ಡ್ರೈವಿಂಗ್ ಲೈಸೆನ್ಸ್ ಪಡೆಯಲು ಮತ್ತಷ್ಟು ಸರಳಗೊಳಿಸಿದ ಸಾರಿಗೆ ಇಲಾಖೆ – ಕುಳಿತಲ್ಲಿಯೇ ಸರಳವಾಗಿ ಅರ್ಜಿ ಸಲ್ಲಿಸಿ ಲೈಸೆನ್ಸ್ ಹೇಗೆ ಪಡೆಯೊದು ಅಂತಾ ನೋಡಿ…..

Suddi Sante Desk
ಡ್ರೈವಿಂಗ್ ಲೈಸೆನ್ಸ್ ಪಡೆಯಲು ಮತ್ತಷ್ಟು ಸರಳಗೊಳಿಸಿದ ಸಾರಿಗೆ ಇಲಾಖೆ – ಕುಳಿತಲ್ಲಿಯೇ ಸರಳವಾಗಿ ಅರ್ಜಿ ಸಲ್ಲಿಸಿ  ಲೈಸೆನ್ಸ್ ಹೇಗೆ ಪಡೆಯೊದು ಅಂತಾ ನೋಡಿ…..

ಬೆಂಗಳೂರು

ಸಾಮಾನ್ಯವಾಗಿ ಡ್ರೈವಿಂಗ್ ಲೈಸೆನ್ಸ್ ಪಡೆಯೊದು ಅಂದರೆ ಸರಳ ಸುಲಭದ ಮಾತಲ್ಲ.ಅರ್ಜಿ ಸಲ್ಲಿಸಿ ಲೈಸೆನ್ಸ್ ಪಡೆಯೊದು ದೊಡ್ಡ ಹರಸಾಹಸದ ಮಾತೇ ಸರಿ.ಬದಲಾದ ವ್ಯವಸ್ಥೆಯ ನಡುವೆ ಈ ಒಂದು ವ್ಯವಸ್ಥೆಯನ್ನು ಸಾರಿಗೆ ಇಲಾಖೆ ಈಗ ಮತ್ತಷ್ಟು ಸರಳಗೊಳಿಸಿ ಜನಸ್ನೇಹಿ ಯನ್ನಾಗಿ ಮಾಡಿದೆ.ಹೌದುಇದುವರೆಗೆ ಡ್ರೈವಿಂಗ್ ಲೈಸೆನ್ಸ್  ಸೇರಿದಂತೆ ಸಾರಿಗೆ ಇಲಾಖೆಯ ಅನೇಕ ಸೇವೆ ಗಳನ್ನು ಕಚೇರಿಗೆ ತೆರಳಿಯೇ ಪಡೆಯಬೇಕಿತ್ತು.

ನಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಅಲ್ಲೇ ಇಲ್ಲೇ ಸುತ್ತಾಡಿ ಸುತ್ತಾಡಿ ಬೇಸತ್ತು  ಬಿಟ್ಟು ಸಾರಿಗೆ ಇಲಾಖೆಯ ಕಚೇರಿಗೆ ತೆರಳಿ ಸರದಿ ಸಾಲಿನಲ್ಲಿ ನಿಂತುಕೊಂಡು ದಾಖಲೆಗಳನ್ನು ಪಡೆಯಬೇಕಿತ್ತು. ಆದರೆ ಇದೀಗ ಈ ಕ್ರಮಕ್ಕೆ ತಿಲಾಂಜಲಿಯನ್ನು ಸಾರಿಗೆ ಇಲಾಖೆ ನೀಡಿದೆ.ಇನ್ಮುಂದೆ ನೀವು ಕುಳಿತಿ ರೋ ಸ್ಥಳದಿಂದಲೇ ಆನ್ ಲೈನ್ ನಲ್ಲಿಯೇ ಅರ್ಜಿ ಹಾಕಿ ಈ  ಮೂಲಕ ಕೆಲ ಸಾರಿಗೆ ಸೇವೆಗಳನ್ನು ಪಡೆಯಬಹುದಾಗಿದೆ.

ಹೌದು ಸಾರಿಗೆ ಇಲಾಖೆಗೆ ಸಂಬಂಧಿಸಿದ ಅನೇಕ ಸೇವೆಗಳನ್ನು ಈಗ ಅನ್ ಲೈನ್ ಮೂಲಕ ಪಡೆ ಯಲು ಅವಕಾಶ ಮಾಡಿಕೊಡಲಾಗಿದೆ.ಡ್ರೈವಿಂಗ್ ಲೈಸೆನ್ಸ್ ಸಂಬಂಧಿತ ಅನೇಕ ಸೇವೆಗಳು ಸಂಪರ್ಕ ರಹಿತವಾಗಿ ಸಾರಿಗೆ ಇಲಾಖೆ ಜಾಲತಾಣದ ಮೂಲಕ ಆನ್ ಲೈನ್ ನಲ್ಲಿಯೇ ಅಪ್ಲೈ ಮಾಡಿ ಪಡೆಯಬಹುದಾಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ವು ಡ್ರೈವಿಂಗ್ ಲೈಸೆನ್ಸ್ ಪಡೆಯುವ ನಿಯಮ ಗಳಿಗೆ ತಿದ್ದುಪಡಿ ತಂದಿದ್ದು ಹೊಸ ನಿಯಮಗ ಳನ್ನು 1 ಜುಲೈ 2022 ರಿಂದ ಜಾರಿಗೆ ತರಲಾಗಿ ದ್ದು, ಇನ್ಮುಂದೆ ಡ್ರೈವಿಂಗ್ ಲೈಸೆನ್ಸ್ ನವೀಕರಣ, ನಕಲು ಪ್ರತಿ, ವಿಳಾಸ ಬದಲಾವಣೆ, ಹೆಸರು ಬದಲಾವಣೆ ಸೇರಿದಂತೆ ಇತರೆ ಸಾರಿಗೆ ಸೇವೆಗ ಳನ್ನು ಸಂಪರ್ಕ ರಹಿತವಾಗಿ https://sarathi.parivahan.gov.in/sarathiservice ಭೇಟಿ ನೀಡಿ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡು ಡಿ.ಎಲ್ ಪಡೆಯ ಬಹುದು ನಂತರ ಮತ್ತೆ ಯಾವುದಾದರೂ ದಾಖಲೆಗಳು ಬೇಕಾದರೆ ತಿದ್ದಪಡಿ ಇದ್ದರೆ ಸರಿಪಡಿಸಬಹುದು ಎಂದು ತಿಳಿಸಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.