ಬೆಂಗಳೂರು –
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿ ವರ್ಗಾವಣೆ ಮಾಡಿದೆ.
ಹೌದು ಕಳೆದ ಎರಡು ದಿನಗಳಿಂದ ಈ ಇಬ್ಬರು ಮಹಿಳಾ ಅಧಿಕಾರಿಗಳು ಜಟಾಜಟಿ ನಡೆಸಿದ್ದರು. ಹೀಗಾಗಿ ಈ ಇಬ್ಬರು ಮಹಿಳಾ ಅಧಿಕಾರಿಗಳ ಜಟಾಪಟಿಯಿಂದಾಗಿ ರಾಜ್ಯವೇ ತಲೆ ತಗ್ಗಿಸುವಂ ತಾಗಿತ್ತು.ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಇಬ್ಬರು ಮಹಿಳಾ ಅಧಿಕಾರಿಗಳ ತಲೆದಂಡವನ್ನು ತಗೆದುಕೊಂಡಿದೆ
ಇವರಿಬ್ಬರನ್ನು ಮೈಸೂರಿನಿಂದ ವರ್ಗಾವಣೆ ಮಾಡಿ ಆ ಮೂಲಕ ಗೊಂದಲಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದೆ.DC ರೋಹಿಣಿ ಸಿಂಧೂರಿ ಅವರ ಸ್ಥಾನಕ್ಕೆ ಮೈಸೂರು ಜಿಲ್ಲಾಧಿಕಾರಿಯಾಗಿ ಡಾ.ಬಗಡಿಗೌತಮ್ ಅವರನ್ನು ವರ್ಗಾವಣೆ ಮಾಡಲಾಗಿದೆ
ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತರಾಗಿದ್ದರು ಡಾ.ಗೌತಮ್.ಇನ್ನೂ ರೋಹಿಣಿ ಸಿಂಧೂರಿ ಅವರ ನ್ನು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿ ನಿಯೋ ಜನೆ ಮಾಡಲಾಗಿದೆ.ಇತ್ತ ಮೈಸೂರುಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಶಿಲ್ಪಾನಾಗ್ ಅವರನ್ನು RD&PR ಇಲಾಖೆಗೆ ವರ್ಗಾವಣೆ ಮಾಡಲಾಗಿ ದೆ.ಇವರ ಜಾಗಕ್ಕೆ ಲಕ್ಷ್ಮಿಕಾಂತ್ ರೆಡ್ಡಿ ಅವರನ್ನು ನೇಮಕ ಮಾಡಿ ಆದೇಶ ಮಾಡಲಾಗಿದೆ.ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಲಕ್ಷ್ಮೀಕಾಂತ ರೆಡ್ಡಿ.ಇಬ್ಬರನ್ನೂ ಎತ್ತಂಗಡಿ ಮಾಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದೆ ರಾಜ್ಯ ಸರ್ಕಾರ.ಇನ್ನೂ ಇವರೊಂದಿಗೆ IAS ಅಧಿಕಾರಿಗಳಾದ ಪಿ ರಾಜೇಂದ್ರ ಚೋಳನ್, ದಯಾನಂದ ಕೆ ಎ, ಇವರನ್ನು ಕೂಡಾ ವರ್ಗಾವಣೆ ಮಾಡಲಾಗಿದೆ.