ಸಾರಿಗೆ ನೌಕರ ಆತ್ಮಹತ್ಯೆ – ಆತ್ಮಹತ್ಯೆಗೆ ಯತ್ನಿಸಿದ್ದ ಚಾಲಕ ಚಿಕಿತ್ಸೆ ಫಲಿಸದೇ ಸಾವು…..

Suddi Sante Desk

ಬಾಗಲಕೋಟೆ –

ರಾಜ್ಯದಲ್ಲಿ ಮತ್ತೊಬ್ಬ ಸಾರಿಗೆ ನೌಕರರೊಬ್ಬರು ಆತ್ಮಹ ತ್ಯೆಗೆ ಶರಣಾಗಿದ್ದಾರೆ. ಹೌದು ಸಾಲಬಾಧೆಯಿಂದ ಬೇಸತ್ತ ಸಾರಿಗೆ ನೌಕರನೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.ಹೌದು ಒಂದು ಕಡೆ ನಿಗದಿತ ಸಮಯಕ್ಕೆ ಬಾರದ ವೇತನ ಮತ್ತೊಂದು ಕಡೆಗೆ ಸಾಲಗಾರರ ಕಾಟ ಹೀಗಾಗಿ ಸಾಲಬಾಧೆಯಿಂದ ಕಂಗಾ ಲಾಗಿ ವಿಷ ಸೇವಿಸಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಚಿಕಿತ್ಸೆ ಫಲಿಸದೆ ಸಾವಪ್ಪಿದ್ದಾನೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ನಿವಾಸಿ ಭರಮಪ್ಪ ಗೊಂದಿ (45) ಮೃತ ದುರ್ದೈವಿಯಾಗಿದ್ದಾರೆ.ಬಾದಾಮಿ ಡಿಪೋದಲ್ಲಿ ಚಾಲಕ ಕಂ ನಿರ್ವಾಹಕನಾಗಿ ಸೇವೆ ಸಲ್ಲಿಸುತ್ತಿದ್ದ ಭರಮಪ್ಪ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರು.ಕರೊನಾ ವೇಳೆಯಲ್ಲಿ ಸರಿಯಾಗಿ ವೇತನ ಆಗಿರಲಿಲ್ಲ.ಸದ್ಯ ಕೆ.ಎಸ್.ಆರ್.ಟಿ.ಸಿ. ವೇತನ ಪ್ರತಿ ತಿಂಗಳೂ ಎರಡು ಕಂತುಗಳಲ್ಲಿ ಅರ್ಧದಂತೆ ಬರುತ್ತಿದ್ದರೂ ವೇತನ ಕುಟುಂಬ ನಿರ್ವಹಣೆಗೂ ಸಾಲುತ್ತಿ ರಲಿಲ್ಲ.

ಅದರ ಮೇಲೆ ಸಾಲ ತೀರಿಸುವ ಚಿಂತೆಯಿಂದ ಮನನೊಂ ದು ಅಕ್ಟೋಬರ್ 30ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಭರಮಪ್ಪನನ್ನು ಕೂಡಲೇ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಆಸ್ಪತ್ರೆಯಲ್ಲೇ ಸಾವಪ್ಪಿದ್ದಾರೆ. ಮೃತ ಸಾರಿಗೆ ಸಂಸ್ಥೆ ನೌಕರ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.