5 ಲಕ್ಷ ರೂಪಾಯಿ ಲಂಚದ ಆರೋಪ ಇನ್ಸ್ಪೆಕ್ಟರ್ ಸೇರಿ ಮೂವರು ಪೊಲೀಸರ ವರ್ಗಾವಣೆ

Suddi Sante Desk

ಬೆಂಗಳೂರು –

ಕಾಳಸಂತೆಯಲ್ಲಿ ರೆಮ್ಡಿಸಿವಿಯರ್ ಔಷಧಿ ಮಾರಾಟ ಜಾಲ ಪ್ರಕರಣದ ಹೆಸರಿನಲ್ಲಿ ವೈದ್ಯರನ್ನು ಬೆದರಿಸಿ 5 ಲಕ್ಷ ರೂ. ವಸೂಲು ಮಾಡಿದ ಆರೋಪದಲ್ಲಿ ಇನ್ಸ್ಪೆಕ್ಟರ್ ಸೇರಿ ಮೂವರು ಪೊಲೀಸ್ ಸಿಬ್ಬಂದಿ ಗಳನ್ನು ವರ್ಗಾವಣೆ ಮಾಡಿದ ಘಟನೆ ಬೆಂಗಳೂರಿ ನಲ್ಲಿ ನಡೆದಿದೆ‌‌.ನಗರದ ಸಂಜಯನಗರ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಹಾಗೂ ಮೂವರು ಪೊಲೀ ಸ್ ಸಿಬ್ಬಂದಿಯನ್ನು ಎತ್ತಂಗಡಿ ಮಾಡಲಾಗಿದೆ.

ಹೌದು ರೆಮ್ಡಿಸಿವಿಯರ್ ಇಂಜೆಕ್ಷನ್‌ ಅನ್ನು ಕಾಳಸಂ ತೆಯಲ್ಲಿ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿದ್ದ ಪೊಲೀಸರು ವಿಚಾರಣೆ ನೆಪ ದಲ್ಲಿ ವೈದ್ಯರನ್ನು ಠಾಣೆಗೆ ಕರೆಸಿ ಥಳಿಸಿದ್ದರು. ಅಲ್ಲ ದೇ ಪ್ರಕರಣದಿಂದ ಕೈಬಿಡಲು 5 ಲಕ್ಷ ರೂ. ಲಂಚ ಪಡೆದಿದ್ದರಂತೆ‌.ವೈದ್ಯ ಡಾ.ನಾಗರಾಜ್ ಅವರನನ್ನು ವಿಚಾರಣೆ ನೆಪದಲ್ಲಿ ಥಳಿಸಿ 5 ಲಕ್ಷ ರೂ. ವಸೂಲು ಮಾಡಿದ್ದಾರೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ಈ ಬಗ್ಗೆ ದೂರು ನೀಡಿದ್ದರು.ವೈದ್ಯರ ಮೇಲೆ ಹಲ್ಲೆ ನಡೆಸಿರುವ ಫೋಟೋ ಹಾಗೂ ಡಾಕ್ಟರ್ ಮಾತಾಡಿ ರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರ ಲ್ ಆಗಿದೆ.

ಈ ಬಗ್ಗೆ ಉತ್ತರ ವಿಭಾಗ ಡಿಸಿಪಿಗೂ ದೂರು ನೀಡ ಲಾಗಿತ್ತು.ದೂರು ದಾಖಲಾಗ್ತಿದ್ದಂತೆ ಸಂಜಯನಗರ ಇನ್ಸ್ಪೆಕ್ಟರ್ ಕಾತ್ಯಾಯಿನಿ ಮತ್ತು ಮೂವರು ಪೊಲೀ ಸ್ ಸಿಬ್ಬಂದಿಯನ್ನು ಎತ್ತಂಗಡಿ ಮಾಡಲಾಗಿದೆ. ಎಸಿಪಿ ರೀನಾ ಸುವರ್ಣ ಅವರಿಗೆ ತನಿಖೆ ಉಸ್ತುವಾ ರಿ ನೀಡಲಾಗಿದ್ದು ತನಿಖೆ ಮುಕ್ತಾಯವಾಗುವರೆಗೂ ಇನ್ ಸ್ಪೆಕ್ಟರ್ ಕಾತ್ಯಾಯಿನಿ ಮತ್ತು ಪೊಲೀಸ್ ಸಿಬ್ಬಂ ದಿಗೆ ಡಿಸಿಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಆದೇಶ ಹೊರಡಿಸಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.