ಹಾಸನ –
ಧಾರಾಕಾರವಾದ ಮಳೆಗೆ ಹಾಸನ ಜಿಲ್ಲೆಯಲ್ಲಿ ಹಲವೆಡೆ ಶಾಲೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಗಳು ಸಂಪೂರ್ಣ ವಾಗಿ ಬಂದ್ ಆಗಿವೆ.ಹೌದು ಸುರಿದ ಭಾರಿ ಮಳೆಗೆ ಶಾಲಾ ಸಂಪರ್ಕ ದ ಪ್ರಮುಖ ರಸ್ತೆ ಗಳು ಬಂದ್ ಆಗಿವೆ
ಹೌದು ಜಿಲ್ಲೆಯ ಹಲವೆಡೆ ಮಳೆಯಿಂದ ಶಾಲೆ ಸಂಪರ್ಕ ರಸ್ತೆ ಕಡಿತಗೊಂಡಿವೆ.ಹೀಗಾಗಿ ಕೆಸರು ಗದ್ದೆಯಂತಾಗಿವೆ ರಸ್ತೆಗಳು.ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಕಲ್ಲಾರೆ ಹಳ್ಳಿಯಲ್ಲಿನ ಈ ಒಂದು ಘಟನೆಯೇ ಸಾಕ್ಷಿಯಾಗಿದೆ. ಶಾಲೆಗೆ ಹೋಗಲು ಮಕ್ಕಳು ಹಾಗೂ ಶಿಕ್ಷಕರ ಪರದಾಟ ದ ಚಿತ್ರಣ ಕಂಡು ಬಂದಿತು.ರಸ್ತೆ ದುರಸ್ಥಿ ಮಾಡುವಂತೆ ಮನವಿ ಮಾಡಿದ್ದಾರೆ ಸ್ಥಳೀಯರು
ಇತ್ತ ತಿರುಗಿ ನೋಡದ ಅಧಿಕಾರಿಗಳು ಹಾಗೂ ಜನಪ್ರತಿನಿ ಧಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಚುನಾ ವಣೆ ಬಂದಾಗ ಸರಿಯಾದ ಉತ್ತರ ಕೊಡುತ್ತೇವೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.