ಬೆಂಗಳೂರು –

ವರ್ಗಾವಣೆ ಅಂಬೋದು
ಮರುಭೂಮೀಲಿ ಬಾವಿ ಹುಡ್ಕಂಗಾಗೈತೆ.
ಕತ್ತಲೇಲಿ ಜಾಮೂನ್ ಬಟ್ಲು ತಡ್ವರ್ಸದಂಗಾಗೈತೆ.
ಅಂಗೂ ಇಂಗೂ ಅದಾದ್ರೂ
ಜಾತ್ರೇಲ್ ಕಳ್ಳೇ ಪುರಿ ಹಂಚದಂಗಾಗಿ
ಸಿಕ್ಕದೋರ್ಗೆ ಶೀರುಂಡೆ ಆದಂಗಾಗೈತೆ…
ಕಾದು ಕಾದು ಇನ್ನೇನ್ ರೈಟರ್ ದಿನ
ಬಂದಂಗಾಗೈತೆ…
ಹೆಂಗಾದ್ರೂ
ಬಾಯ್ ಬುಟ್ರೇ ಭಂಡ್ಗೇಡು
ಅನಂಗಾಗೈತೆ..
ಹಣೆ ಬರಹಕ್ಕೆ ಹೊಣೆ…ಹೊಣೆಗಾರಿಕೆ ಯಾರು ಅಲ್ವಾ ?
ಶಕೀಲ್ ಬಾಷಾ