This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ಶಿಕ್ಷಕರನ್ನು ಗೌರವಯುತವಾಗಿ ನೋಡಿಕೊಳ್ಳಿ ಎಲ್ಲಾ ಕೆಲಸ ಕಾರ್ಯಗಳು ಆನ್ ಲೈನ್ ನಲ್ಲಿಯೇ ಆಗಲಿ – ರಾಜ್ಯಾದ್ಯಂತ ಜೋರಾಗುತ್ತಿದೆ ಶಿಕ್ಷಕರ ಕೂಗು…..

WhatsApp Group Join Now
Telegram Group Join Now

ಬೆಂಗಳೂರು –

ಮಾನ್ಯ ಮುಖ್ಯ ಮಂತ್ರಿಗಳೇ, ಶಿಕ್ಷಣ ಸಚಿವರೇ, ಸರಕಾರದ ಮುಖ್ಯ ಕಾರ್ಯದರ್ಶಿಗಳೇ, ಶಿಕ್ಷಣ ಇಲಾಖೆಯ ಕಾರ್ಯದ ರ್ಶಿಗಳೇ,ಆಯುಕ್ತರೇ,ಶಿಕ್ಷಕರುಗಳನ್ನು ಕ್ಷೇತ್ರಶಿಕ್ಷಣಾಧಿ ಕಛೇರಿ ಮತ್ತು ಉಪನಿರ್ದೇಶಕರ ಕಛೇರಿಗಳಲ್ಲಿ ಗೌರವ ಯುತವಾಗಿ ನೋಡಿಕೊಳ್ಳುವಂತೆ ಮತ್ತು ಶಿಕ್ಷಕರ ಎಲ್ಲಾ ಕೆಲಸಗಳನ್ನು ಆನ್ ಲೈನ್ ಮೂಲಕವೇ ದೊರಕುವಂತೆ ಆದೇಶ ಮಾಡುವ ಬಗ್ಗೆ.

ನಾಗರಿಕತೆಯ ಕಾಲದಿಂದಲೂ ಶಿಕ್ಷಕರಾಗಿ ಕೆಲಸ ಮಾಡು ವವರಿಗೆ ಸಮಾಜದಲ್ಲಿ ಗೌರವದ ಸ್ಥಾನವಿದೆ ಆದರೆ ಈಗಿನ ಶಿಕ್ಷಣ ಇಲಾಖೆಯ ಕಛೇರಿಗಳಲ್ಲಿ ಅವರಿಗೆ ಸಿಗಬೇಕಾದ ಗೌರವವನ್ನು ಕೊಡುತ್ತಿಲ್ಲ. ಹೆಚ್ಚಾಗಿ ಆಗಾಗ ತಮ್ಮ ಎಲ್ಲಾ ಕೆಲಸಗಳಿಗಾಗಿ ಕ್ಷೇತ್ರಶಿಕ್ಷಣಾಧಿಕಾರಿ ಕಛೇರಿಗೆ ಮತ್ತು ಉಪನಿರ್ದೇಶಕರ ಕಛೇರಿಗೆ ಹೋಗಬೇಕಾಗಿರುವುದು ಸಾಮಾನ್ಯ. ನಮ್ಮ ರಾಜ್ಯದ ಎಲ್ಲಾ ಜಿಲ್ಲೆಯ ಕ್ಷೇತ್ರ ಶಿಕ್ಷಣಾ ಧಿಕಾರಿ ಕಛೇರಿ ಮತ್ತು ಉಪನಿರ್ದೇಶಕರ ಕಛೇರಿಗಳಲ್ಲಿ ತಮ್ಮದೇ ಇಲಾಖೆಯ ತಮ್ಮ ಕೆಲಸಕ್ಕಾಗಿ ಬಂದರೆ ಕುಳಿತು ಕೊಳ್ಳಲು ಕುರ್ಚಿಗಳನ್ನು ಹಾಕುವ ಸೌಜನ್ಯವೂ ಇಲಾಖೆಗೆ ಇಲ್ಲ. ಹೊರಗೆ ಅಪರಿಚಿತನಂತೆ ಇಲ್ಲವೇ ಭಯದಿಂದ ಅಪ ರಾಧಿಯಂತೆ ನಿಂತುಕೊಂಡು ಕಾಯಬೇಕು. ಕೇತ್ರಶಿಕ್ಷ ಣಾಧಿಕಾರಿಗಳ ಮತ್ತು ಉಪನಿರ್ದೇಶಕರ ಕಛೇರಿ ಕೋಣೆ ಯ ಒಳಗೆ ಹೋದರೆ ಕುಳಿತುಕೊಳ್ಳಲು ಹೇಳಿ ಮಾತನಾ ಡಿಸುವ ಕ್ರಮವನ್ನು ಇಲ್ಲಿಯವರೆಗೆ ರಾಜ್ಯದ ಯಾವುದೇ ಶಿಕ್ಷಣ ಇಲಾಖೆಯ ಕಛೇರಿಗಳಲ್ಲಿ ಅನುಸರಿಸುತ್ತಿಲ್ಲ.

ಆದಲ್ಲದೆ ಕಛೇರಿಗಳಲ್ಲಿರುವ ಇತರ ಸಿಬ್ಬಂದಿಗಳು ಕಛೇರಿ ಅಧೀಕ್ಷಕರಿಂದ ಹಿಡಿದು ಡಿ ದರ್ಜೆ ನೌಕರರು ಶಿಕ್ಷಕರು ಹೋದಾಗ ಗೌರವ ಕೊಡುವ ರೂಢಿಯೇ ಇಲ್ಲ.ಅಲ್ಲಿ ಹಾಕಲಾಗಿರುವ ಕುರ್ಚಿಗಳಲ್ಲಿ ಆರಾಮವಾಗಿ ಕುಳಿತಿ ರುತ್ತಾರೆ.ಬಂದ ಶಿಕ್ಷಕರು ಅವರ ವಿಭಾಗಕ್ಕೆ ಸಂಬಂಧಿಸಿದ ಕ್ಲರ್ಕ್ ಇಲ್ಲವೇ ಅಟೆಂಡರ್ ಇಲ್ಲವೇ ಡಿ ದರ್ಜೆ ನೌಕರನ ಮುಂದೆ ನಿಂತುಕೊಂಡೇ ಎಲ್ಲಾ ಕೆಲಸವನ್ನು ಮಾಡಬೇಕು ಅವರ ಮೇಜು ಕುರ್ಚಿಗಳ ಮುಂದೆ ಶಿಕ್ಷಕರಿಗಾಗಿ ಕುಳಿತು ಕೊಳ್ಳಲು ಕುರ್ಚಿಗಳನ್ನು ಹಾಕದೆ ಕೂಲಿ ಕೆಲಸದವನಂತೆ ನಡೆಸಿಕೊಳ್ಳುವ ರೀತಿ ಬಹಳ ಖೇದಕರವಾಗಿದೆ.

ಆದಲ್ಲದೆ ಈ ಕಛೇರಿಗಳಲ್ಲಿ ಶೌಚಾಲಯದ ಬಾಗಿಲ ಮೇಲೆ ಕಛೇರಿ ಸಿಬ್ಬಂದಿಗೆ ಮಾತ್ರ ಎಂದು ನಾಮಫಲಕ ಹಾಕಿರು ತ್ತಾರೆ.ಹಾಗಾದರೆ ಅಲ್ಲಿಗೆ ತಮ್ಮ ಕೆಲಸಕ್ಕಾಗಿ ಹೋಗುವ ಶಿಕ್ಷಕರು ಯಾವ ಶೌಚಾಲಯವನ್ನು ಬಳಸಬೇಕು.

ಇದಲ್ಲದೆ ಶಿಕ್ಷಕರಿಗೆ ಆಗತ್ಯವಿರುವ ದಾಖಲೆಗಳು ಇತರ ಅರ್ಜಿಗಳ ವಿಲೇವಾರಿಗಳನ್ನು ಸರಿಯಾದ ಸಮಯಕ್ಕೆ ನೀಡದೆ ಅನೇಕ ಸಲ ಕಛೇರಿಗೆ ಅಲೆದಾಡುವಂತೆ ಮಾಡುತ್ತಿರುವುದು ಸಾಮಾನ್ಯವಾಗಿ ಶಿಕ್ಷಕರು ಶಾಲೆ ಸಮಯದಲ್ಲಿ ತಮ್ಮ ಬೋಧನಾ ಕೆಲಸ ಬಿಟ್ಟು ಆಗಾಗ ಕಛೇರಿಗೆ ಅಲೆದಾಡುವಂತೆ ಅವಕಾಶ ಮಾಡಿಕೊಟ್ಟು ಶಿಕ್ಷಕರು ಬೇಕಾಬಿಟ್ಟಿ ತಿರುಗಾಡುವ ಮತ್ತು ಇತರ ಭ್ರಷ್ಟ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಕೆಟ್ಟ ವ್ಯವಸ್ಥೆ ಬಂದಿರುವು ದು ಇಂತಹ ಅಗೌರವಯುತವಾಗಿ ನಡೆದುಕೊಳ್ಳುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಉಪನಿರ್ದೇಶರುಗಳ ಕಛೇರಿ ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದಾಗಿ.

ಅದಲ್ಲದೆ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಉಪನಿರ್ದೇಶಕರ ಕಛೇರಿಗಳಲ್ಲಿ ಆ ಕಛೇರಿಗಳಿಗೆ ಸಂಬಂಧ ಪಡದ ಹುದ್ದೆಗ ಳಾದ ದೈಹಿಕ ಪರಿವೀಕ್ಷಣಾಧಿಕಾರಿ ಇ.ಸಿ ಒ.ಗಳು. ವಿಷಯ ಪರಿವೀಕ್ಷಕರು ಇತರ ಕೆಲವು ಹುದ್ದೆಗಳಿಗೆ ಪ್ರತ್ಯೇಕ ವಿಭಾಗ ಗಳು ಮತ್ತು ಕಛೇರಿ ಕಟ್ಟಡ ಇಲ್ಲವೇ ಶಾಲಾ ಕಾಲೇಜುಗ ಳಲ್ಲಿ ವ್ಯವಸ್ಥೆಗಳಿದ್ದರೂ ಬಿ.ಇ.ಒ.ಇಲ್ಲವೇ ಉಪನಿರ್ದೇ ಶಕರ ಕಛೇರಿಯಲ್ಲಿಯೇ ಒಂದು ಕಡೆ ಕುರ್ಚಿ ಮೇಜು ಹಾಕಿ ಕುಳಿತುಕೊಂಡು ತಮ್ಮ ಕೆಲಸಗಳನ್ನು ಮಾಡುವ ಬದಲು ಕೇತ್ರ ಶಿಕ್ಷಣಾಧಿಕಾರಿಗಳ ಹಿಂದೆ ಹೋಗುವ ಇಲ್ಲವೇ ಇತರ ಅನಗತ್ಯ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ.ಇದಲ್ಲದೆ ಅಲ್ಲಿಯ ಸಿಬ್ಬಂದಿ ಮತ್ತು ಡಯೆಟ್ ಸಿಬ್ಬಂದಿ, ಬಿ.ಅರ್.ಸಿ ಯ ಬಿ.ಅರ್.ಪಿ ಗಳು.ಸಿ.ಅರ್..ಪಿ ಗಳು ಮತ್ತು ಸಮನ್ವ ಯಾಧಿಕಾರಿಗಳನ್ನು ಮತ್ತು ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕರು ಇಲ್ಲವೇ ಇತರ ಶಿಕ್ಷಕರನ್ನು ಕ್ಷೇತ್ರಶಿಕ್ಷಣಾ ಧಿಕಾರಿ ಇಲ್ಲವೇ ಉಪನಿರ್ದೇಶಕರ ಕಛೇರಿ ಕೆಲಸಕ್ಕೆ ಮತ್ತು ಶಾಲಾ ವಿಚಾರಕ್ಕೆ ಸಂಬಂಧ ಪಡದಿದ್ದರೂ ಅವರನ್ನು ಬಳಸಿಕೊಂಡು ಶಿಕ್ಷಕರನ್ನು ಅಗೌರವದಿಂದ ನಡೆಸಿಕೊಳ್ಳು ವುದು ಅನೇಕ ವರ್ಷಗಳಿಂದ ನಡೆಯುತ್ತಲೇ ಬಂದಿದೆ.

ಸಮಾಜದಲ್ಲಿ ಶಿಕ್ಷಕರಿಗೆ ಅತ್ಯುನ್ನತ ಸ್ಥಾನ ಪುರಾಣ ವೇದ ಗಳ ಕಾಲದಿಂದಲೇ ಇದೆ. ಯಾಕೆಂದರೆ ಶಿಕ್ಷಕರು ಸಾಕಷ್ಟು ಜ್ಞಾನಿಗಳಾಗಿದ್ದರು ಮತ್ತು ಬೋಧನೆಯನ್ನು ಮಾತ್ರ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಇಂದು ಈ ಶಿಕ್ಷಣ ಇಲಾಖೆಯ ಅಶಿಸ್ತಿನ ಮತ್ತು ಆಗೌರವ ತೊರುವ ರೀತಿ ಶಿಕ್ಷಕರನ್ನು ಸಂಬಳ ಪಡೆಯುವ ಕಾರಕೂ ನನಂತೆ ನಡೆಸಿಕೊಳ್ಳುವ ವ್ಯವಸ್ಥೆಗೆ ತಂದು ನಿಲ್ಲಿಸಿದೆ.

ಇದನ್ನು ತಮ್ಮಿಂದ ಸರಿಪಡಿಸಲು ಸಾಧ್ಯವಿದೆ.ಪ್ರತಿ ತಾಲೂ ಕಿನ ಬಿ.ಇ.ಒ.ಕಛೇರಿ ಮತ್ತು ಜಿಲ್ಲೆಯ ಡಿಡಿಪಿಐ ಕಛೇರಿ ಗಳಲ್ಲಿ ಶಿಕ್ಷಕರನ್ನು ಗೌರಯುತವಾಗಿ ನಡೆಸಿಕೊಳ್ಳುವಂತೆ ವ್ಯವಸ್ಥೆ ಮಾಡಲು ಆದೇಶ ಮಾಡುವುದು. ಮತ್ತು ಶಿಕ್ಷಕರ ಕಛೇರಿ ಅಲೆದಾಟ ತಪ್ಸಿಸಿ ಶಿಕ್ಷಕರು ಬೋಧನಾ ಸಮಯ ದಲ್ಲಿ ಹೊರಹೋಗದಂತೆ ಮಾಡಲು ಬಿ.ಇ.ಒಕಛೇರಿ ಮತ್ತು ಉಪನಿರ್ದೇಶಕರ ಕಛೇರಿಯ ಎಲ್ಲಾ ಕೆಲಸಗಳಿಗೆ ಆನ್ ಲೈನ್ ವ್ಯವಸ್ಥೆ ಅಳವಡಿಸಿಕೊಂಡು ಶಿಕ್ಷಕರು ಕಡ್ಡಾಯವಾಗಿ ಆನ್ಲೈನ್ ಮೂಲಕವೇ ಕಛೇರಿ ವ್ಯವಹಾರ ಮಾಡುವಂತೆ ಅದು ಸಂಬಂಧಿಸಿದ ಕಛೇರಿಗಳಿಂದ ದೊರಕುವಂತೆ ಮಾಡುವ ವ್ಯವಸ್ಥೆಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶವನ್ನು ತಕ್ಷಣವೇ ಹೊರಡಿಸಬೇಕು.

ಇತಿಹಾಸದ ಯಾವುದೇ ಪುಟಗಳನ್ನು ತೆರೆದರೂ ಶಿಕ್ಷಕರಿಗೆ ಅತ್ಯುನ್ನತ ಗೌರವದ ಸ್ಥಾನವನ್ನು ನೀಡಿರುವ ದೇಶ ಭಾರತ ಎಂಬುದಕ್ಕೆ ಸಾಕಷ್ಟು ಉಲ್ಲೇಖಗಳಿವೆ.ಇಂತಹ ನೈತಿಕ ಮೌಲ್ಯವುಳ್ಳ ದೇಶದ ಪ್ರಜೆಗಳಾದ ನಾವು ಪ್ರಜ್ಞಾವಂತ ನಾಗರಿಕರಾಗಿ ಶಿಕ್ಷಕ ಮತ್ತು ಶಿಕ್ಷಣದ ಅಗತ್ಯತೆ ಇಡೀ ದೇಶದ ಪ್ರಗತಿ ಇಲ್ಲವೇ ಅವನತಿಯನ್ನು ನಿರ್ಧರಿಸುತ್ತದೆ ಎಂಬುದನ್ನು ಅರಿತವರಾಗಿದ್ದೇವೆ. ಹಾಗಾಗಿ ಶಿಕ್ಷಣ ಇಲಾಖೆ ಗಳಲ್ಲಿ ಶಿಕ್ಷಕರಿಗೆ ಅತ್ಯುತ್ತಮ ಗೌರವ ಸಿಗುವಂತೆ ಮಾಡುವುದು.ನಾಡಿನ ಜನರ ಒಳಿತಿಗಾಗಿ ಕೆಲಸಮಾಡುವ ತಮ್ಮೆಲ್ಲರ ಕರ್ತವ್ಯವಾಗಿದೆ. ಮತ್ತು ತಾವು ಈ ಸ್ಥಾನದಲ್ಲಿ ರಲು ನಿಮ್ಮ ಶಿಕ್ಷಕರ ಪಾತ್ರ ಬಹಳಷ್ಟಿದೆ ಶಿಕ್ಷಕರ ಅಭ್ಯಧ ಯದಿಂದ ಮಾತ್ರ ಶಾಲೆ ಮತ್ತು ಮಕ್ಕಳ ಉನ್ನತ ಬೆಳವಣಿಗೆ ಸಾಧ್ಯ ತಾವುಗಳು ಈ ಬಗ್ಗೆ ಕೂಡಲೇ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶ ಹೊರಡಿಸಬೇಕಾಗಿ ಈ ಮೂಲಕ ನನ್ನ ಪ್ರೀತಿಯ ವಿನಂತಿ.

ಇಂತಿ
ರಮೇಶ್ ಬೆಟ್ಟಯ್ಯ.


Google News

 

 

WhatsApp Group Join Now
Telegram Group Join Now
Suddi Sante Desk