ಹಾವೇರಿ –
ಕಬ್ಬು ಕಟಾವು ಮಾಡಲು ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಟ್ಯಾಕ್ಟರ್ ಗೆ ಹಿಂದಿನಿಂದ ಬಂದ ಮತ್ತೊಂದು ಟ್ಯಾಕ್ಟರ್ ಡಿಕ್ಕಿಯಾದ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿಯ ಹಂಸಬಾವಿಯ ಚಿಕ್ಕಖಣಜ ಗ್ರಾಮದ ಬಳಿ ಈ ಒಂದು ಅಪಘಾತವಾಗಿದೆ. ಕಬ್ಬನ್ನು ಕಟಾವು ಮಾಡಲು 15 ಕ್ಕೂ ಹೆಚ್ಚು ಕಾರ್ಮಿಕರನ್ನು ಟ್ಯಾಕ್ಟರ್ ನಲ್ಲಿ ಕರೆದುಕೊಂಡು ಹೋಗುಲಾಗುತ್ತಿತ್ತು.
ಭತ್ತದ ಹುಲ್ಲನ್ನು ತುಂಬಿಕೊಂಡು ಹಿಂದಿನಿಂದ ಬಂದ ಮತ್ತೊಂದು ಟ್ಯಾಕ್ಟರ್ ಮುಂದೆ ಹೊರಟಿದ್ದ ಟ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಎರಡು ಟ್ಯಾಕ್ಟರ್ ಗಳು ಪಲ್ಟಿ ಯಾಗಿವೆ.
ಅದೃಷ್ಟವಶಾತ್ ಎರಡು ಟ್ಯಾಕ್ಟರ್ ನಲ್ಲಿದ್ದವರು ಪಾರಾಗಿದ್ದು ಒಂದಿಬ್ಬರಿಗೆ ಬಿಟ್ಟರೇ ಯಾರಿಗೂ ದೊಡ್ಡ ಪ್ರಮಾಣದಲ್ಲಿ ಗಾಯಗಳಾಗಿಲ್ಲ. ಇನ್ನೂ ವಿಷಯ ತಿಳಿದ ಕಾಗಿನೆಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಇನ್ನೂ ಹಾನಗಲ್ಲ್ ನಿಂದ ಕಬ್ಬನ್ನು ಕಟಾವು ಮಾಡಲು ಕಾರ್ಮಿಕರನ್ನು ಕರೆದುಕೊಂಡು ಹೊರಟಿದ್ದರು. ಇನ್ನೂ ಭತ್ತ ವನ್ನು ತಗೆದುಕೊಂಡು ಹಾನಗಲ್ ಕಡೆಗೆ ಟ್ಯಾಕ್ಟರ್ ಹೊರಟಿತ್ತು. ಇವೆಲ್ಲದರ ನಡುವೆ ಕಬ್ಬು ಕಟಾವು ಮಾಡಲು ಹೊರಟಿದ್ದ ಎಲ್ಲಾ ಕಾರ್ಮಿಕರು ಗಾಯಗೊಂಡಿದ್ದು
ಇನ್ನೂ ಕರೆ ಬರುತ್ತಿದ್ದಂತೆ ಸ್ಥಳಕ್ಕೇ ಆಗಮಿಸಿದ ಎರಡು 108 ವಾಹನಗಳ ಸಿಬ್ಬಂದಿಗಳಾದ ಲಿಂಬವ್ವ ಕಟ್ಟಿಮನಿ,ದಯಾನಂದ ,ನಾಗರಾಜ,ಕೊತಂಬ್ರಿ,ಚಂದ್ರಶೇಖರ ಕಿತ್ತೂರ ಸಿಬ್ಬಂದಿಗಳು ಮಹಮ್ಮದ್ ಶಫಿ ಮಾರ್ಗದರ್ಶನದಲ್ಲಿ ಗಾಯಾಳುಗಳನ್ನು ಹಾನಗಲ್ಲ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಇಬ್ಬರು ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದು ಇನ್ನೂಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.