This is the title of the web page
This is the title of the web page

Live Stream

[ytplayer id=’1198′]

November 2024
T F S S M T W
 123456
78910111213
14151617181920
21222324252627
282930  

| Latest Version 8.0.1 |

State News

ರಾಜ್ಯ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷರ ವರ್ಗಾವಣೆ – 7ನೇ ವೇತನ ಆಯೋಗದ ಅವಧಿ ವಿಸ್ತರಣೆ ಬೆನ್ನಲ್ಲೇ ವರ್ಗಾವಣೆ ಸಮಸ್ತ ಸರ್ಕಾರಿ ನೌಕರರಿಗಾಗಿ ದುಡಿಯುವ ನಾಯಕನನ್ನು ಉಳಿಸಿಕೊಳ್ಳೊನಾ ಎಂದ ನೌಕರರು…..

ರಾಜ್ಯ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷರ ವರ್ಗಾವಣೆ – 7ನೇ ವೇತನ ಆಯೋಗದ ಅವಧಿ ವಿಸ್ತರಣೆ ಬೆನ್ನಲ್ಲೇ ವರ್ಗಾವಣೆ ಸಮಸ್ತ ಸರ್ಕಾರಿ ನೌಕರರಿಗಾಗಿ ದುಡಿಯುವ ನಾಯಕನನ್ನು ಉಳಿಸಿಕೊಳ್ಳೊನಾ ಎಂದ ನೌಕರರು…..
WhatsApp Group Join Now
Telegram Group Join Now

ಬೆಂಗಳೂರು

ರಾಜ್ಯ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷರ ವರ್ಗಾವಣೆ – 7ನೇ ವೇತನ ಆಯೋಗದ ಅವಧಿ ವಿಸ್ತರಣೆ ಬೆನ್ನಲ್ಲೇ ವರ್ಗಾವಣೆ ಸಮಸ್ತ ಸರ್ಕಾರಿ ನೌಕರರಿಗಾಗಿ ದುಡಿಯುವ ನಾಯಕನನ್ನು ಉಳಿಸಿಕೊಳ್ಳೊನಾ ಎಂದ ನೌಕರರು

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ ಅವರನ್ನು ವರ್ಗಾವಣೆ ಮಾಡ ಲಾಗಿದೆ.ಹೌದು ಶಿವಮೊಗ್ಗ ಲೆಕ್ಕಪರಿಶೋಧಕ ಹುದ್ದೆಯಿಂದ ಕೋಲಾರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.ಇನ್ನೂ ಈ ಒಂದು ವರ್ಗಾವಣೆ ಆದೇಶ ಹೊರಬೀಳುತ್ತಿದ್ದಂತೆ ಇತ್ತ ಸಾಮಾಜಿಕ ಜಾಲ ತಾಣಗಳಲ್ಲಿ ರಾಜ್ಯಾಧ್ಯಕ್ಷರ ಪರವಾಗಿ ರಾಜ್ಯದ ಸರ್ಕಾರಿ ನೌಕರರು ಸಿಡಿದೆದ್ದಿದ್ದಾರೆ.

7ನೇ ವೇತನ ಆಯೋಗದ ಅವಧಿಯನ್ನು ವಿಸ್ತರಣೆ ಮಾಡಿದ ಬೆನ್ನಲ್ಲೇ ಇತ್ತ ರಾಜ್ಯಾಧ್ಯಕ್ಷ ರನ್ನು ವರ್ಗಾವಣೆ ಮಾಡಲಾಗಿದೆ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಧ್ವನಿಯಾಗಿ ಕೆಲಸ ಮಾಡುತ್ತಿರುವ ರಾಜ್ಯಾಧ್ಯಕ್ಷರನ್ನು ಉಳಿಸಿಕೊ ಳ್ಳುವ ಕೆಲಸವನ್ನು ನಾವೆಲ್ಲರೂ ಮಾಡೋಣಾ ಎಂಬ ಸಂದೇಶಗಳನ್ನು ಹಾಕುತ್ತಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿರವರು ಹಿಂದಿನ ಸರ್ಕಾರದ ಅವಧಿಯಲ್ಲಿ ಸರ್ಕಾರಿ ನೌಕರರ ಚರಿತ್ರೆಯಲ್ಲಿ ಮೊದಲ ಬಾರಿಗೆ ನಿಗದಿತ ಅವಧಿ ಒಳಗೆ ವೇತನ ಆಯೋಗವನ್ನು ರಚನೆ ಮಾಡಿಸಿ ಒಂದು ದಿನದ ಮುಷ್ಕರ ಮಾಡಿ ಶೇಕಡ 17% ಮಧ್ಯಂತರ ಪರಿಹಾರವನ್ನು ಮಾಡಿಸಿದ ಕೀರ್ತಿ ಷಡಾಕ್ಷರಿ ಅವರಿಗೆ ಸಲ್ಲುತ್ತದೆ.ದಿನಾಂಕ 4.11.2023 ರಂದು ವೇತನ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ನಿಗದಿತ ಅವಧಿ ಒಳಗೆ ವೇತನ ಆಯೋಗದ ವರದಿಯನ್ನು ಸಲ್ಲಿಸುವಂತೆ ಮನವಿ ಮಾಡಿರುತ್ತಾರೆ.

ಇದನ್ನು ರಾಜ್ಯದ ಸಮಸ್ತ ಸರ್ಕಾರಿ ನೌಕರರು ಗಮನಿಸಿದ್ದಾರೆ.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಾಮಾಣಿಕ, ಪಾರದರ್ಶಕ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಿ ರಾಜ್ಯ ಸಂಘದ ಕಟ್ಟಡದ ನವೀಕರಣವು ಸೇರಿದಂತೆ ಸಂಘದ ಖಾತೆಯ ಹಣವನ್ನು ಕಾಪಾಡಿರುವುದಲ್ಲದೆ. ಜಾತ್ಯಾತೀತ ನೆಲಗಟ್ಟಿನಲ್ಲಿ ಸಂಘಟನೆ ಕಟ್ಟಿದ ಮಹಾನ್ ನಾಯಕನ ವರ್ಗಾವಣೆ ಆಗಿರುವುದು ದುರದೃಷ್ಟಕರ. ವರ್ಗಾವಣೆ ಅವಧಿ ಇಲ್ಲದಿರುವ ಸಂದರ್ಭದಲ್ಲಿ ವರ್ಗಾವಣೆ ಆಗಿರುವುದನ್ನು ನೌಕರರು ಗಮನಿಸಬೇಕು

ಏಳನೇ ವೇತನ ಆಯೋಗದ ಅವಧಿ ವಿಸ್ತರಣೆ ಯ ಬೆನ್ನಲ್ಲೇ ಮುಷ್ಕರ ಕರೆಯಬಹುದು ಎನ್ನುವ ಕಾರಣಕ್ಕೆ ಕೆಲವರು ವ್ಯಕ್ತಿತ್ವವನ್ನು ಹೆಚ್ಚಿಸಿಕೊ ಳ್ಳುವ ಪ್ರಯತ್ನವನ್ನು ಕೂಡಾ ಮಾಡಿರಬಹುದು ಅಥವಾ ಮುಖ್ಯಮಂತ್ರಿಗಳ ಗಮನಕ್ಕೆ ಬರದೆ ಆಗಿರಬಹುದು ಅದೇನೇ ಇದ್ದರೂ ಪ್ರಾಮಾಣಿಕ ನಾಯಕನನ್ನು ಉಳಿಸಿಕೊಳ್ಳುವ ಮತ್ತು ಮುಂದಿನ ದಿನಗಳಲ್ಲಿ ಸಂಘಟನೆಗಳ ನಾಯ ಕತ್ವಕ್ಕೆ ಹೊಸಭಾಷ್ಯ ಬರೆಯುವ ಕಾಯಕಕ್ಕೆ ನಾವು ನೀವೆಲ್ಲರೂ ಸೇರಿ ಒಮ್ಮತದ ನಿರ್ಣಯ ತೆಗೆದುಕೊಳ್ಳೋಣ.

ಅದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ ಎಂಬ ಮಾತುಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಹೇಳುತ್ತಿ ದ್ದಾರೆ. ಸಮಸ್ತ ಸರ್ಕಾರಿ ನೌಕರರಿಗಾಗಿ ದುಡಿ ಯುವ ನಾಯಕನನ್ನು ಉಳಿಸಿಕೊಳ್ಳಲು ಜೈ ಅನ್ನೋಣ ಎನ್ನುತ್ತಿದ್ದು ಏನೇನು ಆಗಲಿದೆ ಎಂಬೊದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk