ಬೆಂಗಳೂರು –
ಸಾಮಾನ್ಯವಾಗಿ ಯಾವುದೇ ಒಂದು ವರ್ಗಾವಣೆ ಪ್ರಕ್ರಿಯೆ ಯನ್ನು ಮುಗಿಸಲು ಅಬ್ಬಬ್ಬಾ ಎಂದರೆ ಒಂದು ತಿಂಗಳು ಇಲ್ಲವೇ ಎರಡು ತಿಂಗಳು ಬೇಕಾಗು ತ್ತದೆ.ಆದರೆ ಶಿಕ್ಷಕರ ವರ್ಗಾವಣೆ ಮಾಡಲು ಒಂದು ವರ್ಷ ಬೇಕಾ ಇದನ್ನು ಮಾಡಲು ಒಂದು ವರ್ಷದ ಯೋಜನೆಯನ್ನು ಈ ಬಾರಿ ಮಾಡಲಾಗಿದೆ
ರಾಜ್ಯದಲ್ಲಿ ಈ ಹಿಂದೆ ಶಿಕ್ಷಕರ ವರ್ಗಾವಣೆಯನ್ನು ಒಂದು ಒಂದೂವರೆ ತಿಂಗಳಲ್ಲಿ ಎಲ್ಲಾ ರೂಪರೇಷೆ ಗಳನ್ನು ಮಾಡಿ ಮುಗಿಸಿದ ಉದಾಹರಣೆಗಳುಂಟು. ಹೀಗಿದ್ದರೂ ಕೂಡಾ ಮತ್ತು ಪ್ರಮುಖವಾಗಿ ಬದಲಾದ ಇಂದಿನ ತಂತ್ರಜ್ಞಾನದ ವ್ಯವಸ್ಥೆಯ ನಡುವೆಯೂ ಕೂಡಾ ಇನ್ನೂ ಅದೇ ಪರಸ್ಥಿತಿಯಲ್ಲಿ ಅದೇ ವ್ಯವಸ್ಥೆಯಲ್ಲಿ ಅದೇ ಮಾದರಿಯಲ್ಲಿಯೇ ವರ್ಗಾವಣೆ ವ್ಯವಸ್ಥೆ ವೇಳಾಪಟ್ಟಿ ಇದೆ ಮಾಡುತ್ತಾರೆ ಎಂದರೆ ಇದ್ಯಾವ ಕಾನೂನು ಇದ್ಯಾವ ವೇಳಾಪಟ್ಟಿ ಸ್ವಾಮಿ.ಈ ಹಿಂದೆ ಒಂದು ವೇಳಾಪಟ್ಟಿಯ ಕುರಿತಂತೆ ಅವಲೋಕನ ಮಾಡಿದರೆ ಒಂದು ತಿಂಗಳ ಐದು ದಿನಗಳಲ್ಲಿ ಸಮಗ್ರ ಶಿಕ್ಷಕರ ವೇಳಾ ಪಟ್ಟಿಯನ್ನು ಅಂತಿಮ ಮಾಡಿ ವರ್ಗಾವಣೆಯನ್ನು ಮುಗಿಸಿದ್ದಾರೆ.
ಹೀಗಿರುವಾಗ ಈಗ ಯಾಕೇ ಮಾಡಲು ಸಾಧ್ಯವಿಲ್ಲ ಎಂಬ ಪ್ರಶ್ನೆಯನ್ನು ನಾಡಿನ ಶಿಕ್ಷಕರು ಕೇಳುತ್ತಿದ್ದಾರೆ. ಇಂತಹ ವ್ಯವಸ್ಥೆ ಉದಾಹರಣೆಯ ನಡುವೆ ಸಧ್ಯ ರೂಪಿಸಿರುವ ವರ್ಗವಣೆಯ ನೀತಿ ವ್ಯವಸ್ಥೆ ಸರಿನಾ ಹೀಗ್ಯಾಕೆ ಮಾಡಿದರು ಎಂಬ ಅನುಮಾನ ವೇಳಾ ಪಟ್ಟಿಯ ಹಿಂದೆ ಕಾಡುತ್ತಿದೆ.ಈ ಕುರಿತಂತೆ ಸಾಮಾನ್ಯ ಶಿಕ್ಷಕರು ಯಾರನ್ನು ಕೇಳಬೇಕು ಯಾರನ್ನು ಪ್ರಶ್ನೆ ಮಾಡಬೇಕು. ಇವರ ಧ್ವನಿಯಾಗಿರುವ ಶಿಕ್ಷಕರ ಸಂಘದ ನಾಯಕರು ಮೌನವಾಗಿದ್ದು ದುರಂತವೇ ಸರಿ.ಇವೆಲ್ಲದರ ನಡುವೆ ವರ್ಗಾವಣೆ ಆರಂಭವಾಗ ದಿದ್ದರೂ ಕೂಡಾ ಕೆಲವೊಂದಿಷ್ಟು ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದ್ದ ಒಂದು ಸುಧೀರ್ಘ ವರ್ಗಾವಣೆಯ ನೀತಿ ಮತ್ತೊಂದು ಸುದ್ದಿ ಗದ್ದಲವಿಲ್ಲದೇ ವರ್ಗಾವಣೆಯಾಗಿರುವ ಶಿಕ್ಷಕರ ಲಿಸ್ಟ್ ವಿರುದ್ದ ನಾಡಿನ ಶಿಕ್ಷಕರು ಬೇಸತ್ತಿದ್ದಾರೆ.
ಇನ್ನಾದರೂ ಸುದ್ದಿ ಸಂತೆ ದಾಖಲೆಯನ್ನು ನೀಡಿ ವರ್ಗಾವಣೆಯನ್ನು ಒಂದು ತಿಂಗಳಲ್ಲೂ ಕೂಡಾ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದು ಹೀಗೆ ಮಾಡಿ ವರ್ಗಾವಣೆಯ ನಿರೀಕ್ಷೆಯಲ್ಲಿರುವ ನಾಡಿನ ಶಿಕ್ಷಕರಿಗೆ ವರ್ಗಾವಣೆಯ ಭಾಗ್ಯ ನೀಡಲಿ ಎಂಬೊದು ನೊಂದುಕೊಂಡಿರುವ ನಾಡಿನ ಶಿಕ್ಷಕರ ಪರ ದ್ವನಿಯಾಗಿಯಾಗಿದ್ದು ಇದರ ನಿರೀಕ್ಷೆಯಲ್ಲಿ ನಾಡಿನ ಶಿಕ್ಷಕರಿದ್ದಾರೆ.