ಧಾರವಾಡ –
ಕಳೆದ ಕೆಲವು ವಾರಗಳ ಹಿಂದೇಯಷ್ಟೇ ಅವಳಿ ನಗರ ಪೊಲೀಸ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆಸಿ, ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ ಈಗ ಮತ್ತೊಂದು ಸರ್ಜರಿಯನ್ನು ಮಾಡಿದೆ. ಹೌದು ಸಧ್ಯ ರಾಜ್ಯಾಧ್ಯಂತ 33 ಡಿವೈಎಸ್ಪಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶವನ್ನು ಮಾಡಿದೆ.
ಹುಬ್ಬಳ್ಳಿಯ ಉತ್ತರ ವಿಭಾಗಕ್ಕೆ ಎಸಿಪಿಯಾಗಿದ್ದ ಶಂಕರ ರಾಗಿ ಸ್ಥಳಕ್ಕೆ ವಿನೋದ ಮುಕ್ತೆದಾರ,
ಧಾರವಾಡ ಡಿವೈಎಸ್ಪಿ ರವಿ ಡಿ ನಾಯಕ್ ಜಾಗಕ್ಕೆ ಮಡಿವಾಳಪ್ಪ ಸಂಕದ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಇನ್ನೂ ನಿಂಗಪ್ಪ ಸಕ್ರಿ ಬೆಂಗಳೂರಿನ ಬಾಣಸವಾಡಿ ಉಪ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಅಲ್ಲದೆ ರಾಜ್ಯದಲ್ಲಿ ಒಟ್ಟು 33 ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಆದೇಶ ಹೊರಡಿಸಿದೆ. ಆದರೆ ಅವಳಿ ನಗರದ ಪೊಲೀಸ್ ಇಲಾಖೆಯಲ್ಲಿ ಈ ಹಿಂದೆ ನಡೆದ ಪೊಲೀಸ್ ಆಯುಕ್ತರ ಮತ್ತು ಡಿಸಿಪಿ ನಡುವಿನ ಪತ್ರ ಸಂಘರ್ಷದಿಂದ ಮಾಧ್ಯಕ್ಕೆ ಸುದ್ದಿಯಾಗಿದ್ದ ಪೊಲೀಸ್ ಇಲಾಖೆಗೆ ಆಗಾಗ್ಗೆ ರಾಜ್ಯ ಸರ್ಕಾರ ಬಿಸಿ ಮುಟ್ಟಿಸುತ್ತಿದೆ. ಈಗಾಗಲೇ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಕೆಲವೇ ದಿನಗಳ ಹಿಂದೆಯಷ್ಟೇ ಕೆ ರಾಮರಾಜನ್ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನೂ ಈ ಮೊದಲು ಹು-ಧಾ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಹಾಗೂ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಈ ಹಿಂದೆ ವರ್ಗಾವಣೆ ಮಾಡಲಾಗಿತ್ತು. ಈಗ ಅವಳಿ ನಗರದಲ್ಲಿ ಡಿಸಿಪಿಗಿಂತ ಕೆಳ ವರ್ಗದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.