ಸಿಡ್ನಿ –
ಭಾರತ ಕ್ರಿಕೇಟ್ ತಂಡ ಆಸ್ಪ್ರೇಲಿಯಾ ಪ್ರವಾಸವನ್ನು ಕೈಗೊಂಡಿದೆ. ಪ್ರವಾಸದಲ್ಲಿರುವ ಭಾರತದ ಕ್ರಿಕೇಟ್ ತಂಡ ಏಕದಿನ ಸರಣಿಯ ಮೊದಲು ಆಡಿದ ಮೊದಲ ಏಕದಿನ ಪಂದ್ಯದಲ್ಲಿಯೇ ಸೋಲನ್ನು ಅನುಭವಿಸಿತು.ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 66 ರನ್ ಗಳ ಹೀನಾಯ ಸೋಲನ್ನು ಅನುಭವಿಸಿತು.
ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಟೀಂ ಇಂಡಿಯಾ ವಿರುದ್ದ 66 ರನ್ನುಗಳ ಜಯ ದಾಖಲಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್‌ಗೆ ಮಾಜಿ ನಾಯಕ ಸ್ಟೀವನ್ ಸ್ಮಿತ್, ನಾಯಕ ಆರನ್ ಫಿಂಚ್ ಹಾಗೂ ಆರಂಭಿಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಅವರ ಸ್ಪೋಟಕ ಬ್ಯಾಟಿಂಗ್ ನಿಂದ ಆಸ್ಟ್ರೇಲಿಯಾ ತಂಡ ಅಂತಿಮವಾಗಿ 50 ಓವರ್ ಗಳಲ್ಲಿ 6 ವಿಕೇಟ್ ನಷ್ಟಕ್ಕೇ 367 ರನ್ ನೊಂದಿಗೆ ಭಾರತ ಕ್ರಿಕೇಟ್ ತಂಡಕ್ಕೆ ಸವಾಲಿನ ಮೊತ್ತ ನೀಡಿತು.
ಇನ್ನೂ ನಂತರ ಈ ಸವಾಲನ್ನು ಬೆನ್ನತ್ತಿದ ಟೀಂ ಇಂಡಿಯಾ ಪರ ಆರಂಭಿಕ ಆಟಗಾರರಾಗಿ ಶಿಖರ್ ಧವನ್ ಮತ್ತು ಮಯಂಕ್ ಅಗರವಾಲ್ ಅವರ ಜೊತೆಯಾಟದಲ್ಲಿ 53 ರನ್ ಸೇರಿಸಿದರು. ಹ್ಯಾಜಲ್ ವುಡ್ ನ 5ನೇ ಓವರ್ ನಲ್ಲಿ ಮ್ಯಾಕ್ಸ್ ವೆಲ್ ಗೆ ಕ್ಯಾಚ್ ನೀಡಿದ ಮಯಂಕ್ ಅಗರವಾಲ್ 22 ರನ್ ಗಳಿಸಿ ತಮ್ಮ ವಿಕೇಟ್ ಒಪ್ಪಿಸಿ ಪೆವಿಲಿಯನ್ ನಿಂದ ತೆರಳಿದರು. ನಂತರ ಬಂದ ವಿರಾಟ್ ಕೋಹ್ಲಿ ಕೂಡಾ 22 ರನ್ ಗಳಿಸಿ 9.3 ಓವರ್ ನಲ್ಲಿ ಹ್ಯಾಜಲ್ ವುಡ್ ಹಾಕಿದ ಬೌಲ್ ಗೆ ಆರನ್ ಪಿಂಚ್ ಕೈಗೆ ಕ್ಯಾಚ್ ಒಪ್ಪಿಸಿದರು. ನಂತರ ಬಂದ ಶ್ರೇಯಸ್ ಅಯ್ಯರ್ ಕೂಡಾ ಕ್ರೀಜ್ ನಲ್ಲಿ ನಿಂತುಕೊಂಡು ಆಟವಾಡದೇ 2 ರನ್ ಗಳಿಸಿ ಹ್ಯಾಜರ್ ವುಡ್ ನ ಬೌಲಿಂಗ್ ನಲ್ಲಿ ಅಲೆಕ್ಸ್ ಕ್ಯಾರಿ ಗೆ ಕ್ಯಾಚ್ ನೀಡಿ ತೆರಳಿದರು.
ನಂತರ ಬಂದ ಕನ್ನಡಿಗ ಕೆ ಎಲ್ ರಾಹುಲ್ ಕೂಡಾ 12 ರನ್ ಗಳಿಸಿ ಜಂಪಾ ಬಾಲಿಂಗ್ ಗೆ ಸ್ಮೀತ್ ಗೆ ಕ್ಯಾಚ್ ಒಪ್ಪಿಸಿ ಪೆವಿಲಿಯನ್ ಗೆ ಪರೇಡ್ ಮಾಡಿದ್ರು. ಇನ್ನೂ ನಂತರ ಬಂದ ಆಲ್ ರೌಂಡರ್ ಹಾರ್ಧಿಕ್ ಪಾಂಡ್ಯ ಅದ್ಬುತವಾಗಿ ಬ್ಯಾಟಿಂಗ್ ಮಾಡಿ ತುಂಬಾ ಸಮಯ ಮೈದಾನದಲ್ಲಿದ್ದು ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದ್ರು.90 ರನ್ ಗಳಿಸಿ ಭಾರತ ತಂಡದ ಮೊತ್ತವನ್ನು ಒಂದು ಹಂತಕ್ಕೇ ತಗೆದುಕೊಂಡು ಬಂದು ಶತಕ ವಂಚಿತರಾಗಿ 90 ರನ್ ಗಳಿಸಿ ಆಡಂ ಜಂಪಾ ಓವರ್ ನಲ್ಲಿ ಮಿಷೆಲ್ ಸ್ಪಾರ್ಕ್ ಗೆ ಕ್ಯಾಚ್ ನೀಡಿ ಪೆವಿಲಿಯನಗೆ ತೆರಳಿದರು.
ನಂತರ ಬಂದ ಯಾವೊಬ್ಬ ಆಟಗಾರರು ಹೆಚ್ಚು ಕಾಲ ಮೈದಾನದಲ್ಲಿ ನಿಂತುಕೊಳ್ಳಲಿಲ್ಲ ಅಂತಿಮವಾಗಿ 50 ಓವರ್ ಗಳಲ್ಲಿ 8 ವಿಕೇಟ್ ನಷ್ಟಕ್ಕೇ 308 ರನ್ ಸ್ಕೋರ್ ನೊಂದಿಗೆ ಭಾರತ ತಂಡ ತನ್ನ ಆಟವನ್ನು ಮುಗಿಸಿತು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಅರ್ಧಶತಕಗಳು ಆಸೀಸ್ ಬೌಲಿಂಗ್ ಗೆ ಪ್ರತಿರೋಧ ಒಡ್ಡಿದರೂ ಅಂತಿಮವಾಗಿ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿತು. ಆಸೀಸ್ ಪರ ಆಡಂ ಜಂಪಾ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಜೋಶ್ ಹ್ಯಾಜಲ್‌ವುಡ್ ಭಾರತ ತಂಡಕ್ಕೆ ಆರಂಭ ಆಘಾತ ನೀಡಿದರು. ಕೊನೆಯಲ್ಲಿ ಎಂಟು ವಿಕೆಟ್ ಕಳೆದುಕೊಂಡ ಭಾರತ ತಂಡ 308 ರನ್ನು ಗಳಿಸಿ ಸೊಲನ್ನೊಪ್ಪಿಕೊಂಡಿತು.ಐಪಿಎಲ್ ಲೀಗ್‌ನಲ್ಲಿ ಮಿಂಚದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಆಸೀಸ್ ಎದುರು ಕೂಡ ದೀರ್ಘ ಇನ್ನಿಂಗ್ಸ್ ಬೆಳೆಸಲು ವಿಫಲರಾದರು. ಶತಕವೀರ ಸ್ಟೀವನ್ ಸ್ಮಿತ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.