ಬೆಂಗಳೂರು –
ಶಿಕ್ಷಕರಿಗೆ ರಾಜ್ಯದಲ್ಲಿ ಸಧ್ಯ ದೊಡ್ಡ ತಲೆನೋವಾಗಿ ರೊದು ಶಿಕ್ಷಕರ ವರ್ಗಾವಣೆ ವಿಚಾರ. ಅವೈಜ್ಞಾನಿಕ ಈ ಒಂದು ಶಿಕ್ಷಕರ ವರ್ಗಾವಣೆ ವಿರುದ್ಧ ಕೆಲವೊಂ ದಿಷ್ಟು ಶಿಕ್ಷಕರು ಸೇರಿಕೊಂಡು ಹೋರಾಟದ ರೂಪರೇಷೆಗಳನ್ನು ಹುಟ್ಟು ಹಾಕಿದ್ದಾರೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಈ ಒಂದು ಹೋರಾಟ ವನ್ನು ಮಾಡಲು ಮುಂದಾಗಿದ್ದು ಇನ್ನೂ ಬೆಂಗಳೂರು ಚಲೋ ಈ ಒಂದು ಹೋರಾಟದಲ್ಲಿ ಪಾಲ್ಗೊಳ್ಳುವ ಶಿಕ್ಷಕರ ಕುರಿತು ಮಾಹಿತಿಯನ್ನು ನೊಂದಣಿ ಮಾಡಿಕೊಳ್ಳಲು ಒಂದು ವೆಬ್ ನಲ್ಲಿ ಅವಕಾಶ ನೀಡಲಾಗಿದೆ. ಇಷ್ಟೊಂದು ಮಾಡಿದ ನಂತರ ಈವರೆಗೆ ಹೋರಾಟಕ್ಕೆ ಹೆಸರನ್ನು ನೊಂದಣಿ ಮಾಡಿಕೊಂಡಿದ್ದು ಕೆಲವೇ ಕೆಲವು ಶಿಕ್ಷಕರು ಮಾತ್ರ.
ಹೌದು ಈ ಒಂದು ನೊಂದಣಿ ಕಾರ್ಯದಲ್ಲಿ ಈವರೆಗೆ 368 ಶಿಕ್ಷಕ ಬಂಧುಗಳು ತಮ್ಮ ಮಾಹಿತಿ ಯನ್ನು ನೊಂದು ಮಾಡಿಕೊಂಡಿದ್ದಾರೆ. ಬೆರಳೆಣಿಕೆ ಯಷ್ಟು ನಿರುತ್ಸಾಹದಿಂದ ಪಾಲ್ಗೊಂಡ ಶಿಕ್ಷಕರ ನಡೆಯಿಂದಾಗಿ ಹೋರಾಟದ ಯೋಜನೆ ಹಾಕಿಕೊಂಡ ಶಿಕ್ಷಕರು ಅಸಮಾಧಾನಗೊಂಡಿದ್ದಾರೆ. ವರ್ಗಾವಣೆ ಬೇಕಾಗಿರುವುದು ಇಷ್ಟೇ ಶಿಕ್ಷಕರಿಗಾ….. ಇದರಲ್ಲಿ ಬೆಂಗಳೂರಿಗೆ ಬರುವವರೂ ಅದು ಇದು ಅಂತ ಕಾರಣ ಹೇಳಿ ತಪ್ಪಿಸುವವರು ಇರುತ್ತಾರೆ ಕೊನೆಗೆ ಬೆಂಗಳೂರಿಗೆ ಬರುವುದು 150 ರಿಂದ 200 ಜನ ಮಾತ್ರ ಅದಕ್ಕೆ ಹೇಳೋದು ನಮ್ಮಿಂದ ಹೋರಾಟ ಬಹಳ ಕಷ್ಟ.ಅದಕ್ಕೆ ಸಂಘದ ಪದಾಧಿಕಾರಿಗಳು ನಾವ್ ಇಷ್ಟೆಲ್ಲಾ ಹೋರಾಟಕ್ಕೆ ಉಪದೇಶ ತಯಾರಿಸಿದರು ಕ್ಯಾರೆ ಎನ್ನುತ್ತಿಲ್ಲ ಕಾರಣ ಶೇಕಡಾ 25 ತಾಲೂಕಿನ ಶಿಕ್ಷಕರು ನಮ್ಮ ವರ್ಗಾವಣೆ ಹಕ್ಕಿಗಾಗಿ ಹೋರಾಡುತ್ತಿಲ್ಲ. ನಾವು ನಾಲ್ಕು ದಿನಗಳಿಂದ ಬೆಂಗಳೂರಿಗೆ ಬರುವವರ ಪಟ್ಟಿ ತಯಾರಿಸಲು ಲಿಂಕ್ ಬಿಟ್ಟಿದ್ದರೆ ಕೇವಲ 348 ಜನ ಮಾತ್ರ ನೋಂದಣಿ ಮಾಡಿಸಿಕೊಂಡಿದ್ದಾರೆ. ವರ್ಗಾವಣೆ ಬೇಕಾಗಿರುವುದು ಸುಮಾರು 5000 ಶಿಕ್ಷಕರಿಗೆ. ಇಂಥವರು ಕಟ್ಟಿಕೊಂಡು ಹೋರಾಟ ಹೇಗೆ ಮಾಡೋದು ಎಂದು ಹೋರಾಟದ ಪ್ಲಾನ್ ಮಾಡಿದ ಶಿಕ್ಷಕರಿಂದ ಕೇಳಿ ಬರುತ್ತಿದೆ.ಹೀಗಾಗಿ ಇದನ್ನೇಲ್ಲ ನೋಡಿದರೆ ಇದೇನಾ ವರ್ಗಾವಣೆಯ ವಿಚಾರದಲ್ಲಿ ನಾಡಿನ ಶಿಕ್ಷಕರ ಒಗ್ಗಟ್ಟಿನ ಪ್ರಶ್ನೆ