ಬಸ್ ಗಾಗಿ ವಿದ್ಯಾರ್ಥಿ ಗಳ ಪರದಾಟ – ವಿದ್ಯಾರ್ಥಿ ಗಳಿಗೆ ಆಸರೆಯಾಗಿವೆ ಟ್ರ್ಯಾಕ್ಟರ್ ಗಳು

Suddi Sante Desk

ವಿಜಯಪುರ

ಸರ್ಕಾರಿ ಬಸ್ ಸೌಲಭ್ಯ ಸಿಗದ ಕಾರಣ ವಿದ್ಯಾರ್ಥಿಗಳು ಟ್ರ್ಯಾಕ್ಟರ್ ನಲ್ಲಿ ಶಾಲೆಗೆ ಹೋಗಿರುವ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹಲಗಣಿ ಗ್ರಾಮದಲ್ಲಿ ಘಟನೆ.ಈ ಭಾಗದಲ್ಲಿ ಸಂಚರಿಸುವ ಬಸ್ ಗಳು ಈ ಹಳ್ಳಿಗೆ ನಿಲ್ಲಿಸದ ಕಾರಣ ಕಂಡಕ್ಟರ್ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದಿದೆ.

ಇದರಿಂದ ವಿದ್ಯಾರ್ಥಿಗಳನ್ನು ನಿರ್ವಾಹಕ ಬಿಟ್ಟು ಹೋಗು ತ್ತಿದ್ದು ಬಳಿಕ ವಿದ್ಯಾರ್ಥಿಗಳ ಪೋಷಕರು ಟ್ರ್ಯಾಕ್ಟರ್ ಮೂಲಕ ವಿದ್ಯಾರ್ಥಿಗಳನ್ನು ಬಬಲೇಶ್ವರ ಪಟ್ಟಣದ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ.

ಇದರಿಂದ ಬೇಸತ್ತ ವಿದ್ಯಾರ್ಥಿಗಳು ಪ್ರತಿಭಟನೆಯ ಹಾದಿ ಹಿಡಿದಿದ್ದರು.ವಿದ್ಯಾರ್ಥಿಗಳ ಜೊತೆ ಬಸ್ ನಿರ್ವಾಹಕನಿಂದ ಅಸಭ್ಯ ವರ್ತನೆ‌‌‌ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರ ಆರೋಪ ಮಾಡಿದ್ದು ಸ್ಥಳೀಯ ಶಾಸಕರು ಈ ಒಂದು ವಿಚಾರ ಕುರಿತು ಸ್ಪಂದಿಸೊದು ಅವಶ್ಯಕತೆ ಇದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.