ಡ ಗ್ರಾಮದ ಜನತೆ ಶುದ್ಧ ಮನಸ್ಸಿನವರು, ಗ್ರಾಮದಲ್ಲಿನ ರಸ್ತೆಗಳನ್ನು ನೋಡಿದ್ರೆ ಗೊತ್ತಾಗುತ್ತೆ, ಯಾವುದೇ ಅಭಿವೃದ್ದಿ ಯಾಗಿಲ್ಲ 5 ವರ್ಷಗಳ ಕಾಲ ಸುಮ್ಮನೆ ಇದ್ದು ಈಗ ವೋಟ್ ಕೇಳಲು ಬಂದ ಹಾಲಿ ಸಚಿವರಿಗೆ ತರಾಟೆಗೆ ತೆಗೆದುಕೊಂಡರು

ಇದನ್ನು ನೋಡಿದ್ರೆ ಗೊತ್ತಾಗುತ್ತೆ, ನೀವು ಕಾಂಗ್ರೆಸ್ ಪಕ್ಷ ಬೆಂಬಲಸಿ ಈ ಭಾರಿ ಎನ್. ಎಚ್. ಕೋನರಡ್ಡಿಯವರನ್ನು ಆರಿಸಿ ತಂದು ಅಭಿವೃದ್ದಿ ಮಾಡುವ ಮೂಲಕ ಈ ಗ್ರಾಮವನ್ನ ಆದರ್ಶ ಗ್ರಾಮವನ್ನಾಗಿ ಮಾಡಲಾಗುವುದು ಎಂದು ಹೇಳಿದರು.ನಂತರ ಶಾಂತಬಾಯಿ ಗುಜ್ಜಳ ಮಾತನಾಡಿ ಹೊಟ್ಟಿಲೀ ಇದ್ದ ಹೆಣ್ಣಮಗಳು ಆಸ್ಪತ್ರೆಗೆ ಹೋಗುವ ಮುಂಚೆ ದಾರಿಯಲ್ಲಿ ಬಾಣೇತನವಾಗುತ್ತೆ. ಅಷ್ಟೊಂದು ರಸ್ತೆಗಳು ಹಾಳಾಗಿವೆ ಎಂದು ಹೇಳಿದರು.

ಈ ವೇಳೆಯಲ್ಲಿ ಗ್ರಾಮದ ಗುರುಹಿರಿಯರು, ಯುವಕರು, ಮಹಿಳೆಯರು, ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

ಸುದ್ದಿ ಸಂತೆ ನ್ಯೂಸ್ ನವಲಗುಂದ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.