ಚಿಕ್ಕಬಳ್ಳಾಪೂರ –
ರೈತರಿಗೆ ಒಂದಲ್ಲ ಒಂದು ಸಂಕಷ್ಟ ಕಷ್ಟಗಳು ಇದ್ದೇ ಇರುತ್ತವೆ ಎನ್ನೊದಕ್ಕೇ ಈ ಚಿಕ್ಕಬಳ್ಳಾಪೂರ ರೈತರೇ ಸಾಕ್ಷಿ. ಮಳೆ ಇದ್ದರೇ ಬೆಳೆ ಬರೊದಿಲ್ಲ ,ಬೆಳೆ ಇದ್ದರೇ ಬೆಲೆ ಇರೊದಿಲ್ಲ, ಎಲ್ಲವೂ ಇದ್ದರೇ ಫಸಲು ಬರೊದಿಲ್ಲ , ಎಲ್ಲಾ ಸರಿಯಾಗಿದ್ದರೇ ಬೆಲೆ ಇರೊದಿಲ್ಲ ಹೀಗೆ ಒಂದಲ್ಲ ಒಂದು ಸಮಸ್ಯೆ ಸಂಕಷ್ಟ ರೈತರನ್ನು ಕಾಡುತ್ತಲೆ ಇರುತ್ತದೆ. ಹೌದು ಈ ಮಾತಿಗೆ ಟ್ಯೊಮ್ಯಾಟೋ ಬೆಳೆದ ಚಿಕ್ಕಬಳ್ಳಾಪೂರ ರೈತರೆ ಸಾಕ್ಷಿ.
ಸಧ್ಯ ಚಂಡಮಾರುತದ ಎಫೆಕ್ಟ್ ನಿಂದಾಗಿ ಚಿಕ್ಕಬಳ್ಳಾಪೂರ ದಲ್ಲಿ ರೈತರು ಬೆಳೆದ ಟ್ಯೊಮ್ಯಾಟೋ ಕಟಾವಿಗೆ ಬಂದಿದೆ. ಹಂತ ಹಂತವಾಗಿ ಕಟಾವು ಮಾಡಿ ಮಾರುಕಟ್ಟೆಗೆ ಕಳಿಸಬೇಕು ಎಂದರೆ ತುಂತುರುಮಳೆ ಆರಂಭವಾಗಿದೆ. ಚಂಡ ಮಾರುತದ ಏಪೆಕ್ಟ್ ನಿಂದಾಗಿ ತುಂತುರ ಮಳೆ ಆರಂಭವಾಗಿದ್ದು ಹೀಗಾಗಿ ಈ ಒಂದು ಮಳೆಗೆ ಟ್ಯೊಮ್ಯಾಟೋ ಕೊಳೆಯುತ್ತಿದೆ.
ಕಷ್ಟ ಪಟ್ಟ ಬೆಳೆ ಕೈಗೆ ಸಿಗದೇ ಹಾಳಾಗುತ್ತಿರುವ ಹಿನ್ನಲೆಯಲ್ಲಿ ಜಮೀನಿನಲ್ಲಿರುವ ಸಾಕಷ್ಟು ಟ್ಯೊಮ್ಯಾಟೋವನ್ನು ಲೋಡ್ ಗಟ್ಟಲೇ ಗುಂಡಿಗೆ ಸುರಿಯುತ್ತಿದ್ದಾರೆ ರೈತರು.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಕಾಶಾಪುರ ಗ್ರಾಮದ ಹೊರವಲಯದಲ್ಲಿ ಟನ್ ಗಟ್ಟಲೇ ಟ್ಯೊಮ್ಯಾಟೋ ವನ್ನು ಬೆಲೆ ಇದ್ದರೂ ಮಾರಾಟ ಮಾಡಲಾರದ ಪರಿಸ್ಥಿತಿ ನಿರ್ಮಾಣವಾಗಿದೆ .
ಪ್ರತಿ ಕೆಜೆಗಿ 15 ರೂಪಾಯಿ ಬೆಲೆ ಇದೆ. ಕೆಜೆ ಕ್ರೇಟ್ ಟೊಮ್ಯಾಟೊ ಗೆ 250 ರೂ ಇದ್ದರೂ ಪ್ರಯೋಜನವಾಗುತ್ತಿಲ್ಲ. ರೈತರ ತೋಟಗಳಲ್ಲೇ ತುಂತುರ ಮಳೆಗೆ ಹೆಚ್ಚಿನ ಪ್ರಮಾಣದಲ್ಲಿ ಇದು ಕೊಳೆಯುತ್ತಿರುವ ಹಿನ್ನಲೆಯಲ್ಲಿ ಟೊಮ್ಯಾಟೊ ವನ್ನು ಗುಂಡಿಗೆ ಸುರಿಯುತ್ತಿದ್ದಾರೆ ರೈತರು.
ಮೊದಲೇ ಹೇಳಿ ಕೇಳಿ ಸಾಕಷ್ಟು ಸಮಸ್ಯೆ ಸಂಕಷ್ಟಗಳು ಇವುಗಳ ನಡುವೆ ಈಗ ಟ್ಯೋಮ್ಯಾಟೋ ಬೆಳೆದ ರೈತರಿಗೆ ಮತ್ತೊಂದು ತೊಂದರೆಯಾಗಿದ್ದು ರೈತರು ಪರದಾಡುತ್ತಿದ್ದಾರೆ.