ಮೈಸೂರು –
ಮೈಸೂರು ಜಿಲ್ಲೆಯ SP ಅಧಿಕಾರ ವಹಿಸಿಕೊಂಡ ಮಲ್ಲಿಕಾರ್ಜುನ ಬಾಲದಂಡಿ – ಮಂಡ್ಯದಿಂದ ಮೈಸೂರಿಗೆ ದಕ್ಷ ಪೊಲೀಸ್ ಅಧಿಕಾರಿಯ ವರ್ಗಾವಣೆ…..
ಮಂಡ್ಯ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಮಲ್ಲಿಕಾರ್ಜುನ ಬಾಲದಂಡಿಯವರನ್ನು ರಾಜ್ಯ ಸರ್ಕಾರ ಮೈಸೂರು ಜಿಲ್ಲಾ ಎಸ್ಪಿಯಾಗಿ ವರ್ಗಾವಣೆಗೊಳಿಸಿದೆ.ಹೌದು ದಕ್ಷ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿರುವ ಮಲ್ಲಿಕಾರ್ಜುನ ಬಾಲದಂಡಿಯವರನ್ನು ರಾಜ್ಯ ಸರ್ಕಾರ ಮೈಸೂರಿಗೆ ವರ್ಗಾವಣೆ ಗೊಳಿಸಿದೆ.
ಮಂಡ್ಯದಲ್ಲಿ ದಕ್ಷ ಪ್ರಾಮಾಣಿಕತೆಯ ಮೂಲಕ ಅಧಿಕಾರವನ್ನು ನಿರ್ವಹಿಸಿ ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿದ್ದ ಮಲ್ಲಿಕಾರ್ಜುನ ಬಾಲದಂಡಿಯವರನ್ನು ಮೈಸೂರಿಗೆ ವರ್ಗಾವಣೆ ಗೊಳಿಸಿ ಆದೇಶವನ್ನು ಮಾಡಿದೆ.ಅತ್ತ ರಾಜ್ಯ ಸರ್ಕಾರ ಆದೇಶ ವನ್ನು ಮಾಡುತ್ತಿದ್ದಂತೆ ಇತ್ತ ಮಲ್ಲಿಕಾರ್ಜುನ ಬಾಲದಂಡಿಯವರು ಮೈಸೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವನ್ನು ವಹಿಸಿಕೊಂಡಿದರು.
ಎಸ್ಪಿ ಕಚೇರಿಯಲ್ಲಿ ಅಧಿಕಾರವನ್ನು ವಹಿಸಿಕೊಳ್ಳಲು ಆಗಮಿಸಿದ ಇವರಿಗೆ ಕಚೇರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಸ್ವಾಗತ ಮಾಡಿಕೊಂಡರು ಇದೇ ವೇಳೆ ಹೊಸ ವರ್ಷದ ಶುಭಾಶಯವನ್ನು ಕೋರಿ ಅಭಿನಂದನೆ ಸಲ್ಲಿಸಿ ಬರಮಾಡಿಕೊಂಡರು.
ಸುದ್ದಿ ಸಂತೆ ನ್ಯೂಸ್ ಮೈಸೂರು…..



