ನವದೆಹಲಿ –
ನ್ಯಾಷನಲ್ ಹೈವೇ ಆಥಾರಿಟಿ ಆಫ್ ಇಂಡಿಯಾ ದೇಶದ ಅತ್ಯುತ್ತಮ ಹೆದ್ದಾರಿಗಳ ಪಟ್ಟಿಯನ್ನ ಪ್ರಕಟಿಸಿದ್ದು ಈ ಒಂದು ಪಟ್ಟಿಯಲ್ಲಿ ಕರ್ನಾಟಕ ಎರಡು ಹೆದ್ದಾರಿಗಳಿಗೆ ಸ್ಥಾನ ಪಡೆದುಕೊಂಡಿವೆ.
ಹೌದು, ಟಾಪ್ 10 ಪಟ್ಟಿಯಲ್ಲಿ ರಾಜ್ಯದ ಎರಡು ಹೆದ್ದಾರಿ ಗಳು ಸ್ಥಾನವನ್ನು ಪಡೆದುಕೊಂಡಿವೆ. ಕುಂದಾಪುರ-ಗೋವಾ ರಾಷ್ಟ್ರೀಯ ಹೆದ್ದಾರಿ ಎರಡನೇ ಸ್ಥಾನ ಪಡೆದುಕೊಂಡಿದ್ರೆ ಇನ್ನೂ ಬೆಂಗಳೂರು-ನೆಲಮಂಗಲ ಹೆದ್ದಾರಿ 8ನೇ ಸ್ಥಾನ ಪಡೆದುಕೊಂಡಿದೆ.
ರಸ್ತೆಗಳ ಗುಣಮಟ್ಟ, ಸುರಕ್ಷತೆ ಮತ್ತು ಸೇವೆಗಳ ಅನುಗುಣವಾಗಿ ಈ ಸರ್ವೇ ನಡೆಸಲಾಗಿದ್ದು, ದೇಶದಾದ್ಯಂತ ಒಟ್ಟು 18,668 ಕಿ.ಮೀ ಅಂತರ ವನ್ನು ಸಂಪರ್ಕಿಸುವ 219 ರಾಷ್ಟ್ರೀಯ ಹೆದ್ದಾರಿ ಗಳನ್ನ ಈ ಸರ್ವೇಗೆ ಒಳಪಡಿಸಲಾಗಿದೆ. ಇದೇ ಮೊದಲ ಬಾರಿಗೆ ದೇಶದಲ್ಲಿ ಇಂಥ ಸರ್ವೇ ನಡೆಸ ಲಾಗಿದ್ದು, ಇನ್ಮುಂದೆ 6 ತಿಂಗಳಿಗೊಮ್ಮೆ ಇಂಥ ಸರ್ವೇಗಳನ್ನ ನಡೆಸಲಾಗುತ್ತೆ ಎಂದು ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳಿದೆ.
ಟಾಪ್ 10 ಹೆದ್ದಾರಿಗಳ ಪಟ್ಟಿ ಈ ಕೆಳಗಿನಂತಿದೆ.
1) ಅಹಮದಾಬಾದ್-ವಡೋದರಾ-NH48- 102 ಕಿ.ಮೀ
2) ಗೋವಾ, ಕರ್ನಾಟಕ-ಕುಂದಾಪುರ- NH-66-141ಕಿ.ಮೀ
3) ಅಹಮದಾಬಾದ್- ವಡೋದರಾ- NE-1-93ಕಿ.ಮೀ
4) ಸಿಮ್ಗಾ-ಸರ್ಗಾವ್-NH-130-42 ಕಿ.ಮೀ
5) ಸೋಲಾಪುರ್- ಯೆದೆಸಿ-NH-211-42 ಕಿ.ಮೀ
6) ಕೃಷ್ಣಗಿರಿ-ವಲಜಾಹ್ಪೇಟ್-NH-48- 148 ಕಿ.ಮೀ
7) ಗೋಧ್ರಾ-ಗುಜರಾತ್ -ಮಧ್ಯಪ್ರದೇಶ್- NH47-87.1 ಕಿ.ಮೀ
8) ಬೆಂಗಳೂರು-ನೆಲಮಂಗಲ- NH4
9) ಇಸ್ಲಾಂನಗರ್-ಕಡ್ತಲ್-NH44
10)ಮಹುಲಿಯಾ-ಬಹರಾಗೊರ&ಬಹರಾಗೊರ-ಚಿಚಿರಾ-NH-33