ಹುಬ್ಬಳ್ಳಿ –
ಸೇವೆಯಿಂದ ನಿವೃತ್ತಿ ಹೊಂದಿದ ಹುಬ್ಬಳ್ಳಿ ಧಾರವಾಡ ಪಾಲಿಕೆಯ ಅಧಿಕಾರಿ ಗೆ ಸನ್ಮಾನ ಗೌರವ – ಆಯುಕ್ತರ ಡಾ ಈಶ್ವರ ಉಳ್ಳಾಗಡ್ಡಿ ಅವರ ನೇತೃತ್ವದಲ್ಲಿ ಸನ್ಮಾನ ಗೌರವ ಹೌದು
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ 10ರಲ್ಲಿ ವಲಯ ಸಹಾಯಕ ಅಧಿಕಾರಿಯಾಗಿ ಕಾರ್ಯನಿರ್ವಸುತ್ತಿದ್ದ ಬಸವರಾಜ ಲಮಾಣಿ ಇವರು ಸೇವೆಯಿಂದ ನಿವೃತ್ತಿ ಹೊಂದಿದರು
ಇವರನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ಸಭಾಭವನದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು ಈ ಸಮಯ ದಲ್ಲಿ ಇವರನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತರಾದ ಡಾ ಈಶ್ವರ ಉಳ್ಳಾಗಡ್ಡಿ ಯವರು ಇಂತಹ ಅಧಿಕಾರಿ ಮಹಾನಗರ ಪಾಲಿಕೆಗೆ ತುಂಬಾ ಅವಶ್ಯಕತೆ ಇದೆ
ತುಂಬಾ ಒಳ್ಳೆಯ ರೀತಿಯಲ್ಲಿ ನೀಡಿದಂತಹ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿದ್ದ ಒಳ್ಳೆಯ ನಿಷ್ಠಾವಂತ ಅಧಿಕಾರಿಯಾ ಗಿದ್ದರು.ಸಾರ್ವಜನಿಕರಿಂದ ಹಾಗೂ ಪಾಲಿಕೆಯ ಸಿಬ್ಬಂದಿಗಳಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಹಾಗೂ ಘನ ತ್ಯಾಜ್ಯ ವಸ್ತು ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ರರಾದ ಮಲ್ಲಿಕಾರ್ಜುನ ಮಾತನಾಡಿ ಲಮಾನಿ ಯವರ ಕಾರ್ಯವೈಖರಿಯನ್ನು ಶ್ಲಾಘಿಸಿದರು, ಮುಖ್ಯ ವೈದ್ಯಾಧಿಕಾರಿ ಡಾ ದಂಡಪ್ಪನವರ ಮಾತನಾಡಿ ಲಮಾನಿಯವರ ಕೆಲವಷ್ಟು ವಿಷಯಗಳನ್ನು ಪ್ರಸ್ತಾಪಿಸಿ ಹಳೆಯ ನೆನಪು ಗಳನ್ನು ಮೆಲುಕು ಹಾಕಿದರು.
ವಿಜಯ ಕುಮಾರ್ ಮಾತನಾಡಿ ಇಂತಹ ಅಧಿಕಾರಿ ಮಹಾನಗರ ಪಾಲಿಕೆಗೆ ಸಿಗುವುದು ತುಂಬಾ ಕಷ್ಟ ಎಂದು ಹೇಳಿದ ಇವರು ಲಮಾನಿ ಯವರ ಜೊತೆ ಇದ್ದ ಉತ್ತಮ ಬಾಂಧವ್ಯ ನೆನೆದು ಭಾವುಕರಾದರು .ಹಾಗೂ ವಿಠಲ್ ತುಬಾಕೆ ಯವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು
ಅದೇ ರೀತಿ ವಲಯ ಸಹಾಯಕ ಆಯುಕ್ತರಾದ ಎಸ್ ಸಿ ಬೇವೂರರವರು ಸ್ವಾಗತ ಭಾಷಣ ಮಾಡಿ ತನ್ನ ಸಹಪಾಠಿಯ ಕಾರ್ಯವೈಖರಿ ಯನ್ನು ಕೊಂಡಾಡಿದರು.ಈ ಸಂದರ್ಬದಲ್ಲಿ ಉಪ ಆಯುಕ್ತರು ಆಡಳಿತ ಈರಣ್ಣ ಬಿರಾದಾರ, ಮುಖ್ಯ ವೈದ್ಯಾಧಿಕಾರಿ ಶ್ರೀಧರ ದಂಡಪ್ಪನವರ ,
ಕಾ.ನಿ.ಅ (,ಈ) ವಿಠಲ್ ತುಬಾಕೆ ,ಕಾ.ನಿ.ಅ(ದ) ವಿಜಯಕುಮಾರ ಆರ್,SWM ಮಲ್ಲಿಕಾರ್ಜುನ ವಲಯ ಸಹಾಯಕ ಆಯುಕ್ತರು ಹಾಗೂ ಪಾಲಿಕೆ ಯ ಅಧಿಕಾರಿ,ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……