ವಿಜಯಪುರ –

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಐಶ್ವರ್ಯ ಕನಸೆ ಅವರನ್ನು ವಿಜಯಪುರದಲ್ಲಿ ಜಿಲ್ಲಾ ಶಿಕ್ಷಕರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ವಿಜಯಪುರ ಜಿಲ್ಲಾ ಶಿಕ್ಷಕರ ಸಂಘದ ವತಿಯಿಂದ ಈ ಒಂದು ಸನ್ಮಾನ ಮಾಡಲಾಯಿತು.ವಿದ್ಯಾರ್ಥಿಯೊಬ್ಬಳು ಸರ್ಕಾರಿ ಪ್ರಾಥ ಮಿಕ ಶಾಲಾ ಶಿಕ್ಷಕರ ಮಗಳಾಗಿದ್ದು ವಿಶೇಷ ಸಾಧನೆ ಮಾಡಿದ ಬಾಲಕಿಯನ್ನು ಜಿಲ್ಲಾ ಶಿಕ್ಷಕರು ಸನ್ಮಾನಿಸಿ ಗೌರವಿಸಿದರು.

ವಿದ್ಯಾರ್ಥಿನಿಯ ನಿವಾಸಕ್ಕೆ ತೆರಳಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ಬೊಳಸೂರ ನೇತ್ರತ್ವದಲ್ಲಿ ತೆರಳಿದ ಶಿಕ್ಷಕರ ಟೀಮ್ ಪ್ರೀತಿಯಿಂದ ಗೌರವಿಸಿ ಸನ್ಮಾನಿಸಿದರು. ವಿಜಯಪುರ ಗ್ರಾಮೀಣ ವಲಯದ ಮಾಜಿ ಅಧ್ಯಕ್ಷರಾದ ಎಮ್ ಎಸ್ ಭೂಸಗೋಳ,ಮಾಜಿ ಪ್ರಧಾನ ಕಾರ್ಯದರ್ಶಿ ಹೆಚ್ ಕೆ ಬೂದಿಹಾಳ,ಜಿಲ್ಲಾ ದ್ರಾಕ್ಷಿ ಬೆಳಗಾರರ ಸಂಘದ ಅಧ್ಯಕ್ಷ ಲೇಪು ಕೊಣ್ಣೂರ,ಇದಲ್ಲದೇ ಶಿಕ್ಷಕರಾದ ಆರ್ ಎಮ್ ಪಾಟೀಲ,ಸಂತೋಷ ಕುಲಕರ್ಣಿ,ಎಸ್ ಎಸ್ ಪಟ್ಟಣಶೆಟ್ಟಿ,ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ವಿದ್ಯಾರ್ಥಿನಿಯ ಪೋಷಕರಿಗೂ ಶುಭ ಹಾರೈಸಿ ವಿದ್ಯಾರ್ಥಿನಿಯ ಕಲಿಕೆಗೆ ಅದರಲ್ಲೂ ಮುಂದಿನ ಶಿಕ್ಷಣಕ್ಕೆ ಸಂಘವು ಸದಾ ಬೆಂಬಲ ಇರೋದಾಗಿ ಹೇಳಿದರು. ಇದ ರೊಂದಿಗೆ ವಿಜಯಪುರ ಶಿಕ್ಷಕರ ಸಂಘವು ಮಾದರಿ ಕಾರ್ಯವನ್ನು ಮಾಡಿದರು